ಕರ್ನಾಟಕ

karnataka

ETV Bharat / bharat

ಉಗ್ರರ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಮೂವರು ಯೋಧರು ಹುತಾತ್ಮ

ಶುಕ್ರವಾರ ಭದ್ರತಾ ಪಡೆ ಮತ್ತು ಉಗ್ರರ ನಡುವೆ ನಡೆದ ಗುಂಡಿನ ದಾಳಿ ತೀವ್ರವಾಗಿ ಗಾಯಗೊಂಡಿದ್ದ ಮೂವರು ಯೋಧರು ಸಾವನ್ನಪ್ಪಿದ್ದಾರೆ.

ಯೋಧರು
ಯೋಧರು

By

Published : Aug 5, 2023, 6:38 AM IST

Updated : Aug 5, 2023, 8:02 AM IST

ಜಮ್ಮು ಮತ್ತು ಕಾಶ್ಮೀರ: ದಕ್ಷಿಣ ಕಾಶ್ಮೀರದಲ್ಲಿ ಎನ್​ಕೌಂಟರ್​​ ವೇಳೆ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಮೂವರು ಭಾರತೀಯ ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ದಕ್ಷಿಣ ಕಾಶ್ಮೀರದ ಕುಲ್ಗಾಮ್​ ಜಿಲ್ಲೆಯ ಹಾಲನ್​ ಅರಣ್ಯ ಪ್ರದೇಶದಲ್ಲಿ ಉಗ್ರರು ಅವಿತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಅರಣ್ಯ ಪ್ರದೇಶವನ್ನು ಸುತ್ತುವರೆದು ಶೊಧ ಕಾರ್ಯಾಚರಣೆ ಕೈಗೊಂಡಿದ್ದರು.

ಈ ವೇಳೆ ಅಡಗಿದ್ದ ಉಗ್ರರು ಸೇನಾ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಎನ್​ಕೌಂಟರ್​ ಆರಂಭಿಸಿದ ಸೇನಾ ಸಿಬ್ಬಂದಿ ಮೇಲೆ ಅವಿತುಕುಳಿತ ಉಗ್ರರು ಮನಸೋ ಇಚ್ಚೆ ಗುಂಡಿನ ದಾಳಿ ನಡೆಸಿದ್ದರು. ಗುಂಡಿನ ಚಕಮಕಿಯಲ್ಲಿ ಉಗ್ರರ ದಾಳಿಯಿಂದ ಮೂವರು ಭದ್ರಾತಾ ಪಡೆ ಸಿಬ್ಬಂದಿ ಗಂಭೀರವಾಗಿ ಗಾಯ ಗೊಂಡಿದ್ದರು. ಆದರೆ, ಚಿಕಿತ್ಸೆ ವೇಳೆ ಮೂವರು ಸಾವನ್ನಪ್ಪಿದ್ದಾರೆ. ಈ ಕುರಿತು ಅಧಿಕಾರಿಗಳು ತಿಳಿಸಿದ್ದಾರೆ.

ಕುಲ್ಗಾಮ್​ನ ಹಲಾನ್​ನ ಪ್ರದೇಶಗಳಲ್ಲಿ ಭಯೋತ್ಪಾದಕರ ಸುಳಿವು ಸಿಕ್ಕ ನಂತರ ಅವರನ್ನು ಸೆದೆಬಡಿಯಲೆಂದು 04 ಆಗಸ್ಟ್ 23 ರಂದು ಸೇನೆ ಕಾರ್ಯಾಚರಣೆ ಪ್ರಾರಂಭಿಸಿದೆವು. ಮೂವರು ಸೈನಿಕರು ಗಾಯಗೊಂಡು ಹುತಾತ್ಮರಾಗಿದ್ದು, ಆ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಜೊತೆಗೆ ಈಗಿರುವ ಭದ್ರತಾ ಪಡೆಯನ್ನು ಹೆಚ್ಚಿಸಿದ್ದು, ಶೋಧ ಕಾರ್ಯಕ್ಕೆ ಇನ್ನಷ್ಟು ವೇಗ ನೀಡಲಾಗಿದೆ ಎಂದು ಶ್ರೀನಗರ ಮೂಲದ ಸೇನೆಯ ಚಿನಾರ್ ಕಾರ್ಪ್ಸ್ ಟ್ವೀಟ್​ನಲ್ಲಿ ತಿಳಿಸಿದೆ.

ಪಾಕ್​ ನುಸುಳುಕೋರ ಹತ್ಯೆ ಮಾಡಿದ ಬಿಎಸ್​ಎಫ್​:ಜುಲೈ 31ರಂದು ಜಮ್ಮು ಮತ್ತು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಭಾರತೀಯ ಗಡಿ ಭದ್ರತಾ ಪಡೆಯು ಪಾಕಿಸ್ತಾನದಿಂದ ಭಾರತದ ಗಡಿಯತ್ತ ನುಸುಳುತ್ತಿದ್ದ ಪಾಕ್​ ವ್ಯಕ್ತಿಗೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಈ ಘಟನೆ ನಡೆದ ಇದರ ಹಿಂದಿನ ವಾರ ಕೂಡ ಇದೇ ರೀತಿಯ ಘಟನೆ ನಡೆದಿತ್ತು.

ಪಾಕ್​ ನುಸುಳುಕೋರರಿಗೆ ಪ್ರತಿ ಬಾರಿ ನಮ್ಮ ಗಡಿ ಹತ್ತಿರ ಬರುವ ವೇಳೆ ಎಚ್ಚರಿಕೆ ನೀಡಲಾಗುತ್ತದೆ. ಹಾಗೆ ಈತನಿಗೂ ನೀಡಲಾಗಿತ್ತು. ಆದರೆ ಎಚ್ಚರಿಕೆಯನ್ನು ತಿರಸ್ಕರಿಸಿ ಮತ್ತೆ ಮತ್ತೆ ಪಾಕಿಸ್ತಾನದ ಕಡೆಯಿಂದ ಒಳನುಸುಳುವ ಯುತ್ನ ಮಾಡಿದ್ದಾನೆ. ಇದರಿಂದ ಬಿಎಸ್​ಎಫ್ ಸಿಬ್ಬಂದಿ ಜುಲೈ 31 ರ ಬೆಳಗಿನ ಜಾವ 1:45 ರ ಸುಮಾರಿಗೆ ಅರ್ನಿಯಾ ಸೆಕ್ಟರ್‌ನ ಜಬೋವಾಲ್ ಗಡಿ ಹೊರಠಾಣೆ ಬಳಿ ಭದ್ರತೆ ಮತ್ತು ಸುರಕ್ಷತಾ ದೃಷ್ಟಿಯಿಂದ ನುಸುಳುಕೋರನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು.

ಇದನ್ನೂ ಓದಿ:ದಕ್ಷಿಣ ಕಾಶ್ಮೀರದಲ್ಲಿ ಸೇನೆ, ಉಗ್ರರ ನಡುವೆ ಗುಂಡಿನ ಚಕಮಕಿ: ಮೂವರು ಯೋಧರಿಗೆ ಗಾಯ

Last Updated : Aug 5, 2023, 8:02 AM IST

ABOUT THE AUTHOR

...view details