ಹೈದರಾಬಾದ್ (ತೆಲಂಗಾಣ): ಬುಡಕಟ್ಟು ಸಮುದಾಯ ವಾಸವಿದ್ದ ಬಳಿ ಗಿಡ ನೆಡಲು ಹೊಂಡ ತೆಗೆಯಲು ತೆರಳಿದ್ದ ಅರಣ್ಯ ಸಿಬ್ಬಂದಿ ಮೇಲೆ ಬುಡಕಟ್ಟು ಜನಾಂಗದವರು ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಇಲ್ಲಿನ ಭದ್ರಾಡ್ರಿಯ ಕೊಟ್ಟಗುಡೆಮ್ ಜಿಲ್ಲೆಯಲ್ಲಿ ಪಾಳುಭೂಮಿಯಲ್ಲಿ ಗಿಡನೆಡಲು, ಹೊಂಡಗಳನ್ನ ತೆಗೆಯಲು ಬಂದಿದ್ದ ಸಿಬ್ಬಂದಿಯನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ.
ಗಿಡನೆಡಲು ಬಂದ ಅರಣ್ಯ ಇಲಾಖೆ ಸಿಬ್ಬಂದಿಯನ್ನೇ ಮರಕ್ಕೆ ಕಟ್ಟಿ ಥಳಿಸಿದ ಬುಡಕಟ್ಟು ಮಂದಿ ನಮ್ಮ ಜಮೀನಿನಲ್ಲಿ ಗಿಡಗಳನ್ನು ನೆಡಲು ಬಿಡುವುದಿಲ್ಲ ಎಂದು ಬುಡಕಟ್ಟು ಮಂದಿ ಪಟ್ಟು ಹಿಡಿದಿದ್ದಾರೆ. ಹೀಗಾಗಿ ಅರಣ್ಯ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆದಿದ್ದು, ಬಳಿಕ ಕೋಲುಗಳಿಂದ ಇಬ್ಬರು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ.
ಈ ಭೂಮಿ ಪಾಳು ಬಿದ್ದಿಲ್ಲ ನಾವು ಕೃಷಿ ಮಾಡುತ್ತಿದ್ದೇವೆ ಎಂಬುದು ಬುಡಕಟ್ಟು ಜನಾಂಗದ ವಾದವಾಗಿದೆ.