ಕರ್ನಾಟಕ

karnataka

ETV Bharat / bharat

ವಿಭಿನ್ನ ರೀತಿಯಲ್ಲಿ ಮಾತನಾಡುವ ಭಗವದ್ಗೀತೆ ಪುಸ್ತಕ ತಯಾರಿಕೆ: ಬಿಡುಗಡೆ

ಈ ಭಗವದ್ಗೀತೆ ಹಿಂದಿ, ಇಂಗ್ಲಿಷ್ ಮತ್ತು ಸಂಸ್ಕೃತದಲ್ಲಿದೆ. ಸಂಪೂರ್ಣ ಹನುಮಾನ್ ಚಾಲೀಸ್ ಪುಸ್ತಕ ತೆಲುಗು, ಹಿಂದಿ, ಇಂಗ್ಲಿಷ್, ಅಸ್ಸೋಂ, ನೇಪಾಳಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಆಡಿಯೋ ತಯಾರಿಸಲಾಗಿದೆ.

TTD Chairman launches Tirumala speaking books!!
ಮಾತನಾಡುವ ಭಗವದ್ಗೀತೆ ಪುಸ್ತಕ ತಯಾರಿಕೆ

By

Published : Nov 20, 2020, 2:33 PM IST

ತಿರುಪತಿ: ನವದೆಹಲಿ ಮೂಲದ ಹಯೋಮಾ ಸಂಸ್ಥೆ ವಿಭಿನ್ನವಾಗಿ ಭಗವದ್ಗೀತೆ ಪುಸ್ತಕ ತಯಾರಿಸಿದ್ದು, ಈ ಪುಸ್ತಕವನ್ನ ತಿರುಮಲ ತಿರುಪತಿ ದೇವಸ್ಥಾನದ ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ ಬಿಡುಗಡೆ ಮಾಡಿದರು. ಈ ಪುಸ್ತಕಗಳಲ್ಲಿ ಎಲೆಕ್ಟ್ರಾನಿಕ್ ಸೆಲ್ ಫೋನ್ ಇಡಲಾಗಿದ್ದು, ಈ ಉಪಕರಣವನ್ನು, ಈ ಪುಸ್ತಕದ ಅಕ್ಷರಗಳ ಮೇಲೆ ಇರಿಸಿದಾಗ, ಆಡಿಯೋ ರೂಪದಲ್ಲಿ ಈ ಪುಸ್ತಕದಲ್ಲಿ ಇರುವ ಪದ್ಯಗಳ ಅರ್ಥಗಳನ್ನು ಕೇಳಬಹುದಾಗಿದೆ.

ಮಾತನಾಡುವ ಭಗವದ್ಗೀತೆ ಪುಸ್ತಕ ತಯಾರಿಕೆ

ಈ ಭಗವದ್ಗೀತೆ ಹಿಂದಿ, ಇಂಗ್ಲಿಷ್ ಮತ್ತು ಸಂಸ್ಕೃತದಲ್ಲಿದೆ. ಸಂಪೂರ್ಣ ಹನುಮಾನ್ ಚಾಲೀಸ್ ಪುಸ್ತಕ ತೆಲುಗು, ಹಿಂದಿ, ಇಂಗ್ಲಿಷ್, ಅಸ್ಸೋಂ, ನೇಪಾಳಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಆಡಿಯೋ ತಯಾರಿಸಲಾಗಿದೆ. ನಮ್ಮ ಬಯಕೆಯ ಭಾಷೆಯನ್ನು ಆಯ್ಕೆ ಮಾಡಲು ಮತ್ತು ಕೇಳಲು ಇದನ್ನು ವಿನ್ಯಾಸಗೊಳಿಸಲಾಗಿದೆ.

'ಸೇಫ್ ಶಾಪ್ ಆನ್‌ಲೈನ್' ಸಂಸ್ಥೆ ಇವುಗಳನ್ನು ಮಾರಾಟ ಮಾಡುತ್ತಿದೆ. ಅನಕ್ಷರಸ್ತರು ಮತ್ತು ವೃದ್ಧರು ಇವುಗಳಿಂದ ಸುಲಭವಾಗಿ ವಿಷಯಗಳನ್ನು ಕಲಿಯಬಹುದು ಎಂದು ಸಂಘಟನೆಯ ಪ್ರತಿನಿಧಿಗಳು ತಿಳಿಸಿದ್ದಾರೆ.

ABOUT THE AUTHOR

...view details