ಚೆನ್ನೈ(ತಮಿಳುನಾಡು):ಸಾಧಿಸಬೇಕೆಂಬ ಛಲ, ಗೌರವಯುತ ಜೀವನ ಬೇಕೆಂಬ ಗುರಿಯನ್ನು ಬೆನ್ನಟ್ಟಿದ ತಮಿಳುನಾಡಿನ ತೃತೀಯ ಲಿಂಗಿಯೊಬ್ಬರು ವಕೀಲಿಕೆ ಕಲಿತು, ಬಾರ್ ಕೌನ್ಸಿಲ್ನಲ್ಲಿ ನೋಂದಣಿ ಪಡೆದಿದ್ದಾರೆ. ಈ ಮೂಲಕ ರಾಜ್ಯದಲ್ಲಿಯೇ ಮೊದಲ ತೃತೀಯಲಿಂಗಿ ವಕೀಲೆ ಎಂಬ ದಾಖಲೆ ಬರೆದಿದ್ದಾರೆ.
ಪಿ.ಎಸ್. ಕಣ್ಮಣಿ ಮೊದಲ ತೃತೀಯಲಿಂಗಿ ವಕೀಲೆ. ತಮಿಳುನಾಡಿನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ವ್ಯಾಸಂಗ ಮಾಡಿರುವ ಕಣ್ಮಣಿಗೆ ಬಾರ್ ಕೌನ್ಸಿಲ್ ಅಧ್ಯಕ್ಷ ಅಮಲರಾಜ್ ಕಾನೂನು ನೋಂದಣಿ ಪ್ರಮಾಣಪತ್ರ ನೀಡಿದರು.
ಮನೆಯಿಂದ ದೂರ, ಶಿಕ್ಷಣಕ್ಕೆ ಹತ್ತಿರ:ಚೆನ್ನೈನ ವೆಲಚೇರಿಯಲ್ಲಿ ಜನಿಸಿದ ಕಣ್ಮಣಿ ಮೊದಲು ಹುಡುಗನಾಗಿದ್ದ. ಈತನಿಗೆ ಇಬ್ಬರು ಸಹೋದರರು ಮತ್ತು ಇಬ್ಬರು ಸಹೋದರಿಯರು ಇದ್ದರು. ಕುಟುಂಬದ ಕೊನೆಯ ಮಗನಾಗಿದ್ದ ಕಣ್ಮಣಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸುವಾಗ ಲಿಂಗ ಪರಿವರ್ತನೆಗೆ ಒಳಗಾಗುತ್ತಿದ್ದ. ಇದನ್ನು ಗಮನಿಸಿದ ಮನೆಯವವರು ಮಗನನ್ನು ಕುಟುಂಬದಿಂದಲೇ ದೂರವಿಟ್ಟರು. 2017 ರಲ್ಲಿ ತನ್ನ 12 ನೇ ತರಗತಿಯನ್ನು ಪೂರ್ಣಗೊಳಿಸಿದ ನಂತರ, ಅವಳಾಗಿ ಬದಲಾದ ಕಣ್ಮಣಿ ಕುಟುಂಬದಿಂದ ಸಂಪೂರ್ಣವಾಗಿ ದೂರವಾದಳು.