ಕರ್ನಾಟಕ

karnataka

By

Published : Aug 3, 2022, 10:52 AM IST

ETV Bharat / bharat

ಕೌಟುಂಬಿಕ ಕಲಹಕ್ಕೆ ವರದಕ್ಷಿಣೆ ಕಿರುಕುಳದಡಿ ಶಿಕ್ಷೆ ವಿಧಿಸಿದ ಪೊಲೀಸ್​ ಅಧಿಕಾರಿಗೆ ₹1 ಲಕ್ಷ ದಂಡ

ಕೌಟುಂಬಿಕ ಜಗಳವನ್ನು ವರದಕ್ಷಿಣೆ ಕಿರುಕುಳ ಎಂದು ಮಾರ್ಪಡಿಸಿ ವಿಚಾರಣೆ ನಡೆಸಿದ್ದ ಪೊಲೀಸ್​ ಅಧಿಕಾರಿಗೆ ಮಾನವ ಹಕ್ಕುಗಳ ಆಯೋಗ 1 ಲಕ್ಷ ರೂಪಾಯಿ ದಂಡ ವಿಧಿಸಿದೆ.

Etv Bharatpolice officer got penalty to conducted wrong inquiry
Etv Bharatಅಧಿಕಾರಿಗೆ ₹1 ಲಕ್ಷ ದಂಡ

ಕೊಯಮತ್ತೂರು(ತಮಿಳುನಾಡು):ಸಾಮಾನ್ಯ ಕೌಟುಂಬಿಕ ಸಮಸ್ಯೆಯನ್ನು ವರದಕ್ಷಿಣೆ ಪ್ರಕರಣವನ್ನಾಗಿ ಪರಿವರ್ತಿಸಿ ವ್ಯಕ್ತಿಯೊಬ್ಬನಿಗೆ 5 ದಿನ ಜೈಲು ಶಿಕ್ಷೆ ವಿಧಿಸಿದ್ದ ಪೊಲೀಸ್ ಅಧಿಕಾರಿಗೆ ಮಾನವ ಹಕ್ಕುಗಳ ಆಯೋಗ ತಕ್ಕಶಾಸ್ತಿ ಮಾಡಿದೆ. ಸಂತ್ರಸ್ತ ವ್ಯಕ್ತಿಗೆ ಮಾನಸಿಕ ಯಾತನೆ ನೀಡಿದ ಕಾರಣಕ್ಕಾಗಿ ಅಧಿಕಾರಿಗೆ 1 ಲಕ್ಷ ರೂಪಾಯಿ ದಂಡ ವಿಧಿಸಿ ಪರಿಹಾರವಾಗಿ ನೀಡಲು ಸೂಚಿಸಿದೆ.

ತಮಿಳುನಾಡು ಕೊಯಮತ್ತೂರಿನ ವಿಜಯಕುಮಾರ್ ದೂರು ನೀಡಿದವರು. ದೂರುದಾರರು ಸಿರುಮುಗೈ ಎಸ್‌ಆರ್‌ಎಸ್ ಪಟ್ಟಣದ ನಿವಾಸಿಯಾಗಿದ್ದಾರೆ. ಇಂಜಿನಿಯರ್ ಆಗಿರುವ ವಿಜಯ್​ಕುಮಾರ್​ ವಿದೇಶದಲ್ಲೂ ಕೆಲಸ ಮಾಡಿದ್ದಾರೆ.

ವಿಜಯ್​ಕುಮಾರ್​ ಮತ್ತು ಪತ್ನಿ ಮಧ್ಯೆ ಸಹಜ ಕಲಹಗಳು ಉಂಟಾಗುತ್ತಿದ್ದವು. ಈ ಬಗ್ಗೆ ಅವರು ಮಹಿಳಾ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಈ ವೇಳೆ ವಿಜಯ್​ಕುಮಾರ್​ ಅವರನ್ನು ಠಾಣೆಯ ಪೊಲೀಸ್​ ಅಧಿಕಾರಿ ಮೀನಾಂಬಿಕಾಯಿ ಅವರು ವಿಚಾರಣೆ ನಡೆಸಿದ್ದಾರೆ. ಬಳಿಕ ಇದನ್ನು ವರದಕ್ಷಿಣೆ ಕಿರುಕುಳ ಎಂದು ಪರಿಗಣಿಸಿ ಎಫ್​ಐಆರ್​ ದಾಖಲಿಸಿ ಜೈಲಿಗಟ್ಟಿದ್ದಾರೆ.

5 ದಿನಗಳ ಶಿಕ್ಷೆಯ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಪೊಲೀಸ್​ ಅಧಿಕಾರಿಯ ನಿರ್ಧಾರದ ವಿರುದ್ಧ ಸಿಡಿದೆದ್ದ ವಿಜಯಕುಮಾರ್​, ಕೌಟುಂಬಿಕ ಕಲಹವನ್ನು ವರದಕ್ಷಿಣೆ ಕಿರುಕುಳ ಕಾಯ್ದೆಯಡಿ ವಿಚಾರಣೆ ನಡೆಸಿ ತಮ್ಮನ್ನು ಹಿಂಸಿಸಲಾಗಿದೆ ಎಂದು ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ.

ಈ ಬಗ್ಗೆ ವಿಚಾರಣೆ ನಡೆಸಿದ ಆಯೋಗ ಪೊಲೀಸ್ ಅಧಿಕಾರಿಯು ತಪ್ಪು ಎಸಗಿರುವುದನ್ನು ಕಂಡುಕೊಂಡಿದೆ. ಸರಿಯಾಗಿ ವಿಚಾರಣೆ ನಡೆಸದೇ ದೂರುದಾರರಿಗೆ ಜೈಲು ಶಿಕ್ಷೆ ವಿಧಿಸಿದ್ದಕ್ಕಾಗಿ 1 ಲಕ್ಷ ದಂಡ ವಿಧಿಸಿದೆ. ಅದನ್ನು ಪರಿಹಾರವಾಗಿ ದೂರುದಾರರಿಗೆ ನೀಡಬೇಕು. 4 ವಾರದಲ್ಲಿ ಇದನ್ನು ಪಾವತಿಸಬೇಕು ಎಂದು ಆದೇಶಿಸಿದೆ.

ಓದಿ:ಪಿಎಂ ಮೋದಿ, ಸಿಎಂ ಯೋಗಿ ವಿರುದ್ಧ ಕಾಮೆಂಟ್: ಇನ್ಸ್‌ಪೆಕ್ಟರ್​​ಗೆ ಕಡ್ಡಾಯ ನಿವೃತ್ತಿ

ABOUT THE AUTHOR

...view details