ನಾಗ್ಪುರ (ಮಹಾರಾಷ್ಟ್ರ):ಕಳ್ಳನೊಬ್ಬ ಚಳಿಯಿಂದ ರಕ್ಷಿಸಿಕೊಳ್ಳಲು ತಾನು ಕದ್ದಿದ್ದ ಬೈಕ್ಗೆ ಬೆಂಕಿ ಹಚ್ಚಿರುವ ಘಟನೆ ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯಲ್ಲಿ ನಡೆದಿದೆ.
ಕೆಲ ದಿನಗಳ ಹಿಂದೆ ದರೋಡೆಗೆ ತಯಾರಿ ನಡೆಸುತ್ತಿದ್ದ ಛೋಟಾ ಸರ್ಫರಾಜ್ ಮತ್ತು ಆತನ ನಾಲ್ವರು ಸಹಚರರನ್ನು ಯಶೋಧರನಗರ ಪೊಲೀಸರು ಬಂಧಿಸಿದ್ದಾರೆ. ತನಿಖೆ ವೇಳೆ ಛೋಟಾ ಸರ್ಫರಾಜ್ ಗ್ಯಾಂಗ್ ಒಟ್ಟು 10 ಬೈಕ್‌ಗಳನ್ನು ಕಳ್ಳತನ ಮಾಡಿರುವುದು ತಿಳಿದು ಬಂದಿದೆ.
ಚಳಿ ಕಾಯಿಸಲು ಕದ್ದ ಬೈಕ್ಗೆ ಬೆಂಕಿ ಹಚ್ಚಿದ ಖದೀಮ ಇದನ್ನೂ ಓದಿ: ಕಾಲಿಗೆ ಮಸಾಜ್ ಮಾಡುವಂತೆ ಹೇಳಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ವೇದ ಶಾಲೆಯ ಶಿಕ್ಷಕ ಅರೆಸ್ಟ್
ಈ ಪೈಕಿ 9 ಬೈಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, 10ನೇ ಬೈಕ್ ಮಾತ್ರ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಸಿಕ್ಕಿದೆ. ಈ ಬಗ್ಗೆ ಸರ್ಫರಾಜ್ ಬಳಿ ಬಾಯ್ಬಿಡಿಸಿದಾಗ, ಆತ ತಾನು ಪೊಲೀಸರಿಂದ ತಲೆಮರೆಸಿಕೊಳ್ಳಲು ಗದ್ದೆಯೊಂದರಲ್ಲಿ ರಾತ್ರಿ ಅಡಗಿ ಕೂತಿದ್ದೆ. ಭಯಂಕರ ಚಳಿ ತಡೆಯಲಾರದೆ ತನ್ನೊಂದಿಗಿದ್ದ ಕದ್ದ ಬೈಕ್ಗೆ ಬೆಂಕಿ ಹಚ್ಚಿ ಚಳಿ ಕಾಯಿಸಿಕೊಂಡಿದ್ದೆ ಎಂದು ಹೇಳಿದ್ದಾನೆ.