ಹೈದರಾಬಾದ್:ಟಾಲಿವುಡ್ ಡ್ರಗ್ಸ್ ಕೇಸ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂಬ ಆರೋಪದ ಮೇಲೆ ಈಗಾಗಲೇ ಅನೇಕ ನಟಿ - ನಟರಿಗೆ ಸಮನ್ಸ್ ಜಾರಿಯಾಗಿದ್ದು, ಅವರ ವಿಚಾರಣೆ ನಡೆಸಲು ಜಾರಿ ನಿರ್ದೇಶನಾಲಯ ತಯಾರಿ ನಡೆಸಿದೆ.
ಸುಮಾರು 4 ವರ್ಷಗಳ ಹಿಂದಿನ ಕೇಸ್ ಇದಾಗಿದ್ದು, 2017ರಲ್ಲಿ ತೆಲಂಗಾಣ ಪೊಲೀಸರು ಸುಮಾರು 30 ಲಕ್ಷ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದುಕೊಂಡಿದ್ದರು. ಇದಾದ ಬಳಿಕ ಪ್ರಕರಣದ ತನಿಖೆ ಆರಂಭ ಮಾಡಿದ್ದ ಪೊಲೀಸರಿಗೆ ಮಹತ್ವದ ಮಾಹಿತಿ ಲಭ್ಯವಾಗಿದ್ದವು. ಅದರ ಆಧಾರದ ಮೇಲೆ ಪ್ರಮುಖ ನಟ - ನಟಿಯರ ವಿಚಾರಣೆಗೆ ಜಾರಿ ನಿರ್ದೇಶನಾಲಯ(ಇಡಿ) ಮುಂದಾಗಿದೆ. ಈ ಪ್ರಕರಣದಲ್ಲಿ ಅಕ್ರಮವಾಗಿ ಹಣ ವರ್ಗಾವಣೆ ಆಗಿರುವುದು ಕೂಡ ಕಂಡು ಬಂದಿತ್ತು. ಇದರಲ್ಲಿ ನಟಿ - ನಟಿಯರು ಭಾಗಿಯಾಗಿದ್ದಾರಾ? ಎಂಬ ವಿಚಾರಣೆ ನಡೆಯಬೇಕಿದೆ.