ಚೆನ್ನೈ:ದೇಶದಲ್ಲಿ ಎರಡನೇ ಹಂತದ ಕೋವಿಡ್ ಅಲೆ ಹೆಚ್ಚಾಗಿರುವ ಕಾರಣ ಬಹುತೇಕ ಎಲ್ಲ ರಾಜ್ಯಗಳು ಲಾಕ್ಡೌನ್ ಘೋಷಣೆ ಮಾಡಿದ್ದು, ಅದರ ನಿಯಂತ್ರಣಕ್ಕಾಗಿ ಇದೀಗ ಲಾಕ್ಡೌನ್ ಘೋಷಣೆ ಮುಂದೂಡಿಕೆ ಮಾಡಿ ಆದೇಶ ಹೊರಹಾಕುತ್ತಿವೆ.
ನಿನ್ನೆಯಷ್ಟೇ ಕರ್ನಾಟಕ ಸರ್ಕಾರ ರಾಜ್ಯದಲ್ಲಿ ಜೂನ್ 7ರವರೆಗೆ ಲಾಕ್ಡೌನ್ ಮುಂದೂಡಿಕೆ ಮಾಡಿ ಆದೇಶ ಹೊರಹಾಕಿದ್ದು, ಇದರ ಬೆನ್ನಲ್ಲೇ ಇದೀಗ ತಮಿಳುನಾಡು ಮುಂದಿನ ಒಂದು ವಾರಗಳ ಕಾಲ ಲಾಕ್ಡೌನ್ ವಿಸ್ತರಣೆ ಮಾಡಿದ್ದು, ಮೇ. 30ರವರೆಗೆ ಇದು ಜಾರಿಯಲ್ಲಿರಲಿದೆ.
ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ವಿಚಾರವಾಗಿ ಎಲ್ಲ ಪಕ್ಷದವರೊಂದಿಗೆ ಸಭೆ ನಡೆಸಿದ ಬಳಿಕ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಈ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
ಕಳೆದ ಕೆಲ ದಿನಗಳಿಂದ ತಮಿಳುನಾಡಿನಲ್ಲಿ ಕೋವಿಡ್ ಸೋಂಕಿತ ಪ್ರಕರಣ ಹೆಚ್ಚಾಗುತ್ತಿದ್ದು, ನಿನ್ನೆ ಕೂಡ 35,000 ಪ್ರಕರಣ ಕಾಣಿಸಿಕೊಂಡಿವೆ. ಅದರ ನಿಯಂತ್ರಣಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಸುವೇಂದು ಅಧಿಕಾರಿ ತಂದೆ, ಸಹೋದರನಿಗೆ 'ವೈ-ಪ್ಲಸ್' ಭದ್ರತೆ
ಈ ಸಲದ ಲಾಕ್ಡೌನ್ ಮತ್ತಷ್ಟು ಕಠಿಣವಾಗಿರಲಿದೆ ಎಂದು ಸ್ಟಾಲಿನ್ ತಿಳಿಸಿದ್ದು, ಅಗತ್ಯ ಸಂದರ್ಭದಲ್ಲಿ ಮಾತ್ರ ಹೊರ ಹೋಗಲು ಸೂಚನೆ ನೀಡಲಾಗಿದೆ. ಪ್ರಮುಖವಾಗಿ ವೈದ್ಯಕೀಯ ಸೇವೆ, ಹಾಲು, ಕುಡಿಯುವ ನೀರಿನ ಪೂರೈಕೆಗೆ ಆದ್ಯತೆ ನೀಡಲಾಗಿದ್ದು, ತರಕಾರಿ ಹಾಗೂ ಹಣ್ಣು ಪ್ರತಿ ಪ್ರದೇಶಗಳಲ್ಲಿ ತಳ್ಳು ಗಾಡಿ ಮೂಲಕ ಮಾರಲು ಅವಕಾಶ ನೀಡಲಾಗಿದೆ ಎಂದರು.ಮೇ. 23ರಂದು ಬಸ್ ಸೇವೆ ನೀಡಲಾಗಿದ್ದು, ಅಗತ್ಯ ಜನರು ಮಾತ್ರ ಇದರ ಬಳಕೆ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ.