ಸಾರೈಕೆಲಾ:ಮಳೆ ಸುರಿಯುತ್ತಿದ್ದ ವೇಳೆ ಮರದ ಕೆಳಗೆ ನಿಂತಿದ್ದವರ ಮೇಲೆ ಮರ ಉರುಳಿ ಬಿದ್ದಿದೆ. ಪರಿಣಾಮ ಇಬ್ಬರು ಬಾಲಕರು ಸಾವನ್ನಪ್ಪಿದ್ದಾರೆ. ಈ ಘಟನೆ ಜಾರ್ಖಂಡ್‌ನ ಕಿತಾ ಗ್ರಾಮದಲ್ಲಿ ನಡೆದಿದೆ.
ಆಶ್ರಯ ಪಡೆದವರ ಮೇಲೆ ಉರುಳಿ ಬಿದ್ದ ಮರ, ಇಬ್ಬರು ಬಾಲಕರ ಸಾವು
ಜಾರ್ಖಂಡ್‌ನ ಸಾರೈಕೇಲಾ ಜಿಲ್ಲೆಯಲ್ಲಿ ಕಳೆದ ಐದು ದಿನಗಳಿಂದ ಗಾಳಿ ಮತ್ತು ಸಿಡಿಲು ಜೊತೆ ರಭಸದಿಂದ ಮಳೆ ಸುರಿಯುತ್ತಿದೆ. ಜನರು ಮಳೆ ಹಿನ್ನೆಲೆಯಲ್ಲಿ ಮರದ ಕೆಳಗೆ ಆಶ್ರಯ ಪಡೆಯುತ್ತಿದ್ದರು. ಈ ವೇಳೆ ಮರ ಉರುಳಿ ಬಿದ್ದು ಬಾಲಕರಿಬ್ಬರು ಸಾವನ್ನಪ್ಪಿದ್ದು, ಅನೇಕರು ಗಾಯಗೊಂಡಿದ್ದಾರೆ.
ಆಶ್ರಯ ಪಡೆದವರ ಮೇಲೆ ಉರುಳಿ ಬಿದ್ದ ಮರ, ಇಬ್ಬರು ಬಾಲಕರ ಸಾವು
ಜಿಲ್ಲೆಯಲ್ಲಿ ಸಂಜೆ ಆಗುತ್ತಿದ್ದಂತೆ ಮೋಡ ಕವಿದ ವಾತಾವರಣದಿಂದಾಗಿ ಕತ್ತಲಾವರಿಸುತ್ತಿದೆ. ಮಕ್ಕಳು ಮತ್ತು ಯುವಕರು ಸಂಜೆ ಆಗುತ್ತಿದ್ದಂತೆ ಗ್ರಾಮದ ಹೊರವಲಯದಲ್ಲಿರುವ ಮಾವಿನ ತೋಟಕ್ಕೆ ಹೋಗಿ ಹಣ್ಣು ಕೀಳುವುದರಲ್ಲಿ ನಿರತರಾಗುತ್ತಾರೆ. ಈ ಸಮಯದಲ್ಲಿ ಗಾಳಿ ಸಮೇತ ಜೋರು ಮಳೆ ಬಂದಿದ್ದು ಮಕ್ಕಳು ಮತ್ತು ಯುವಕರು ಮರದ ಕೆಳಗೆ ಆಶ್ರಯ ಪಡೆಯುತ್ತಿದ್ದರು.
ಇದೇ ವೇಳೆ ಮಾವಿನ ಮರ ಉರುಳಿ ಬಿದ್ದಿದೆ. ಪರಿಣಾಮ ಮರದಡಿ ಸಿಲುಕಿಕೊಂಡ ಇಬ್ಬರು ಬಾಲಕರು ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.