ಲಖನೌ (ಉತ್ತರ ಪ್ರದೇಶ): ರಾತ್ರಿ ವೇಳೆ ಯುವತಿಯೊಬ್ಬಳು ನಡು ರಸ್ತೆಯಲ್ಲೇ ಕ್ಯಾಬ್ ಡ್ರೈವರ್ ಜೊತೆ ಜಗಳ ತೆಗೆದು ಆತನ ಮೇಲೆ ಹಲ್ಲೆ ನಡೆಸಿರುವ ಪ್ರಕರಣ ನಡೆದಿದ್ದು, ಇದರ ವಿಡಿಯೋ ಇದೀಗ ವೈರಲ್ ಆಗಿದೆ. ಶುಕ್ರವಾರ ರಾತ್ರಿ ಕೃಷ್ಣ ನಗರದ ರಸ್ತೆಯಲ್ಲಿ ಈ ಘಟನೆ ನಡೆದಿರುವುದಾಗಿ ವರದಿಯಾಗಿದೆ.
ಕ್ಯಾಬ್ ಡ್ರೈವರ್ ತನ್ನ ಮೇಲೆ ಹಲ್ಲೆ ನಡೆಸಿರುವ ಜೊತೆಗೆ ಕಿರುಕುಳ ನೀಡಿದ್ದಾನೆಂದು ಆಕೆ ಆರೋಪ ಮಾಡಿದ್ದು, ಸುಮಾರು 20 ನಿಮಿಷಗಳ ಕಾಲ ರಸ್ತೆಯಲ್ಲೇ ಹೈಡ್ರಾಮಾ ಮಾಡಿದ್ದಾಳೆ. ಇದೇ ವೇಳೆ, ಡ್ರೈವರ್ನಿಗೆ ಕಪಾಳಮೋಕ್ಷ ಮಾಡಿದ್ದಾಳೆ. ಇದರಿಂದ ಸ್ಥಳದಲ್ಲಿ ಸುಮಾರು ನಿಮಿಷಗಳ ಕಾಲ ಟ್ರಾಫಿಕ್ ಸಮಸ್ಯೆಯಾಗಿತ್ತು.