ಚಂಡೀಗಢ (ಪಂಜಾಬ್):ದೇಶಾದ್ಯಂತ ಟೊಮೆಟೊ ಬೆಲೆ ದಿನದಿಂದ ದಿನಕ್ಕೆ ಮತ್ತಷ್ಟು ಏರಿಕೆಯಾಗುತ್ತಿದೆ. ಹಲವು ನಗರದಲ್ಲಿ ಈಗಾಗಲೇ 100, 150, 200 ರೂಪಾಯಿಗೆ ಪ್ರತಿ ಕೆಜಿ ಟೊಮೆಟೊ ಮಾರಾಟವಾಗುತ್ತಿದೆ. ಮುಂದಿನ ದಿನಗಳಲ್ಲಿ 300 ರೂಪಾಯಿ ಗಡಿ ತಲುಪುವ ಸಾಧ್ಯತೆಯೂ ಇದೆಯಂತೆ. ಹೆಚ್ಚುತ್ತಿರುವ ಟೊಮೆಟೊ ಬೆಲೆಯನ್ನು ಗಮನದಲ್ಲಿಟ್ಟುಕೊಂಡು ಪಂಜಾಬ್ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ರಾಜಭವನದ ಊಟ ಮೆನುವಿನಿಂದ 'ಕಿಚನ್ ಕ್ವೀನ್'ಗೆ ಕೊಕ್ ನೀಡಿದ್ದಾರೆ.
ರಾಜಭವನದ ಪ್ರಕಟಣೆ ಹೀಗಿದೆ...: ರಾಜಭವನದ ಮೆನುವಿನಿಂದ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಟೊಮೆಟೊ ತೆಗೆಸಿರುವ ಬಗ್ಗೆ ಪ್ರಕಟಣೆ ಹೊರಡಿಸಲಾಗಿದೆ. ಹೆಚ್ಚುತ್ತಿರುವ ಬೆಲೆ ನಡುವೆ ಬಳಕೆಯನ್ನು ಕಡಿಮೆ ಮೂಲಕ ಉಪಯುಕ್ತವಾದ ಸಲಹೆ, ಸಂದೇಶವನ್ನು ರಾಜ್ಯಪಾಲರು ಜನತೆಗೆ ರವಾನಿಸಿದ್ದಾರೆ. 'ಟೊಮೆಟೊ ಬಳಕೆಯಲ್ಲಿ ಇಳಿಕೆ ಮಾಡಿದರೆ ಗಗನಕ್ಕೇರುತ್ತಿರುವ ಬೆಲೆಗಳನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ರಾಜ್ಯಪಾಲರು ಹೇಳಿದ್ದಾರೆ. ರಾಜ್ಯದ ನಾಗರಿಕರಿಗೆ ಒಗ್ಗಟ್ಟಿನ ಸೂಚಕವಾಗಿ ಟೊಮೆಟೊ ಸೇವನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲು ನಿರ್ಧರಿಸಲಾಗಿದೆ' ಎಂದು ಪ್ರಕಟಣೆ ತಿಳಿಸಿದೆ.
'ತಮ್ಮ ಸ್ವಂತ ಮನೆಯಲ್ಲಿ ಟೊಮೆಟೊ ಸೇವನೆಯನ್ನು ದೂರ ಮಾಡುವ ಮೂಲಕ ಈ ಸವಾಲಿನ ಸಮಯದಲ್ಲಿ ಪರಾನುಭೂತಿ ಮತ್ತು ಮಿತವ್ಯಯ ಹಾಗೂ ಸಂಪನ್ಮೂಲಗಳ ಜವಾಬ್ದಾರಿಯುತ ಬಳಕೆಯ ಪ್ರಾಮುಖ್ಯತೆಯನ್ನು ಒತ್ತಿಹೇಳಲು' ರಾಜಪಾಲ ಪುರೋಹಿತ್ ಉದ್ದೇಶಿಸಿದ್ದಾರೆ ಎಂದು ಪ್ರಕಟಣೆ ಹೇಳಿದೆ.