ಗುವಾಹಟಿ: ಮಹಾರಾಷ್ಟ್ರ ರಾಜಕೀಯದಲ್ಲಿ ನಡೆಯುತ್ತಿರುವ ಗೊಂದಲದ ನಡುವೆಯೇ ಶಿವಸೇನೆಯ ಒಟ್ಟು ಏಳು ಶಾಸಕರು ಗುವಾಹಟಿಗೆ ತೆರಳಿದ್ದಾರೆ. ಶಾಸಕರು ಸೂರತ್‌ನಿಂದ ಅಸ್ಸೋಂನ ಗುವಾಹಟಿ ತಲುಪಿದ್ದು, ಶಿವಸೇನೆ ಬಂಡಾಯ ನಾಯಕ ಏಕನಾಥ್ ಶಿಂಧೆರನ್ನು ಭೇಟಿಯಾಗಿದ್ದಾರೆ. ಶಾಸಕರ ಹೆಸರು ಸದಾ ಸರ್ವಂಕರ, ಮಂಗೇಶ್ ಕುಡಾಳ್ಕರ್, ಉದರ್ಕರ್, ದಾದಾ ವ್ಯೂಸಿಯಾ, ದೀಪಕ್ ಮರ್ಕಾಂತ್, ಅಶ್ವಿನಿ ಜೈಸ್ವಾಲ್ ಬಂಡಾಯ ಶಾಸಕ ಶಿಂಧೆರನ್ನು ಭೇಟಿ ಮಾಡಲಿದ್ದಾರೆ. ಮಂಗಳವಾರ ಮತ್ತು ಬುಧವಾರದ ಈ ಎರಡು ದಿನಗಳಲ್ಲಿ ಶಿವಸೇನೆಯ ಆರು ಅತೃಪ್ತ ಶಾಸಕರು ಸೂರತ್‌ನಲ್ಲಿ ಬೀಡುಬಿಟ್ಟಿದ್ದರು.
ಸೂರತ್ಗೆ ತೆರಳಿದ ಮೂವರು ಶಾಸಕರು:ಮಹಾರಾಷ್ಟ್ರ ರಾಜಕೀಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗಳು ಕುತೂಹಲ ಮೂಡಿಸುತ್ತಿವೆ. ಶಿವಸೇನೆಯ ಏಳು ಶಾಸಕರು ಬುಧವಾರ ರಾತ್ರಿ ಮುಂಬೈಯಿಂದ ಸೂರತ್‌ನ ಲೇ ಮೆರಿಡಿಯನ್ ಹೋಟೆಲ್‌ಗೆ ತಲುಪಿದ್ದರು. ಸದಾ ಸರ್ವಂಕರ್, ಮಂಗೇಶ್ ಕುಡಾಳ್ಕರ್, ಉದರ್ಕರ್, ದಾದಾ ವ್ಯೂಸಿಯಾ, ದೀಪಕ್ ಮರ್ಕಾಂತ್, ಅಶ್ವಿನಿ ಜೈಸ್ವಾಲ್ ಮತ್ತು ಮತ್ತೊಬ್ಬ ಶಾಸಕ ಸೂರತ್ದಿಂದ ಗುವಾಹಟಿಗೆ ತೆರಳಿ ಶಾಸಕ ಶಿವಸೇನೆ ಬಂಡಾಯ ನಾಯಕ ಏಕನಾಥ್ ಶಿಂಧೆ ಅವರನ್ನು ಭೇಟಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಶಿಂಧೆ ಟ್ವೀಟ್: ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಫೇಸ್‌ಬುಕ್ ಸಂಭಾಷಣೆಯ ನಂತರ ಏಕನಾಥ್ ಶಿಂಧೆ ಟ್ವೀಟ್ ಮಾಡಿದ್ದಾರೆ. ಕಳೆದ ಎರಡೂವರೆ ವರ್ಷಗಳಲ್ಲಿ ಮಹಾವಿಕಾಸ್ ಅಘಾಡಿ ಸರ್ಕಾರದಿಂದ ಅದರ ಮಿತ್ರ ಪಕ್ಷಗಳಿಗೆ ಲಾಭ ಮಾಡಿಕೊಟ್ಟಿದೆ. ಇದರಿಂದಾಗಿ ಶಿವಸೈನಿಕರು ಮುಳುಗಿ ಹೋಗಿದ್ದಾರೆ. ಇತರ ಪಕ್ಷಗಳು ಬಲಗೊಳ್ಳುತ್ತಿರುವ ಸಂದರ್ಭದಲ್ಲಿ ಶಿವಸೈನಿಕರು ಮತ್ತು ಶಿವಸೇನೆಯನ್ನು ವ್ಯವಸ್ಥಿತವಾಗಿ ಹಣಿಯಲಾಗುತ್ತಿದೆ. ಪಕ್ಷ ಮತ್ತು ಶಿವಸೈನಿಕರ ಉಳಿವಿಗಾಗಿ ಅಸ್ವಾಭಾವಿಕ ಮೈತ್ರಿಕೂಟದಿಂದ ಹೊರಬರುವುದು ಅತ್ಯಗತ್ಯ. ಅದರಲ್ಲೂ ಮಹಾರಾಷ್ಟ್ರದ ಹಿತದೃಷ್ಟಿಯಿಂದ ಈಗಲೇ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಶಿಂಧೆ ತಮ್ಮ ಟ್ವೀಟ್‌ನಲ್ಲಿ ಹೇಳಿದ್ದಾರೆ.
ಓದಿ:ನನ್ನೊಂದಿಗೆ 40 ಶಾಸಕರಿದ್ದಾರೆ, ಬಾಳಾ ಠಾಕ್ರೆ 'ಹಿಂದುತ್ವ' ತತ್ವಕ್ಕೆ ಬದ್ಧ: ಏಕನಾಥ ಶಿಂಧೆ