ಕರ್ನಾಟಕ

karnataka

By

Published : Apr 26, 2021, 7:48 AM IST

ETV Bharat / bharat

ಬೆಳ್ಳಿಯಿಂದ 24 ತೀರ್ಥಂಕರ ಮೂರ್ತಿಗಳ ಪ್ರತಿಷ್ಠಾಪನೆ: ಜಗತ್ತಿನ ಮೊದಲ ರಜತ ದೇಗುಲ ನಿರ್ಮಾಣ ಕಾರ್ಯಾರಂಭ

ಪ್ರಪಂಚದಲ್ಲೇ ಮೊದಲ ಜೈನ ರಜತ ದೇವಾಲಯ ಮಧ್ಯಪ್ರದೇಶದಲ್ಲಿ ತಲೆ ಎತ್ತುತ್ತಿದ್ದು, ಇದರ ಸಂಪೂರ್ಣ ಮಾಹಿತಿ ಇಲ್ಲಿದೆ..

tikamgarh news  tikamgarh temple  tikamgarh jain temple  acharya vidhyasagar  silver temple  ಪ್ರಪಂಚದ ಮೊದಲ ರಜತ ದೇವಾಲಯ  ಪ್ರಪಂಚದ ಮೊದಲ ರಜತ ದೇವಾಲಯ ನಿರ್ಮಾಣ  ಟಿಕಮ್​ಗಢ್​ನಲ್ಲಿ ಪ್ರಪಂಚದ ಮೊದಲ ರಜತ ದೇವಾಲಯ ನಿರ್ಮಾಣ  ಪ್ರಪಂಚದ ಮೊದಲ ರಜತ ದೇವಾಲಯ ನಿರ್ಮಾಣ ಸುದ್ದಿ,
ಪ್ರಪಂಚದ ಮೊದಲ ರಜತ ದೇವಾಲಯ ನಿರ್ಮಾಣಕ್ಕೆ ಕಾರ್ಯ ಶುರು

ಟಿಕಮ್​ಗಢ್(ಮಧ್ಯಪ್ರದೇಶ)​:ತಮಿಳುನಾಡು, ಪಂಜಾಬ್​ನಲ್ಲಿ ಅತ್ಯಾಕರ್ಷಕ ಗೋಲ್ಡನ್​ ಟೆಂಪಲ್​ಗಳಿವೆ. ಆದ್ರೆ ಪ್ರಪಂಚದಲ್ಲೇ ಬೆಳ್ಳಿ ನಿರ್ಮಿತ ದೇವಾಲಯ ಎಲ್ಲೂ ಇಲ್ಲ. ಈಗ ಪ್ರಪಂಚದಲ್ಲೇ ಮೊದಲ ಬಾರಿಗೆ ಮಧ್ಯಪ್ರದೇಶದಲ್ಲಿ ಜೈನ ರಜತ ಮಂದಿರ ನಿರ್ಮಾಣವಾಗುತ್ತಿದೆ.

ದೇಗುಲದ ನೀಲನಕ್ಷೆ

200 ಕೋಟಿ ರೂ ವೆಚ್ಚ

ಈ ದೇವಾಲಯದ ನಿರ್ಮಾಣ ಕಾರ್ಯಗಳು ಟಿಕಮ್‌ಗಢ್​ ಜಿಲ್ಲಾ ಕೇಂದ್ರ ಕಚೇರಿಯಿಂದ 45 ಕಿ.ಮೀ ದೂರದಲ್ಲಿರುವ ಬಂಧದಲ್ಲಿ ನಡೆಯುತ್ತಿದೆ. ಇದು ಜೈನ ಮುನಿ ಆಚಾರ್ಯ ವಿದ್ಯಾಸಾಗರ್ ಮಹಾರಾಜ್ ಅವರ ಪರಿಕಲ್ಪನೆಯಾಗಿದೆ. ಈ ಜೈನ ದೇಗುಲಕ್ಕೆ ಅಡಿಪಾಯ ಹಾಕುವ ಕಾರ್ಯ ನವೆಂಬರ್ 18, 2018 ರಂದು ನಡೆದಿದ್ದು, ಮಂದಿರಕ್ಕೆ 200 ಕೋಟಿ ರೂಪಾಯಿ ವೆಚ್ಚವಾಗಲಿದೆ. ಜೈಸಲ್ಮೇರ್‌ನಿಂದ ಬಹು ಬೇಡಿಕೆಯ ಹಳದಿ ಅಮೃತಶಿಲೆಯಿಂದ ಈ ದೇಗುಲದ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.

ಐದು ವರ್ಷಗಳಲ್ಲಿ ದೇವಾಲಯ ಸಿದ್ಧ:

ದೇಗುಲದಲ್ಲಿರುವ ಪ್ರತಿಷ್ಠಾಪನೆಗೊಳ್ಳಲಿರುವ ಜೈನ ತೀರ್ಥಂಕರ ಮೂರ್ತಿಗಳು

ಬೆಳ್ಳಿಯಲ್ಲಿ ತೀರ್ಥಂಕರ ಮೂರ್ತಿಗಳ ನಿಮಾಣ

25 ಇಂಚು ಎತ್ತರ ಮತ್ತು 2-2 ಕ್ವಿಂಟಲ್ ಬೆಳ್ಳಿ ಲೋಹದಲ್ಲಿ ಸಿದ್ಧಗೊಳ್ಳುವ 24 ತೀರ್ಥಂಕರರ ಪ್ರತಿಮೆಗಳನ್ನು ಈ ದೇವಾಲಯದಲ್ಲಿ ಇರಿಸಲಾಗುತ್ತೆ. ಪ್ರಸ್ತುತ ಬೆಲೆಯ ಪ್ರಕಾರ, ಈ ಪ್ರತಿಮೆಯ ಒಟ್ಟಾರೆ ಮೌಲ್ಯವು ಸುಮಾರು 1 ಕೋಟಿ 32 ಲಕ್ಷ ರೂಪಾಯಿ ಆಗುತ್ತದೆ.

ಈ ಬಗ್ಗೆ ಮಂದಿರ ಸ್ಥಾಪನಾ ಸಮಿತಿ ಸದಸ್ಯ ಪ್ರದೀಪ್ ಜೈನ್ ಮಾತನಾಡಿ, ಬೆಳ್ಳಿ ದೇವಾಲಯದ ನಕ್ಷೆಯನ್ನು ಅಹಮದಾಬಾದ್ ವಾಸ್ತುಶಿಲ್ಪಿ ವಿಪುಲ್ ಮಾಡಿದ್ದಾರೆ. ದೇವಾಲಯದ ಮುಂಭಾಗದಲ್ಲಿ ಸಹಸ್ರ ಕೂಟ ಜಿನಾಲಯ ನಿರ್ಮಾಣವೂ ನಡೆಯಲಿದೆ. ಇದರಲ್ಲಿ 1008 ಪ್ರತಿಮೆಗಳನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಈ ದೇವಾಲಯವು ಐದು ವರ್ಷಗಳಲ್ಲಿ ಸಿದ್ಧವಾಗಲಿದೆ ಎಂದರು.

ಆಚಾರ್ಯ ವಿದ್ಯಾಸಾಗರ್ ಪರಿಕಲ್ಪನೆ

ರಜತ ದೇವಾಲಯದ ನಿರ್ಮಾಣ ಕಾರ್ಯ

ಸಮಿತಿಯ ಮತ್ತೋರ್ವ ಅಧ್ಯಕ್ಷ ಮುರಳಿ ಮನೋಹರ್ ಜೈನ್ ಮಾತನಾಡಿ, ದೇವರು ನನ್ನನ್ನು ಇಲ್ಲಿ ನಿಲ್ಲಿಸುತ್ತಿದ್ದಾನೆ ಎಂದು ನಾನು ಭಾವಿಸಿದ್ದೇನೆ ಎಂದು ಆಚಾರ್ಯ ಶ್ರೀಯವರು ಪ್ರವಚನದಲ್ಲಿ ಹೇಳಿದ್ದರು. ಅದೇ ಸಮಯದಲ್ಲಿ, ಅವರ ಮನಸ್ಸಿನಲ್ಲಿ ಒಂದು ವಿಶೇಷವಾದ ಆಲೋಚನೆ ಹುಟ್ಟಿತು ಎಂದು ಹೇಳಿದರು.

ABOUT THE AUTHOR

...view details