ಸೂರತ್(ಗುಜರಾತ್): ತಾಪಿ ನದಿಯ ದಡದಲ್ಲಿ ಆಟವಾಡ್ತಿದ್ದ ವೇಳೆ ಮೂವರು ಅಪ್ರಾಪ್ತ ಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಸೂರತ್ನ ರಾಂಡರ್ ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಇಕ್ಬಾಲ್ ನಗರದ ಮೂವರು ಅಪ್ರಾಪ್ತ ವಯಸ್ಸಿನ ಮಕ್ಕಳು ನಿನ್ನೆ ಸಂಜೆ ಆಟವಾಡ್ತಿದ್ದ ವೇಳೆ ಈ ದುರ್ಘಟನೆ ನಡೆದಿದ್ದು, ಮೃತರನ್ನ ಮೊಹಮ್ಮದ್ ಫಕೀರ್(7), ಶಹದತ್ ಫಕೀರ್(8) ಹಾಗೂ ಸಾನಿಯಾ(14) ಎಂದು ಗುರುತಿಸಲಾಗಿದೆ. ಮೊಹಮ್ಮದ್ ಹಾಗೂ ಶಹದತ್ ಮೃತದೇಹಗಳನ್ನ ನಿನ್ನೆ ಹೊರತೆಗೆಯಲಾಗಿದ್ದು, ಸಾನಿಯಾ ಮೃತದೇಹವನ್ನ ಇಂದು ಬೆಳಗ್ಗೆ ಅಗ್ನಿಶಾಮಕ ದಳದ ಅಧಿಕಾರಿಗಳು ಹೊರತೆಗೆದಿದ್ದಾರೆ.