ಕರ್ನಾಟಕ

karnataka

ETV Bharat / bharat

ಪ್ರೀತಿಸಿದ ಹುಡುಗಿಯೊಂದಿಗೆ ವಾಸಿಸುತ್ತಿದ್ದ ಪ್ರೇಮಿ.. ಯುವಕ ಮತ್ತವನ ಸಹೋದರಿಗೆ ಚಪ್ಪಲಿಯಿಂದ ಥಳಿತ - ಸಹೋದರಿಗೆ ಶೂ ಹಾಗೂ ಚಪ್ಪಲಿ ಹಾರ

ರಾಜಸ್ಥಾನದ ಟೋಂಕ್‌ನಲ್ಲಿ ಪ್ರೀತಿಸಿದ ಹುಡುಗಿಯೊಂದಿಗೆ ವಾಸಿಸುತ್ತಿದ್ದ ಯುವಕನನ್ನು, ಆಕೆಯ ಕುಟುಂಬಸ್ಥರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಷ್ಟೇ ಅಲ್ಲದೇ ಯುವಕನಿಗೆ ಮೂತ್ರ ಕುಡಿಸಿ ಅಮಾನವೀಯವಾಗಿ ನಡೆದುಕೊಂಡ ಪ್ರಕರಣ ರಾಜಸ್ಥಾನದಲ್ಲಿ ಬೆಳಕಿಗೆ ಬಂದಿದೆ.

ಯುವಕ ಮತ್ತು ಓರ್ವ ಮಹಿಳೆಗೆ ಕ್ರೂರವಾಗಿ ಥಳಿತ
ಯುವಕ ಮತ್ತು ಓರ್ವ ಮಹಿಳೆಗೆ ಕ್ರೂರವಾಗಿ ಥಳಿತ

By

Published : Nov 10, 2022, 6:13 PM IST

ಟೋಂಕ್ (ರಾಜಸ್ಥಾನ): ಅವಿವಾಹಿತ ಯುವಕನೊಂದಿಗೆ ಆತನ ಪ್ರೇಮಿ ಇದ್ದಳು. ಇದರಿಂದ ಕೋಪಗೊಂಡ ಯುವತಿ ಮನೆಯವರು ಯುವಕ ಮತ್ತು ಆತನ ಸಹೋದರಿ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ. ಹಲ್ಲೆ ಮಾಡುವುದಲ್ಲದೇ ಚಿತ್ರಹಿಂಸೆಯನ್ನು ನೀಡಿ, ಇಬ್ಬರಿಗೂ ಚಪ್ಪಲಿ ಹಾರವನ್ನು ಹಾಕಲಾಗಿತ್ತು. ಅಷ್ಟೇ ಅಲ್ಲದೇ ಇಬ್ಬರಿಗೂ ಬಿಸಿ ಇಕ್ಕಳದಿಂದ ಯುವಕನ ಮೂಗು ಕತ್ತರಿಸಲಾಗಿತ್ತು.

ಯುವಕನ ಜೊತೆ ಇದ್ದ ಯುವತಿ ಪೋಷಕರು ಸೇರಿ ಎಂಟು ಮಂದಿ ಈ ರೀತಿ ಮಾಡಿದ್ದು, ಅವರ ವಿರುದ್ಧ ಪ್ರಕರಣ ದಾಖಲಾಗಿದೆ. 3 ಜನರನ್ನು ಬಂಧಿಸಲಾಗಿದೆ. ಪಂಚಾಯಿತಿ ತೀರ್ಪಿನ ಪ್ರಕಾರ ನಮಗೆ ಈ ರೀತಿ ಹಿಂಸೆ ನೀಡಿದ್ದಾರೆ. ನನಗೆ ಮತ್ತು ನನ್ನ ಸಹೋದರಿಗೆ ಶೂ ಹಾಗೂ ಚಪ್ಪಲಿ ಹಾರ ಹಾಕಿದ್ದರು. ಬಿಸಿಯಾದ ಅಸ್ತ್ರಗಳಿಂದ ಚಿತ್ರಹಿಂಸೆ ಕೊಟ್ಟಿದ್ದಾರೆ ಎಂದು ಸಂತ್ರಸ್ತ ಯುವಕ ಆರೋಪಿಸಿದ್ದಾನೆ.

ಯುವಕ ಮತ್ತು ಓರ್ವ ಮಹಿಳೆಗೆ ಕ್ರೂರವಾಗಿ ಥಳಿತ

ಈ ಘಟನೆ ನವೆಂಬರ್ 7ರ ಸಂಜೆ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ಕೃತ್ಯವನ್ನು ಯುವತಿಯ ಕಡೆಯವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ಸಂಬಂಧ ಸಂತ್ರಸ್ತ ಯುವಕ, ಯುವತಿ ಪೋಷಕರು ಸೇರಿದಂತೆ 8 ಜನರ ವಿರುದ್ಧ ಲಂಬಾರಿಸಿಂಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ.

ಇದನ್ನೂ ಓದಿ:ಜಮೀನು ವಿವಾದ ನಡು ರಸ್ತೆಯಲ್ಲೇ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ: ಭೀಕರ ವಿಡಿಯೋ

ಸಂತ್ರಸ್ತೆಯ ಪ್ರಕಾರ, ಪಂಚಾಯಿತಿ ಮುಗಿದ ನಂತರ ಯುವಕ ಮತ್ತು ಆತನ ಸಹೋದರಿ ತಮ್ಮ ಗ್ರಾಮಕ್ಕೆ ಹೋಗಲು ಕಾಲ್ನಡಿಗೆಯಲ್ಲಿ ಸುಮಾರು 500 ಮೀಟರ್ ದೂರದಲ್ಲಿರುವ ಬಸ್ ನಿಲ್ದಾಣಕ್ಕೆ ಹೋಗುತ್ತಿದ್ದರು. ಈ ವೇಳೆ ಬಂದ ಯುವತಿ ಸಂಬಂಧಿಕರು ಇಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗ್ತಿದೆ. ಹೀಗೆ ಚಿತ್ರಹಿಂಸೆ ನೀಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ABOUT THE AUTHOR

...view details