ಕರ್ನಾಟಕ

karnataka

ETV Bharat / bharat

ಒಮಿಕ್ರಾನ್​ ಮೂಲಕ ದೇಶದಲ್ಲಿ 3ನೇ ಅಲೆ ಬರಬಹುದು: ಮಹಾರಾಷ್ಟ್ರ ಆರೋಗ್ಯ ಸಚಿವ - ಭಾರತದಲ್ಲಿ ಒಮಿಕ್ರಾನ್​ ಪ್ರಕರಣ

ಹೊಸ ರೂಪಾಂತರ ಸೋಂಕು ಒಮಿಕ್ರಾನ್​ ಮೂಲಕವೇ ಭಾರತದಲ್ಲಿ ಮೂರನೇ ಅಲೆ ಕಾಣಿಸಿಕೊಳ್ಳಬಹುದು ಎಂದು ಮಹಾರಾಷ್ಟ್ರದ ಆರೋಗ್ಯ ಸಚಿವರು ಅಭಿಪ್ರಾಯಪಟ್ಟಿದ್ದು, ಕಡ್ಡಾಯವಾಗಿ ಮಾಸ್ಕ್​ ಹಾಗೂ ವ್ಯಾಕ್ಸಿನ್​​ ಪಡೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.

third wave may come through Omicron
third wave may come through Omicron

By

Published : Dec 4, 2021, 4:01 PM IST

ಮುಂಬೈ(ಮಹಾರಾಷ್ಟ್ರ):ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡಿರುವ ಕೋವಿಡ್​ನ ಹೊಸ ರೂಪಾಂತರ ಒಮಿಕ್ರಾನ್​​​​ ಈಗಾಗಲೇ ಭಾರತದಲ್ಲಿ ಕಾಣಿಸಿಕೊಂಡಿದೆ. ಇದೇ ವಿಚಾರವಾಗಿ ಮಹಾರಾಷ್ಟ್ರದ ಆರೋಗ್ಯ ಸಚಿವ ರಾಜೇಶ್​ ಟೋಪೆ ಮಾತನಾಡಿದ್ದು, ಹೊಸ ಸೋಂಕಿನ ಮೂಲಕವೇ ಭಾರತದಲ್ಲಿ ಮೂರನೇ ಅಲೆ ಕಾಣಿಸಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಈಗಾಗಲೇ ಕೊರೊನಾದ ಎರಡೂ ಅಲೆಯಲ್ಲಿ ಜನರು ತೊಂದರೆ ಅನುಭವಿಸಿರುವ ಕಾರಣ ಒಮಿಕ್ರಾನ್​ ಸೋಂಕಿನ​​​ ಬಗ್ಗೆ ಭಯ ಪಡುವುದು ಸಹಜವಾಗಿದೆ. ಇದೇ ಕಾರಣದಿಂದಾಗಿ ಸೋಂಕಿನ ಭೀತಿ ಶುರುವಾಗಿದೆ. ಆದರೆ, ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯವಾಗಿದ್ದು, ಒಂದು ವೇಳೆ ಅಸಡ್ಡೆ ತೋರಿಸಿದ್ರೆ ಒಮಿಕ್ರಾನ್​ ಮೂಲಕವೇ ಮೂರನೇ ಅಲೆ ದೇಶದಲ್ಲಿ ಲಗ್ಗೆ ಇಡಬಹುದು ಎಂದಿದ್ದಾರೆ.

ರಾಜ್ಯದ ಜನರು ಮಾಸ್ಕ್​​ ಧರಿಸುವುದು ಹಾಗೂ ಲಸಿಕೆ ಹಾಕಿಕೊಳ್ಳುವುದು ಕಡ್ಡಾಯವಾಗಿದ್ದು, ವಿಮಾನ ನಿಲ್ದಾಣದಲ್ಲಿ ಎಲ್ಲ ರೀತಿಯ ನಿರ್ಬಂಧ ವಿಧಿಸಲಾಗಿದೆ ಎಂಬ ಮಾಹಿತಿ ಹಂಚಿಕೊಂಡರು.

ಇದನ್ನೂ ಓದಿರಿ:ಶೂಟಿಂಗ್​ ಸ್ಥಳದಲ್ಲಿ ಬೈಕ್ ಡಿಕ್ಕಿ: ಗಾಯಗೊಂಡ ಬೆಂಗಾಲಿ ನಟಿ ಪ್ರಿಯಾಂಕಾ

ರಾಜ್ಯದಲ್ಲಿ ಯಾವುದೇ ರೀತಿಯ ನಿರ್ಬಂಧ ಅಥವಾ ಲಾಕ್​ಡೌನ್​ ಹೇರುವ ಯೋಚನೆ ನಮ್ಮ ಮುಂದೆ ಇಲ್ಲ. ಆದರೆ, 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ಹಾಕಿಸುವಂತೆ ಕೇಂದ್ರದ ಮೇಲೆ ಒತ್ತಾಯ ಹೇರಿದ್ದೇವೆ ಎಂದರು. ರಾಜ್ಯದಲ್ಲಿ ಮೂರನೇ ಅಲೆ ತಡೆಗಟ್ಟಲು ಅಗತ್ಯವಾದ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಈಗಾಗಲೇ ಸಭೆ ನಡೆಸಿದ್ದು, ಮಹತ್ವದ ಅಂಶಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ ಎಂದರು.

ABOUT THE AUTHOR

...view details