ಕರ್ನಾಟಕ

karnataka

ETV Bharat / bharat

ಟಿಎಂಸಿ ಯುವ ಘಟಕದ ಮುಖಂಡನ ಗುಂಡಿಕ್ಕಿ ಹತ್ಯೆ

ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ಶುಕ್ರವಾರ ಹಾಡಹಗಲೇ ಟಿಎಂಸಿ ಯುವ ಘಟಕದ ಮುಖಂಡನನ್ನು ಐವರು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

TMC youth leader shot dead in broad daylight in West Bengal
ಹಾಗಹಗಲೇ ಟಿಎಂಸಿ ಯುವ ಘಟಕದ ಮುಖಂಡನ ಗುಂಡಿಕ್ಕಿ ಹತ್ಯೆ

By

Published : Apr 7, 2023, 8:05 PM IST

ನಾಡಿಯಾ (ಪಶ್ಚಿಮ ಬಂಗಾಳ): ಆಡಳಿತಾರೂಢ ತೃಣಮೂಲ ಕಾಂಗ್ರೆಸ್​ ಪಕ್ಷದ ಯುವ ಘಟಕದ ಮುಖಂಡನನ್ನು ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ಶುಕ್ರವಾರ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಹನ್ಸ್‌ಖಾಲಿಯಲ್ಲಿ ನಡೆದಿದೆ. ಅಮದ್ ಅಲಿ ಬಿಸ್ವಾಸ್ ಕೊಲೆಯಾದವರು. ಐವರು ದುಷ್ಕರ್ಮಿಗಳು ಜನರ ಕಣ್ಣೆದುರೇ ಗುಂಡಿನ ದಾಳಿ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಯುವ ಜೋಡಿಯ ಫೋಟೋ ಕ್ಲಿಕ್ಕಿಸಿದ ಆರೋಪ: 65 ವರ್ಷದ ವೃದ್ಧನ ಹೊಡೆದು ಕೊಲೆ

ಕೊಲೆಯಾದ ಅಮದ್ ಅಲಿ ಬಿಸ್ವಾಸ್ ಸ್ಥಳೀಯ ತೃಣಮೂಲ ಯುವ ಉಪಾಧ್ಯಕ್ಷ. ಶುಕ್ರವಾರ ಬೆಳಗ್ಗೆ ಇಲ್ಲಿನ ಬಾರಾ ಚುಪಿಯಾ ಪ್ರದೇಶದಲ್ಲಿ ಮಾರ್ಕೆಟ್‌ಗೆ ಹೋಗಿ ಅಲ್ಲಿನ ಟೀ ಸ್ಟಾಲ್‌ನಲ್ಲಿ ಕುಳಿತಿದ್ದರು. ಈ ವೇಳೆ ಏಕಾಏಕಿ ಎರಡು ಬೈಕ್‌ಗಳಲ್ಲಿ ಬಂದ ದುಷ್ಕರ್ಮಿಗಳು ಸಾರ್ವಜನಿಕರ ಮುಂದೆಯೇ ಬಿಸ್ವಾಸ್ ಮೇಲೆ ಗುಂಡು ಹಾರಿಸಿದ್ದಾರೆ. ನೋಡ ನೋಡುತ್ತಿದ್ದಂತೆ ನಡೆದ ಘಟನೆಯಿಂದ ಸುತ್ತಮುತ್ತಲಿನ ಜನರು ಭಯಭೀತರಾಗಿದ್ದರು.

ಮತ್ತಷ್ಟು ವಿವರ:ಸ್ಥಳೀಯ ಮೂಲಗಳ ಪ್ರಕಾರ, ಅಮದ್ ಅಲಿ ಬಿಸ್ವಾಸ್ ದುಷ್ಕರ್ಮಿಗಳೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದರು. ಇದೇ ಕಾರಣಕ್ಕೆ ಇಬ್ಬರು ವ್ಯಕ್ತಿಗಳು ಗನ್​ಗಳನ್ನು ತೆಗೆದುಕೊಂಡು ಅವರ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿದರು. ಆಗ ಬಿಸ್ವಾಸ್​ನ ಕಿವಿಯ ಒಂದು ಬದಿಯಿಂದ ಗುಂಡು ಪ್ರವೇಶಿಸಿ ಇನ್ನೊಂದು ಬದಿಯಿಂದ ಹೊರಬಂತು. ಇದರಿಂದ ತಕ್ಷಣ ಸ್ಥಳದಲ್ಲೇ ಕುಸಿದು ಬಿದ್ದರು. ಆದರೆ, ನಂತರವೂ ದುಷ್ಕರ್ಮಿಗಳು ಗುಂಡಿನ ದಾಳಿ ನಿಲ್ಲಿಸಲಿಲ್ಲ. ಮನಸೋ ಇಚ್ಛೆ ಗುಂಡಿನ ದಾಳಿ ಮುಂದುವರೆಸಿದರು. ಅಲ್ಲದೇ, ಸ್ಥಳದಿಂದ ಪರಾರಿಯಾಗುವ ಸಂದರ್ಭದಲ್ಲಿ ಈ ದುಷ್ಕರ್ಮಿಗಳು ಬಾಂಬ್‌ಗಳನ್ನೂ ಎಸೆದರು. ಹೀಗಾಗಿ ಇಡೀ ಮಾರುಕಟ್ಟೆ ಪ್ರದೇಶದಲ್ಲಿ ಭಾರಿ ಆತಂಕದ ವಾತಾವರಣವನ್ನು ಸೃಷ್ಟಿಸಿತು ಎಂದು ತಿಳಿದು ಬಂದಿದೆ.

ಇದರ ನಂತರ ಸ್ಥಳದಲ್ಲಿದ್ದ ಕೆಲವರು ಬಿಸ್ವಾಸ್ ಅವರನ್ನು ರಕ್ಷಿಸಿ ಸ್ಥಳೀಯ ಬುಗುಲಾ ಗ್ರಾಮಾಂತರ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಅಷ್ಟರಲ್ಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಮೃತದೇಹವನ್ನು ಶಕ್ತಿಗಢ ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಸಾಗಿಸಿದರು. ಜೊತೆಗೆ ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿ, ಸ್ಥಳೀಯರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ರಾಜಕೀಯ ಕೈವಾಡದ ಬಗ್ಗೆ ತನಿಖೆ: ಹತ್ಯೆಗೀಡಾದ ಬಿಸ್ವಾಸ್ ಹನ್ಸ್‌ಖಾಲಿ ಬ್ಲಾಕ್‌ನಲ್ಲಿ ತೃಣಮೂಲ ಯುವ ನಾಯಕರಾಗಿ ಬಹಳ ಸಮಯದಿಂದ ಕೆಲಸ ಮಾಡುತ್ತಿದ್ದಾರೆ. ಪಕ್ಷದ ಹನ್ಸ್‌ಖಾಲಿ ಘಟಕದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಆದ್ದರಿಂದ ಈ ಗುಂಡಿನ ದಾಳಿಗೆ ರಾಜಕೀಯ ಕೈವಾಡ ಮತ್ತು ಸಂಬಂಧವಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮತ್ತೊಂದೆಡೆ, ಬಿಸ್ವಾಸ್​ ಕೊಲೆ ಪ್ರಕರಣದ ತಪ್ಪಿತಸ್ಥರನ್ನು ಶೀಘ್ರವಾಗಿ ಬಂಧಿಸಬೇಕೆಂದು ಟಿಎಂಸಿ ಮುಖಂಡ, ಪಂಚಾಯತ್ ಮುಖ್ಯಸ್ಥ ದೇಬಾಶಿಶ್ ಸಾಧುಖಾನ್ ಒತ್ತಾಯಿಸಿದ್ದಾರೆ. ಸದ್ಯ ಕೊಲೆ ನಂತರ ಸ್ಥಳೀಯ ಜನರಲ್ಲಿ ಭಯ ಮತ್ತು ಆತಂಕ ಮನೆ ಮಾಡಿದ್ದು, ಇಡೀ ಪ್ರದೇಶದಲ್ಲಿ ಹೆಚ್ಚಿನ ಪೊಲೀಸ್ ಪೊಲೀಸರನ್ನು ನಿಯೋಜಿಸಲಾಗಿದೆ.

ಈ ಹಿಂದೆ ಬಾಂಬ್​ ಎಸೆದು ಇಬ್ಬರ ಕೊಲೆ:ಈ ಹಿಂದೆ ಬಿರ್ಭುನ್​ ಜಿಲ್ಲೆಯಲ್ಲಿ ಟಿಎಂಸಿ ಪಕ್ಷದ ಇಬ್ಬರು ಕಾರ್ಯಕರ್ತರಾದ ಲಾಲ್ಟು ಶೇಖ್ ಮತ್ತು ನ್ಯೂಟನ್ ಶೇಖ್ ಎಂಬುವರನ್ನೂ ಕೊಲೆ ಮಾಡಲಾಗಿತ್ತು. ಫೆ.5ರಂದು ಜಿಲ್ಲೆಯ ಮಾರ್ಗಗ್ರಾಮ್‌ನಲ್ಲಿ ಈ ಇಬ್ಬರ ಮೇಲೆ ಬಾಂಬ್ ಎಸೆಯಲಾಗಿತ್ತು. ಇದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ನ್ಯೂಟನ್ ಶೇಖ್​ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆಯೇ ಸಾವನ್ನಪ್ಪಿದ್ದ. ಮತ್ತೊಬ್ಬ ಲಾಲ್ಟು ಶೇಖ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದ ಮೃತಪಟ್ಟಿದ್ದ. ಆಗ ಈ ಘಟನೆಯಿಂದ ಕಾಂಗ್ರೆಸ್​ ಕೈವಾಡ ಎಂದು ಪಕ್ಷದ ಮುಖಂಡರು ಆರೋಪಿಸಿದ್ದರು.

ಇದನ್ನೂ ಓದಿ:ಬಾಂಬ್ ಸ್ಫೋಟದಲ್ಲಿ ಟಿಎಂಸಿ ಪಕ್ಷದ ಇಬ್ಬರು ಕಾರ್ಯಕರ್ತರ ಸಾವು: ಕಾಂಗ್ರೆಸ್ ಕೈವಾಡ ಆರೋಪ

ABOUT THE AUTHOR

...view details