ಕರ್ನಾಟಕ

karnataka

ETV Bharat / bharat

ಚಿನ್ನ, ನಗದು ಅಲ್ಲ .. 2 ಲಕ್ಷ ಮೌಲ್ಯದ 40 ಕೆಜಿ ಕೂದಲು ಕಳ್ಳತನ: ಆರೋಪಿಗಳ ಬಂಧನ - ಕೂದಲು ವ್ಯಾಪಾರಿ

ಕೂದಲು ವ್ಯಾಪಾರಿಯನ್ನು ಅಡ್ಡಗಟ್ಟಿ ಗೋಣಿಚೀಲಗಳನ್ನು ಕದ್ದೊಯ್ದಿದ್ದರು ದರೋಡೆಕೋರರು.

Theft of 40 kg human hair worth 2 lakhs
2 ಲಕ್ಷ ಮೌಲ್ಯದ 40 ಕೆಜಿ ಮಾನವನ ಕೂದಲು ಕಳ್ಳತನ

By

Published : May 11, 2023, 7:58 PM IST

ರಾಜ್‌ಕೋಟ್ (ಗುಜರಾತ್): ಆಭರಣಗಳು, ವಜ್ರಖಚಿತ ಆಭರಣಗಳು ಮತ್ತು ಬೆಲೆಬಾಳುವ ವಸ್ತುಗಳನ್ನು ಕಳ್ಳರು ಕದ್ದೊಯ್ಯುವ ಪ್ರಕರಣಗಳು ಪ್ರತಿದಿನ ದಾಖಲಾಗುತ್ತವೆ. ಆದರೆ ಗುಜರಾತ್‌ನ ರಾಜ್‌ಕೋಟ್ ನಗರದಲ್ಲಿ ದರೋಡೆಕೋರರು ಇತ್ತೀಚೆಗೆ ಎರಡು ಗೋಣಿಗಳಲ್ಲಿ ಮಾನವ ಕೂದಲನ್ನು ಕದ್ದಿರುವ ಘಟನೆ ನಡೆದಿದೆ. ಕಳ್ಳತನ ಪ್ರಕರಣದಲ್ಲಿ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಸುಮಾರು 2 ಲಕ್ಷ ಮೌಲ್ಯದ 40 ಕೆಜಿ ತೂಕದ ಕೂದಲನ್ನು ಐವರು ಕಳ್ಳರು ಕದ್ದು ಪರಾರಿಯಾಗಿದ್ದರು.

ಮಾನವನ ಕೂದಲನ್ನು ವಿಗ್‌ಗಳನ್ನು ತಯಾರಿಸಲು ಬಳಸಲಾಗುತ್ತದೆ. ಇದಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆಯೂ ಇದೆ. ಹೀಗೆ ಉತ್ತರ ಪ್ರದೇಶದ ಮಾನವನ ಕೂದಲಿನ ವ್ಯಾಪಾರಿ ಪುಷ್ಪೇಂದ್ರ ಸಿಂಗ್​ ಗುಜರಾತ್​ನ ಕ್ಷೌರಿಕ ಅಂಗಡಿಗಳಿಂದ ಕೂದಲು ಖರೀದಿಸಿ ಕೊಲ್ಕತ್ತಾದ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಾರೆ. ಪುಷ್ಪೇಂದ್ರ ಸಿಂಗ್​ ನೀಡಿದ ದೂರಿನ ಪ್ರಕಾರ, ಅವರು ರೈಯಾ ರಸ್ತೆಯಲ್ಲಿರುವ ಎರಡು ಸಲೂನ್‌ಗಳಿಂದ 2 ಲಕ್ಷ ರೂಪಾಯಿ ಮೌಲ್ಯದ 40 ಕೆಜಿ ಕೂದಲನ್ನು ಖರೀದಿಸಿದ್ದಾರೆ. ಕೂದಲು ಖರೀದಿಸಿದ್ದ ಸಿಂಗ್​ ಮಂಗಳವಾರ ರಾತ್ರಿ ರಾಜ್‌ಕೋಟ್​ನಿಂದ ಮೋಟಾರ್‌ಸೈಕಲ್‌ನಲ್ಲಿ ಮೋರ್ಬಿಗೆ ಹೋಗುತ್ತಿದ್ದರು.

ಪುಷ್ಪೇಂದ್ರ ಸಿಂಗ್ ರಾಜ್‌ಕೋಟ್‌ನ ರೈಯಾ ರಸ್ತೆಯನ್ನು ತಲುಪಿದಾಗ, ಆಟೋ-ರಿಕ್ಷಾದಲ್ಲಿ ಮೂವರು ಮತ್ತು ಬೈಕ್‌ನಲ್ಲಿ ಇಬ್ಬರು ಪುಷ್ಪೇಂದ್ರ ಅವರ ಬೈಕನ್ನು ಹಿಂಬಾಲಿಸಲು ಪ್ರಾರಂಭಿಸಿದ್ದಾರೆ. ಸ್ಪಲ್ಪ ದೂರ ಹಿಂಬಾಲಿಸಿದ ಆಟೋ ಹಾಗೂ ಬೈಕ್​ನಲ್ಲಿದ್ದ ದರೋಡೆಕೋರರು, ಪುಷ್ಪೇಂದ್ರ ಅವರನ್ನು ಅಡ್ಡಗಟ್ಟಿ ಅವರಲ್ಲಿದ್ದ 40 ಕೆಜಿ ತೂಕದ ಎರಡು ಗೋಣಿಚೀಲಗಳನ್ನು ದೋಚಿದ್ದಾರೆ. ಕೂಡಲೇ ಪುಷ್ಪೇಂದ್ರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ.

ಅಪರಾಧಿಗಳ ಎಲ್ಲಾ ಸಂಭಾವ್ಯ ಅಡಗುತಾಣಗಳ ಮೇಲೆ ದಾಳಿ ನಡೆಸಿದ ಪೊಲೀಸರು, ಅಂತಿಮವಾಗಿ ಐವರು ದರೋಡೆಕೋರರನ್ನು ಗುರುವಾರ ರಾಜ್‌ಕೋಟ್‌ನ ಹೊರವಲಯದಲ್ಲಿರುವ ಪಿಪ್ಲಿಯಾ ಗ್ರಾಮದಲ್ಲಿ ಬಂಧಿಸಿದ್ದಾರೆ. ದುಷ್ಕರ್ಮಿಗಳ ಬಳಿಯಿದ್ದ 40 ಕೆಜಿ ಕೂದಲಿನ ಎರಡು ಗೋಣಿಚೀಲಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಳ್ಳತನಕ್ಕೆ ಬಳಸಿದ ಆಟೋ ಹಾಗೂ ಬೈಕ್​ ಕೂಡ ವಶಕ್ಕೆ ಪಡೆಯಲಾಗಿದೆ.

ಗಾಂಧಿಗ್ರಾಮ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಎಂ ಜಿ ವಾಸವ ಮಾಹಿತಿ ನೀಡಿ, "40 ಕೆಜಿ ಮಾನವ ಕೂದಲು ಕದ್ದ ಐವರನ್ನು ಬಂಧಿಸಲಾಗಿದೆ. ಆರೋಪಿಗಳನ್ನು ರೋಹಿತ್ ಅಲಿಯಾಸ್ ಪಿಯೂಷ್ ಪರೇಶ್‌ಭಾಯ್ ದಾಭಿ, ಲಾಲ್ಜಿ ನಾಗಿನ್‌ಭಾಯ್ ಚೌಹಾಣ್, ರವಿ ಅಲಿಯಾಸ್ ಹೇಮಂತಭಾಯ್ ಚಾವ್ಡಾ, ರಾಹುಲ್ ಅಲಿಯಾಸ್ ತಾಲೋ ರಾಜುಭಾಯಿ ಚೌಹಾಣ್ ಮತ್ತು ಪುರುಷೋತಂಭಾಯಿ ಹಡಭಾಯಿ ಪರ್ಮಾರ್ ಎಂದು ಗುರುತಿಸಲಾಗಿದೆ. ಹಲವು ಪೊಲೀಸ್​ ತಂಡಗಳು ಸೇರಿ ಐವರು ದರೋಡೆಕೋರರನ್ನು ಬಂಧಿಸಿದ್ದಾರೆ" ಎಂದು ತಿಳಿಸಿದರು.

ಇದನ್ನೂ ಓದಿ:ಕೊಲೆ ಪ್ರಕರಣದಲ್ಲಿ ಕಸ್ಟಡಿಯಿಂದ ತಪ್ಪಿಸಿಕೊಂಡ: 17 ವರ್ಷದ ಬಳಿಕ ಕಳ್ಳತನ ಪ್ರಕರಣದಲ್ಲಿ ಬಂಧನ

ABOUT THE AUTHOR

...view details