ಪಾಲಕ್ಕಾಡ್,ಕೇರಳ :ಭಾರತೀಯ ಸೇನೆಯು 46 ಗಂಟೆಗಳ ರಕ್ಷಣಾ ಕಾರ್ಯಾಚರಣೆಯ ನಂತರ ಕೇರಳದ ಪಾಲಕ್ಕಾಡ್ನ ಪರ್ವತವೊಂದರಿಂದ ರಕ್ಷಿಸಲ್ಪಟ್ಟ ಟ್ರೆಕ್ಕರ್ ಬಾಬು ಪಾಲಕ್ಕಾಡ್ ಜಿಲ್ಲಾಸ್ಪತ್ರೆಯಿಂದ ಬಿಡುಗಡೆಯಾಗಿದ್ದಾನೆ. ಬಾಬು ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಗಾಯಗಳೂ ವಾಸಿಯಾಗಿವೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಮೃಣ್ಮಯಿ ಜೋಶಿ, ಜಿಲ್ಲಾ ಪೊಲೀಸ್ ವರಿಷ್ಠ ಆರ್ ವಿಶ್ವನಾಥ್, ಡಿಎಂಒ ಕೆಪಿ ರೀಟಾ, ಬಾಬು ಅವರ ಕುಟುಂಬ, ಸ್ನೇಹಿತರು ಕೂಡ ಬಾಬು ಬಿಡುಗಡೆಯಾಗುವ ವೇಳೆ ಸ್ಥಳದಲ್ಲಿದ್ದರು. ಕಳೆದ 24 ಗಂಟೆಗಳಿಂದ ಬಾಬು ವೈದ್ಯರ ನಿಗಾದಲ್ಲಿದ್ದನು.
ಬಾಬು ಟ್ರೆಕ್ಕಿಂಗ್ ವೇಳೆ ಜಾರಿ ಬಿದ್ದು, ಸುಮಾರು 46 ಗಂಟೆಗಳ ಕಾಲ ಆಹಾರ ಮತ್ತು ನೀರಿಲ್ಲದೆ ಪರ್ವತವೊಂದರಲ್ಲಿ ಸಿಲುಕಿಕೊಂಡಿದ್ದ. ಇಪ್ಪತ್ಮೂರು ವರ್ಷದ ಬಾಬು ಅವರನ್ನು ಭಾರತೀಯ ಸೇನೆ ರಕ್ಷಿಸಿ ವಿಶೇಷ ಹೆಲಿಕಾಪ್ಟರ್ ಆಸ್ಪತ್ರೆಗೆ ರವಾನಿಸಲಾಗಿತ್ತು.
ಈ ಕುರಿತು ಪ್ರತಿಕ್ರಿಯೆ ನೀಡಿದ ಬಾಬು 'ನಾನು ಟ್ರೆಕ್ಕಿಂಗ್ ಅನ್ನು ಇಷ್ಟಪಡುತ್ತೇನೆ ಮತ್ತು ಅದನ್ನು ಮುಂದುವರಿಸುತ್ತೇನೆ' ಎಂದಿದ್ದಾನೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಬಾಬು ಅವರ ತಾಯಿ ಕೃತಜ್ಞತೆ ಸಲ್ಲಿಸಿದ್ದಾರೆ.
ಇದನ್ನೂ ಓದಿ:ನಾಸಿಕ್: ಮಾಲೆಗಾಂವ್‌ನಲ್ಲಿ ಹಿಜಾಬ್ ಡೇ... ಪೊಲೀಸ್ ಬಿಗಿ ಭದ್ರತೆ..