ಕರ್ನಾಟಕ

karnataka

ETV Bharat / bharat

ಕೃಷಿ ಕಾಯ್ದೆ ವಿರೋಧಿಸಿ ದೆಹಲಿ ಗಡಿಯಲ್ಲಿ ಪ್ರತಿಭಟಿಸುತ್ತಿರುವ ಯಾರೂ ರೈತರಲ್ಲ.. ಬಿಜೆಪಿ ನಾಯಕ ವಿವಾದ

ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಗಡಿಯಲ್ಲಿ ಪ್ರತಿಭಟನೆ ಮಾಡುತ್ತಿರುವ ರೈತರ ವಿರುದ್ಧ ಉತ್ತರಪ್ರದೇಶದ ಬಿಜೆಪಿ ನಾಯಕ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ದೆಹಲಿ ಗಡಿಯಲ್ಲಿ ಪ್ರತಿಭಟನೆ ಮಾಡುತ್ತಿರುವವರು ಯಾರೂ ರೈತರು ಅಲ್ಲ ಎಂದು ವಿವಾದದ ಕಿಚ್ಚು ಹಚ್ಚಿದ್ದಾರೆ..

Those protesting at Delhi borders are not farmers: BJP leader
ಕೃಷಿ ಕಾಯ್ದೆ ವಿರೋಧಿಸಿ ದೆಹಲಿ ಗಡಿಯಲ್ಲಿ ಪ್ರತಿಭಟಿಸುತ್ತಿರುವ ಯಾರೂ ರೈತರಲ್ಲ - ಬಿಜೆಪಿ ನಾಯಕ ವಿವಾದ

By

Published : Sep 8, 2021, 10:51 PM IST

ಮಥುರಾ(ಉತ್ತರಪ್ರದೇಶ) :ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಗಡಿಯಲ್ಲಿ ಪ್ರತಿಭಟನೆ ಮಾಡುತ್ತಿರುವವರು ಯಾರೂ ರೈತರು ಅಲ್ಲ ಎಂದು ಬಿಜೆಪಿ ನಾಯಕ ಸಲೀಲ್‌ ವಿಷ್ಣೋಯಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ದೆಹಲಿ ಗಡಿಯಲ್ಲಿ ಪ್ರತಿಭಟನೆ ಮಾಡುತ್ತಿರುವವರು ರೈತರು ಹಾಗೂ ದೊಡ್ಡ ವ್ಯಾಪಾರಿಗಳ ನಡುವಿನ ದಳ್ಳಾಳಿಗಳು ಎಂದು ಯುಪಿ ಬಿಜೆಪಿ ಘಟಕದ ಉಪಾಧ್ಯಕ್ಷರೂ ಆಗಿರುವ ಬಿಷ್ಣೋಯಿ ಹೇಳಿದ್ದಾರೆ. ನಿಜವಾದ ರೈತರು ಹೊಲ ಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ಅವರು ಇಷ್ಟು ದೀರ್ಘವಾಗಿ ಪ್ರತಿಭಟನೆ ಮಾಡುವುದಿಲ್ಲ. ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಲು ಅವರು ಇನ್ನಿಲ್ಲದ ಯಾತನೆ ಅನುಭವಿಸುತ್ತಿದ್ದಾರೆ.

ಯುಪಿಯಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ಸರಿಯಿಲ್ಲ ಎಂಬ ಆರೋಪಗಳನ್ನು ತಳ್ಳಿಹಾಕಿದ ಸಲೀಲ್‌, ಇದು ಪ್ರತಿಪಕ್ಷಗಳಿಂದ ರಾಜ್ಯ ಸರ್ಕಾರದ ಪ್ರತಿಷ್ಠೆಗೆ ಕಳಂಕ ತರುವ ಪ್ರಯತ್ನವಾಗಿದೆ. ಮತ್ತೊಂದು ವಿಷಯ ಎಂದರೆ ಗೂಂಡಾಗಳು ಜೈಲಿನಲ್ಲಿರುತ್ತಾರೆ ಅಥವಾ ರಾಜ್ಯವನ್ನು ತೊರೆದಿದ್ದಾರೆ ಎಂದು ಹೇಳಿದ್ದಾರೆ.

ABOUT THE AUTHOR

...view details