ಕರ್ನಾಟಕ

karnataka

ETV Bharat / bharat

ವೈದ್ಯರು ಶಸ್ತ್ರಚಿಕಿತ್ಸೆ ಅರ್ಧದಲ್ಲೇ ಬಿಟ್ಟಿದ್ದಾರೆಂಬ ಆರೋಪ.. ನ್ಯಾಯ ಕೊಡಿಸುವುದಾಗಿ ಸಂಬಂಧಿಕರಿಗೆ ಅಧೀಕ್ಷರ ಭರವಸೆ

ಕೆಳಗೆ ಬಿದ್ದು ಪೆಟ್ಟು ಮಾಡಿಕೊಂಡಿದ್ದ ವೃದ್ಧೆ ಆಸ್ಪತ್ರೆಗೆ ದಾಖಲು.. ಆಪರೇಷನ ಮಾಡಲು ಸಾಧ್ಯವಿಲ್ಲ ಎಂದು ಅರ್ಧದಲ್ಲೇ ಬಿಟ್ಟಿದ್ದಾರೆಯೇ ವೈದ್ಯರು.. ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಅಮಾನವೀಯ ಘಟನೆ

surgery was stopped in the middle  surgery was stopped in the middle in chittoor  chittoor government hospital  chittoor government hospital issue  ಬಿದ್ದು ಪೆಟ್ಟು ಮಾಡಿಕೊಂಡಿದ್ದ ವೃದ್ಧೆ ಆಸ್ಪತ್ರೆಗೆ ದಾಖಲು  ಆಪರೇಶನ ಮಾಡಲು ಸಾಧ್ಯವಿಲ್ಲ ಎಂದು ಅರ್ಧದಲ್ಲೇ ಬಿಟ್ಟ ವೈದ್ಯ  ಸರ್ಕಾರಿ ಆಸ್ಪತ್ರೆಯಲ್ಲಿ ಅಮಾನವೀಯ ಘಟನೆ  ಕಾಯಿಲೆಯಿಂದ ಬಳಲುತ್ತಿದ್ದ ಸಾಮಾನ್ಯ ಜನರು  ಜನರು ಸರ್ಕಾರಿ ಆಸ್ಪತ್ರೆಗೆ ತೆರಳುವುದು ಸಾಮಾನ್ಯ  ಚಿತ್ತೂರು ಸರಕಾರಿ ಆಸ್ಪತ್ರೆ  ನ್ಯಾಯಕೊಡಿಸುವುದಾಗಿ ಸಂಬಂಧಿಕರಿಗೆ ಅಧಿಕ್ಷರ ಭರವಸೆ  ಶಸ್ತ್ರಚಿಕಿತ್ಸೆ ಅರ್ಧದಲ್ಲೇ ಬಿಟ್ಟಿದ್ದಾರೆಂಬ ಆರೋಪ
ವೈದ್ಯರು ಶಸ್ತ್ರಚಿಕಿತ್ಸೆ ಅರ್ಧದಲ್ಲೇ ಬಿಟ್ಟಿದ್ದಾರೆಂಬ ಆರೋಪ

By

Published : Jan 12, 2023, 7:29 PM IST

Updated : Jan 12, 2023, 8:18 PM IST

ಚಿತ್ತೂರು, ಆಂಧ್ರಪ್ರದೇಶ: ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಅಮಾನವೀಯ ಘಟನೆಯೊಂದು ನಡೆದಿರುವುದು ಬೆಳಕಿಗೆ ಬಂದಿದೆ. ಕಾಯಿಲೆಯಿಂದ ಬಳಲುತ್ತಿದ್ದ ಸಾಮಾನ್ಯ ಜನರು ಸರ್ಕಾರಿ ಆಸ್ಪತ್ರೆಗೆ ತೆರಳುವುದು ಸಾಮಾನ್ಯ. ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧೆಯೊಬ್ಬರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ವೈದ್ಯರು ಶಸ್ತ್ರಚಿಕಿತ್ಸೆ ನಡೆಸುತ್ತಿದ್ದರು. ಶಸ್ತ್ರಚಿಕಿತ್ಸೆ ಮಧ್ಯೆದಲ್ಲೇ ಬಿಟ್ಟಿದ್ದಾರೆ ಎಂಬ ಆರೋಪವೊಂದು ಕೇಳಿಬಂದಿದೆ. ಅಷ್ಟೇ ಅಲ್ಲ ಈ ಘಟನೆಯಿಂದಾಗಿ ಸರ್ಕಾರಿ ಆಸ್ಪತ್ರೆಗಳ ಮೇಲೆ ಜನ ನಂಬಿಕೆ ಕಳೆದುಕೊಳ್ಳುವಂತಾಗಿದೆ ಎನ್ನುತ್ತಾರೆ ಸ್ಥಳೀಯರು.

ಏನಿದು ಪ್ರಕರಣ?: ಚಿತ್ತೂರು ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರ ಆಡಳಿತದ ಬಗ್ಗೆ ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಯಡಮರಿ ತಾಲೂಕಿನ ದಳವಾಯಿಪಲ್ಲಿಯ ನಿವಾಸಿ ಪುಷ್ಪಮ್ಮ (62) ಎಂಬುವರು ಕಳೆದ ವರ್ಷ ಡಿಸೆಂಬರ್​ 31ರಂದು ಮನೆಯಲ್ಲಿ ಜಾರಿ ಬಿದ್ದಿದ್ದರು. ಈ ವೇಳೆ, ಪುಷ್ಪಮ್ಮಳ ತೊಡೆಯ ಮೂಳೆಗೆ ಬಲವಾಗಿ ಪೆಟ್ಟು ಬಿದ್ದಿತ್ತು. ಅವರನ್ನು ಈ ತಿಂಗಳ ನಾಲ್ಕನೇ ತಾರೀಖಿನಂದು ಕುಟುಂಬಸ್ಥರು ಚಿತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯರು ರಕ್ತದೊತ್ತಡ ಮತ್ತು ಸಕ್ಕರೆ ಪರೀಕ್ಷೆಗಳನ್ನು ಪರೀಕ್ಷಿಸಿದ್ದಾರೆ ಮತ್ತು ಕೆಲವು ದಿನಗಳವರೆಗೆ ವೈದ್ಯರ ಮೇಲ್ವಿಚಾರಣೆಯಲ್ಲಿರಲು ಸಲಹೆ ನೀಡಿದ್ದರು ಎಂದು ಸಂಬಂಧಿಕರ ಮಾತಾಗಿದೆ.

ಮುರಿದ ಮೂಳೆ ಹೇಗೆ ಕಾಣುತ್ತದೆ ಎಂಬುದನ್ನು ಕಂಡುಹಿಡಿಯಲು ಎಕ್ಸ್-ರೇ ತೆಗೆದುಕೊಳ್ಳುವಂತೆ ಅವರು ಖಾಸಗಿ ಎಕ್ಸ್-ರೇ ಪ್ಲಾಂಟ್‌ಗೆ ಕರೆದೊಯ್ದಿದ್ದರು. ಎಕ್ಸ್ ರೇ ತಂದಾಗ ವೈದ್ಯರು ಸರ್ಜರಿ ಮಾಡುವುದಾಗಿ ಹೇಳಿ ದಿನಾಂಕವನ್ನೂ ನಿಗದಿಗೊಳಿಸಿದ್ದರು. ಕೊನೆಗೆ ವೃದ್ಧೆಯನ್ನು ಆಪರೇಷನ್ ಕೊಠಡಿಗೆ ಕರೆದೊಯ್ದ ಬಳಿಕ ಬುಧವಾರ ಶಸ್ತ್ರಚಿಕಿತ್ಸೆ ನೆರವೇರಿಸುತ್ತಿದ್ದರು. ಈ ವೇಳೆ ವೈದ್ಯರು ಶಸ್ತ್ರಚಿಕಿತ್ಸೆ ಮಧ್ಯದಲ್ಲೇ ನಿಲ್ಲಿಸಿದ್ದರು.

ನ್ಯಾಯ ಕೊಡಿಸುವುದಾಗಿ ಅಧೀಕ್ಷರ ಭರವಸೆ:ತೊಡೆಯ ಭಾಗ ಕತ್ತರಿಸಿದ ವೈದ್ಯರು ಮಧ್ಯದಲ್ಲಿ ಹೊಲಿಗೆ ಹಾಕಿದ್ದಾರೆ. ಸ್ಥಳೀಯವಾಗಿ ಚಿಕಿತ್ಸೆ ನೀಡಲು ಸಾಧ್ಯವಿಲ್ಲ, ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ. ಅಷ್ಟೇ ಅಲ್ಲ ಮೂಳೆಗಳು ಗಟ್ಟಿಯಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ ಎಂದು ವೃದ್ಧೆಯ ಸಂಬಂಧಿಕರು ಆರೋಪಿಸಿದ್ದಾರೆ. ಇನ್ನು ಸಂತ್ರಸ್ತರು ಆಸ್ಪತ್ರೆಯ ಅಧೀಕ್ಷಕ ಅರುಣ್ ಕುಮಾರ್ ಅವರಿಗೆ ದೂರು ನೀಡಿದ್ದಾರೆ. ಸಂಬಂಧಪಟ್ಟ ವೈದ್ಯರೊಂದಿಗೆ ಮಾತನಾಡಿ ನ್ಯಾಯ ಕೊಡಿಸುವುದಾಗಿ ಅಧೀಕ್ಷಕರು ಭರವಸೆ ನೀಡಿದ್ದಾರೆ ಎಂದು ವೃದ್ಧೆಯ ಸಂಬಂಧಿಕರು ಹೇಳಿದರು.

ವೃದ್ಧೆಯನ್ನು ಬೇರೆ ಆಸ್ಪತ್ರೆಗೆ ರೆಫರ್​ ಮಾಡಿದ್ದಾರೆ. ವೈದ್ಯರ ಸೂಚನೆಯಂತೆ ನಾವು ಬೇರೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇವೆ. ಅಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗುವುದು ಎಂದು ವೃದ್ಧೆಯ ಸಂಬಂಧಿಕರು ತಿಳಿಸಿದ್ದಾರೆ. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ. ಈ ಘಟನೆ ಕುರಿತು ಯಾವುದೇ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ.

ಕರ್ನಾಟಕದಲ್ಲಿ ಕಿನ್ಯಾದ ಮಹಿಳೆಗೆ ಅಪರೂಪದ ಚಿಕಿತ್ಸೆ: ಹೃದಯ ಕವಾಟು ಬದಲಿಸುವ ಚಿಕಿತ್ಸೆ ಬೈಪಾಸ್ ಸರ್ಜರಿಯ ಮೂಲಕ ನಡೆಯುವುದು ಸಾಮಾನ್ಯ. ಆದರೆ ಮಂಗಳೂರಿನಲ್ಲಿ ಕೀನ್ಯಾ ದೇಶದ ಮಹಿಳಾ ರೋಗಿಗೆ ಬೈಪಾಸ್ ಸರ್ಜರಿ ರಹಿತ ಹೃದಯ ಕವಾಟು ಬದಲಿ ಮಾಡುವ ಅಪರೂಪದ ಚಿಕಿತ್ಸೆ ನಡೆದಿತ್ತು. ಈ ಆಪರೇಶನ್​ ಯಶಸ್ವಿಯಾಗಿ ನಡೆದಿತ್ತು.

ಓದಿ:ಪವಾಡದ ಶಸ್ತ್ರಚಿಕಿತ್ಸೆ: ಸೈನಿಕನ ಎದೆಯಿಂದ ಜೀವಂತ ಗ್ರೆನೇಡ್ ತೆಗದ ಉಕ್ರೇನಿಯನ್ ಡಾಕ್ಟರ್​

Last Updated : Jan 12, 2023, 8:18 PM IST

ABOUT THE AUTHOR

...view details