ಕರ್ನಾಟಕ

karnataka

ETV Bharat / bharat

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಆನ್‌ಲೈನ್ ಟಿಕೆಟ್ ಬಿಡುಗಡೆ ಮಾಡಿದ ಟಿಟಿಡಿ.. ಅರ್ಧಗಂಟೆಯಲ್ಲೇ ಖಾಲಿ

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಆನ್‌ಲೈನ್ ಟಿಕೆಟ್ ಬಿಡುಗಡೆ ಮಾಡಿದ್ದು, ಕೇವಲ ಅರ್ಧ ಗಂಟೆಯಲ್ಲೆ ಟಿಕೆಟ್​ ಖಾಲಿಯಾಗಿದೆ. ಬುಕಿಂಗ್​ ಮಾಡಲು ಸಾಧ್ಯವಾಗದ ಜನರು ಯಾವುದೇ ಪೂರ್ವ ಪ್ರಕಟಣೆಯಿಲ್ಲದೇ ಟಿಟಿಡಿ ಆನ್‌ಲೈನ್ ಟಿಕೆಟ್ ಬಿಡುಗಡೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಆನ್‌ಲೈನ್ ಟಿಕೆಟ್
ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಆನ್‌ಲೈನ್ ಟಿಕೆಟ್

By

Published : Sep 25, 2021, 11:51 AM IST

ತಿರುಮಲ (ಆಂಧ್ರಪ್ರದೇಶ): ತಿರುಮಲದ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ದೇವಾಲಯದ ಆಡಳಿತ ಮಂಡಳಿಯಾದ 'ತಿರುಮಲ ತಿರುಪತಿ ದೇವಸ್ಥಾನಂ' (ಟಿಟಿಡಿ) ಆನ್‌ಲೈನ್ ಟಿಕೆಟ್ ಬಿಡುಗಡೆ ಮಾಡಿದ್ದು, ಉತ್ತಮ ಪ್ರತಿಕ್ರಿಯೆ ದೊರೆತಿದೆ.

ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 31 ರವರೆಗೆ ತಿಮ್ಮಪನ ವಿಶೇಷ ದರ್ಶನಕ್ಕಾಗಿ ನಿನ್ನೆ ಬೆಳಗ್ಗೆ 9 ಗಂಟೆಗೆ ಆನ್‌ಲೈನ್ ಟಿಕೆಟ್ ಬಿಡುಗಡೆ ಮಾಡಲಾಗಿತ್ತು. ಟಿಕೆಟ್​ಗೆ 300 ರೂಪಾಯಿ ನಿಗದಿಪಡಿಸಲಾಗಿದೆ. ಕೇವಲ ಅರ್ಧ ಗಂಟೆಯಲ್ಲಿ 2.4 ಲಕ್ಷ ಜನರು ಬುಕ್​ ಮಾಡಿದ್ದು, ಟಿಕೆಟ್​ ಖಾಲಿಯಾಗಿದೆ.

ಈ ವರ್ಷದ ಏಪ್ರಿಲ್​-ಮೇ ತಿಂಗಳಲ್ಲಿ ಕೋವಿಡ್​ ಎರಡನೇ ಅಲೆ ಅಬ್ಬರಿಸಿದ ಪರಿಣಾಮ ತಿರುಪತಿಗೆ ಭಕ್ತರ ಪ್ರವೇಶ ನಿಷೇಧಿಸಲಾಗಿತ್ತು. ಐದು ತಿಂಗಳುಗಳ ಬಳಿಕ ಶ್ರೀವಾರಿಯ ದರ್ಶನಕ್ಕಾಗಿ (ಸರ್ವದರ್ಶನ) ಉಚಿತ ಟಿಕೆಟ್​ ನೀಡಲು ಟಿಟಿಡಿ ಆರಂಭಿಸಿತ್ತು. ಉಚಿತ ಟಿಕೆಟ್​ ಪಡೆಯಲು ಮುಂಜಾನೆ 6 ಗಂಟೆಗೆ ಬಂದು ಭಕ್ತರು ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದರು. ದಿನಕ್ಕೆ 2,000 ಟಿಕೆಟ್‌ಗಳನ್ನು ನೀಡುತ್ತಿದ್ದ ಟಿಟಿಡಿ ಭಕ್ತರ ಸಂಖ್ಯೆ ಹೆಚ್ಚಾದಂತೆ ಬಳಿಕ ಇದನ್ನು 8,000ಕ್ಕೆ ಹೆಚ್ಚಿಸಿತ್ತು.

ಇದನ್ನೂ ಓದಿ: ತಿರುಮಲ ತಿರುಪತಿ ದೇವಸ್ಥಾನಕ್ಕೆ 81 ಸದಸ್ಯರ ’ಜಂಬೂ‘ ಮಂಡಳಿ ರಚನೆ

ಆದರೆ, ದಿನದಿನಕ್ಕೂ ದೇಶದ ವಿವಿಧ ರಾಜ್ಯಗಳಿಂದ ಬರುವ ಭಕ್ತರ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಿದ್ದು, ಕೊರೊನಾ ನಿಯಮಗಳು ಪಾಲಿಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಜನಸಂದಣಿ ನಿಯಂತ್ರಿಸಲು ಮುನ್ನೆಚ್ಚರಿಕಾ ಕ್ರಮವಾಗಿ ಟಿಟಿಡಿ ಸರ್ವದರ್ಶನ ಟಿಕೆಟ್​ ಕೌಂಟರ್​ ಮುಚ್ಚಿ, ಆನ್‌ಲೈನ್ ಟಿಕೆಟ್ ಬಿಡುಗಡೆ ಮಾಡುವ ನಿರ್ಧಾರ ತೆಗೆದುಕೊಂಡಿತ್ತು. ಆದರೆ, ಆನ್‌ಲೈನ್ ಟಿಕೆಟ್ ಬಿಡುಗಡೆ ಮಾಡಿದ ಅರ್ಧ ಗಂಟೆಯಲ್ಲೇ ಟಿಕೆಟ್​ ಖಾಲಿಯಾಗಿದ್ದು, ಬುಕಿಂಗ್​ ಮಾಡಲು ಸಾಧ್ಯವಾಗದ ಜನರು ಯಾವುದೇ ಪೂರ್ವ ಪ್ರಕಟಣೆಯಿಲ್ಲದೆ ಟಿಟಿಡಿ ಆನ್‌ಲೈನ್ ಟಿಕೆಟ್ ಬಿಡುಗಡೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details