ಕರ್ನಾಟಕ

karnataka

ETV Bharat / bharat

ಅಂಗಾಂಗ ದಾನ ಮಾಡಿದ ವ್ಯಕ್ತಿಗೆ ಸರ್ಕಾರಿ ಗೌರವ ಸಲ್ಲಿಸಿದ ತಮಿಳುನಾಡು ಸರ್ಕಾರ

ರಸ್ತೆ ಅಪಘಾತದಿಂದ ಮೃತಪಟ್ಟ ವ್ಯಕ್ತಿಯ ಅಂಗಾಂಗ ದಾನ ಮಾಡುವ ಮೂಲಕ ಕುಟುಂಬಸ್ಥರು ಮಾದರಿಯಾಗಿದ್ದಾರೆ.

Etv BharatTN Govt paid state honor to Andhra Pradesh's organ donor in Chennai
ಅಂಗಾಂಗ ದಾನ ಮಾಡದ ವ್ಯಕ್ತಿಗೆ ಸರ್ಕಾರಿ ಗೌರವ ಸಲ್ಲಿಸಿದ ತಮಿಳುನಾಡು ಸರ್ಕಾರ

By ETV Bharat Karnataka Team

Published : Nov 10, 2023, 8:33 PM IST

Updated : Nov 10, 2023, 10:40 PM IST

ಚೆನ್ನೈ (ತಮಿಳುನಾಡು): ರಸ್ತೆ ಅಪಘಾತದಿಂದ ಮೃತಪಟ್ಟ ವ್ಯಕ್ತಿಯ ಅಂಗಾಂಗ ದಾನ ಮಾಡುವ ಮೂಲಕ ಆತನ ಕುಟುಂಬಸ್ಥರು ಸಾರ್ಥಕತೆ ಮೆರೆದಿರುವ ಘಟನೆ ನಡೆದಿದೆ. ಆಂಧ್ರಪ್ರದೇಶದ ತಿರುಪತಿಯ ಚಿತ್ತೂರು ರಾಘವೇಂದ್ರ ನಗರದ ನಿವಾಸಿಯಾದ ಯುವರಾಜುಲು ನಾಯ್ಡು (61) ಅವರು, ನವೆಂಬರ್ 3 ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದುರದೃಷ್ಟವಾಶತ್​ ಅವರು ಚಿಕಿತ್ಸೆ ಫಲಕಾರಿಯಾಗದೇ ನವೆಂಬರ್ 7ರ ಸಂಜೆ 5.52ಕ್ಕೆ ನಿಧನರಾಗಿದ್ದರು.

ನಂತರ ಯುವರಾಜುಲು ನಾಯ್ಡು ಅವರ ಪತ್ನಿ ಅತುಶುಪಲ್ಲಿ, ಮಗಳು ಅತುಶ್ಮಿಲ್ಲಿ ಸಿರಿಶಾ, ಮಗ ನಿತೀಶ್ ಕುಮಾರ್ ಮಿಥು ಹಾಗೂ ಇತರ ಕುಟುಂಬಸ್ಥರು ಯುವರಾಜುಲು ಅವರ ಎರಡು ಕಣ್ಣುಗಳು, ಎರಡು ಮೂತ್ರಪಿಂಡಗಳು, ಹೃದಯ, ಯಕೃತ್ತು, ಶ್ವಾಸಕೋಶ, ಕರುಳು ಮತ್ತು ಹೃದಯ ಕವಾಟಗಳನ್ನು ದಾನ ಮಾಡುವ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ.

ಇದಾದ ಬಳಿಕ ತಮಿಳುನಾಡು ಸರ್ಕಾರದ ಪರವಾಗಿ ಕೇಂದ್ರ ಕಂದಾಯ ವಿಭಾಗಾಧಿಕಾರಿ ಪಿ.ಕ್ಯೂರಿ ಹಾಗೂ ಎಗ್ಮೋರ್ ಅಧಿಕಾರಿ ಶಿವಕುಮಾರ್ ಅವರು, ನಿನ್ನೆ (ಗುರುವಾರ) ಆಸ್ಪತ್ರೆಗೆ ಭೇಟಿ ನೀಡಿ ಮೃತ ಯುವರಾಜುಲು ನಾಯ್ಡು ಅವರ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಿ, ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಇದಕ್ಕೂ ಮುನ್ನ ಮಾತನಾಡಿದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, "ತಮ್ಮ ಅಂಗಾಂಗ ದಾನ ಮಾಡಿ ಮೂಲಕ ಹಲವಾರ ಜೀವಗಳನ್ನು ಉಳಿಸಿದವರಿಗೆ ಗೌರವ ಸಲ್ಲಿಸುವ ಸಲುವಾಗಿ ಅಂಗಾಂಗ ದಾನಿಗಳ ಅಂತ್ಯಕ್ರಿಯೆಯನ್ನು ಸಲಕ ಸರ್ಕಾರಿ ಗೌರವದೊಂದಿಗೆ ನೆರವೇರಿಸಲಾಗುವುದು" ಎಂದು ಘೋಷಿಸಿದ್ದಾರೆ. ಸಿಎಂ ನಿರ್ಧಾರಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಅಂಗಾಂಗ ದಾನಕ್ಕೆ ಮುಂದಾದ 82 ಸಾವಿರ ಮಂದಿ; ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರಿಂದ ನೋಂದಣಿ

ಅಂಗಾಂಗ ದಾನ ಮಾಡಿ 5 ಜನರ ಬಾಳಿಗೆ ಬೆಳಕಾದ ಮಹಿಳೆ:ಇತ್ತೀಚಿಗೆ, ಚಿಕ್ಕಮಗಳೂರಿನ ಗೌರಿ ಕಾಲುವೆಯ ನಿವಾಸಿ ಸಹನಾ ಮೊಸೆಸ್ ಎಂಬವರು​ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದರು. ತಮ್ಮ ಅಂಗಾಂಗಗಳನ್ನು ದಾನ ಮಾಡುವ ಮೂಲಕ 5 ಜನರ ಬಾಳಿಗೆ ಬೆಳಕಾಗಿದ್ದರು. ಮೆದುಳು ನಿಷ್ಕ್ರಿಯಗೊಂಡಿದ್ದರಿಂದ ಅವರ ಕುಟುಂಬದವರ ದೃಢ ನಿರ್ಧಾರ ಹಾಗೂ ಸಹನಾ ಅವರ ಆಸೆಯಂತೆಯೇ ಅಂಗಾಂಗಗಳನ್ನು ದಾನ ಮಾಡಲಾಗಿತ್ತು. ನಗರದ ಜಿಲ್ಲಾಸ್ಪತ್ರೆಯಲ್ಲಿ ಸಹನಾರ ಕಣ್ಣು, ಕಿಡ್ನಿ ಹಾಗೂ ಯಕೃತ್ತನ್ನು ತಜ್ಞ ವೈದ್ಯರ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ ಆಂಬ್ಯುಲೆನ್ಸ್ ಮೂಲಕ ಬೆಂಗಳೂರು ಮತ್ತು ಮಂಗಳೂರಿಗೆ ರವಾನಿಸಿದ್ದರು. ಸಹನಾರ ಅಂಗಾಂಗಗಳನ್ನು ಆಸ್ಪತ್ರೆಯಿಂದ ಹೊರತರುತ್ತಿದ್ದಂತೆಯೇ ಅವರ ಬಂಧು - ಬಳಗ, ಹಿತೈಷಿಗಳು ಅವರ ಭಾವಚಿತ್ರ ಹಿಡಿದು ನಮನ ಸಲ್ಲಿಸಿದ್ದರು.

Last Updated : Nov 10, 2023, 10:40 PM IST

ABOUT THE AUTHOR

...view details