ಗಂಗಾ ನದಿಯಲ್ಲಿ ತೇಲುತ್ತಿರುವ ಮೃತದೇಹಗಳು, ಜನಪ್ರಿಯ ಆಸ್ಪತ್ರೆಗಳಲ್ಲಿ ಆಮ್ಲಜನಕ ಕೊರತೆಯಿಂದ ಸಾವನ್ನಪ್ಪುತ್ತಿರುವ ರೋಗಿಗಳು. ಇವೆಲ್ಲವೂ ದೇಶದಲ್ಲಿ ಕೋವಿಡ್ ಸೃಷ್ಟಿಸಿದ ಅವಾಂತರ ಘನಘೋರ ದೃಶ್ಯಗಳು..
ತಕ್ಷಣದಿಂದಲೇ ಇಡೀ ದೇಶದಲ್ಲಿ ಲಾಕ್‌ಡೌನ್ ಘೋಷಣೆ ಮಾಡಿ, ವ್ಯಾಪಕ ಪ್ರಮಾಣದಲ್ಲಿ ಲಸಿಕೆ ಅಭಿಯಾನವನ್ನು ನಡೆಸಿದರೆ ಮಾತ್ರ ಭಾರತ ಈ ಸನ್ನಿವೇಶವನ್ನು ಗೆಲ್ಲಬಹುದು ಎಂದು ಅಮೆರಿಕದ ವೈದ್ಯಕೀಯ ಪರಿಣಿತ ಆಂಥೋನಿ ಫಾಸಿ ಹೇಳಿದ್ದಾರೆ. ಕರ್ಫ್ಯೂ ಮತ್ತು ಲಾಕ್‌ಡೌನ್‌ನಂತಹ ಕ್ರಮಗಳನ್ನು ಕೈಗೊಂಡರೂ ರಾಜ್ಯಗಳು ಪರಿಸ್ಥಿತಿಯನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಸರಾಗವಾಗಿ ಸಾಗುತ್ತಿದ್ದ ಲಸಿಕೆ ಅಭಿಯಾನವು, ಲಸಿಕೆ ಲಭ್ಯತೆಯ ಬಗ್ಗೆ ಸ್ಪಷ್ಟತೆ ಇಲ್ಲದೆಯೇ 18 ರಿಂದ 45 ವರ್ಷ ವಯೋಮಾನದ ಎಲ್ಲರಿಗೂ ಲಸಿಕೆ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸುತ್ತಿದ್ದಂತೆಯೇ ಪರಿಸ್ಥಿತಿ ಕೈಮೀರಿ ಹೋಗಿದೆ.
ಇಡೀ ದೇಶಕ್ಕೆ ಲಸಿಕೆಯನ್ನು ಒದಗಿಸಲು ಮೂರು ವರ್ಷ ಬೇಕಾಗುತ್ತದೆ ಎಂದು ಅಂದಾಜು ಮಾಡಲಾಗಿದೆ. ಈ ಅವಧಿಯಲ್ಲಿ ವೈರಸ್ ಭಾರಿ ಪ್ರಮಾಣದಲ್ಲಿ ರೂಪಾಂತರಗೊಂಡು ಲಸಿಕೆಗೆ ಪ್ರತಿರೋಧವನ್ನು ಬೆಳೆಸಿಕೊಳ್ಳುವ ಸಾಧ್ಯತೆಯೂ ಇದೆ ಎನ್ನಲಾಗ್ತಿದೆ. ಅಮೆರಿಕ ಅಧ್ಯಕ್ಷರಾಗಿದ್ದಾಗ ಡೊನಾಲ್ಡ್ ಟ್ರಂಪ್ ಲಸಿಕೆಯ ಉತ್ಪಾದನೆ ಮತ್ತು ಸಂಶೋಧನೆಗೆಂದು 2,000 ಕೋಟಿ ಡಾಲರ್ ಮೀಸಲಿಟ್ಟಿದ್ದರು. ಈ ಒಂದು ಕ್ರಮದಿಂದಾಗಿ ಇಡೀ ಅಮೆರಿಕದ ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ.
ಆದರೆ ಭಾರತ 35,000 ಕೋಟಿ ರೂ. ಅನ್ನು ಲಸಿಕೆಗಾಗಿ ಘೋಷಣೆ ಮಾಡಿತ್ತು. ಆದರೆ, ವಾಸ್ತವವಾಗಿ ಇದರ ಶೇ. 14 ರಷ್ಟನ್ನು ಮಾತ್ರ ವೆಚ್ಚ ಮಾಡಲಾಗಿದೆ. ಕೇಂದ್ರ ಸರ್ಕಾರ ತನ್ನ ಅಧಿಕಾರದಲ್ಲಿ, ಶೇ. 50 ರಷ್ಟು ಲಸಿಕೆಯನ್ನು ಖರೀದಿಸುವ ಅವಕಾಶವನ್ನು ರಾಜ್ಯಗಳಿಗೆ ನೀಡಿದೆ. ಇದರಿಂದಾಗಿ, ದೇಶದ ಕೇವಲ ಶೇ. 3 ರಷ್ಟು ಜನರಿಗೆ ಎರಡು ಡೋಸ್‌ಗಳ ಲಸಿಕೆ ಲಭ್ಯವಾಗಿದೆ. ವಿಶ್ವದ ಬಹುತೇಕ ದೇಶಗಳಲ್ಲಿ, ಸಾರ್ವಜನಿಕವಾಗಿ ಉಚಿತ ಲಸಿಕೆಯನ್ನು ಒದಗಿಸಲಾಗಿದ್ದು, ಭಾರತದಲ್ಲಿ ಇದು ಕಷ್ಟಸಾಧ್ಯವಾಗಿದೆ. ಇಂಥ ದುರ್ಗಮ ಲಸಿಕೆ ನೀತಿಯ ಮಧ್ಯೆಯೇ, ಈ ವಿಚಾರದಲ್ಲಿ ಸುಪ್ರೀಂಕೋರ್ಟ್ ಮಧ್ಯಪ್ರವೇಶದ ಅಗತ್ಯವಿಲ್ಲ ಎಂದು ಹೇಳುತ್ತಿದೆ.
ತುರ್ತು ಔಷಧಗಳ ಉತ್ಪಾದನೆ ಹೆಚ್ಚಳಕ್ಕೆ ಅನುಕೂಲ ಮಾಡಿಕೊಡುವುದಕ್ಕೆ ಪೇಟೆಂಟ್‌ಗಳ ಕಾಯ್ದೆ 92, 100 ಹಾಗೂ 102 ರ ವಿಭಾಗವನ್ನು ಜಾರಿಗೆ ತರಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ. ಸುಪ್ರೀಮ್ ಕೋರ್ಟ್‌ಗೆ ಇತ್ತೀಚೆಗೆ ಕೇಂದ್ರ ಸರ್ಕಾರ ಮಾಡಿದ ಸಲ್ಲಿಕೆಯಲ್ಲಿ, ಈ ಸಮಸ್ಯೆಯು ಪೇಟೆಂಟ್‌ಗಳ ಕಾಯ್ದೆ, ಟ್ರಿಪ್ಸ್ ಕರಾರು ಮತ್ತು ದೋಹಾ ಒಪ್ಪಂದದ ಉಲ್ಲಂಘನೆಯಾಗಬಹುದಾದ ಸಾಧ್ಯತೆ ಇತ್ತು. ಇದನ್ನು ನಾವು ರಾಜತಾಂತ್ರಿಕ ಮಟ್ಟದಲ್ಲಿ ಪರಿಹರಿಸಿಕೊಂಡಿದ್ದೇವೆ ಎಂದು ಹೇಳಿದೆ. ಕಳೆದ ಅಕ್ಟೋಬರ್‌ನಲ್ಲೇ ಪೇಟೆಂಟ್‌ಗಳಿಂದ ವಿನಾಯಿತಿ ನೀಡುವಂತೆ ಭಾರತ ಮತ್ತು ದಕ್ಷಿಣಾ ಆಫ್ರಿಕಾ ಆಗ್ರಹಿಸಿದ್ದವು.
ವಿಶೇಷ ಮತ್ತು ತುರ್ತು ಪರಿಸ್ಥಿತಿ ಸನ್ನಿವೇಶಗಳಿಗೆ ಈಗಾಗಲೇ ನಿಯಮ ಇರುವುದರಿಂದ, ಈ ರೀತಿಯ ತುರ್ತು ಪರಿಸ್ಥಿತಿಯಲ್ಲಿ ಇದನ್ನು ಜಾರಿಗೆ ತರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯಪಟ್ಟಿತ್ತು. ಆದರೆ, ಈಗ ಸಾಂಕ್ರಾಮಿಕ ರೋಗವೂ ಕೂಡಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ, ಪೇಟೆಂಟ್ ವಿನಾಯಿತಿಗೆ ಅಮೆರಿಕ ಕೂಡ ಮನಸು ಮಾಡುತ್ತಿದೆ. ಈ ವಿಪತ್ತನ್ನು ಎದುರಿಸಲು ಪೇಟೆಂಟ್ ನಿವಾರಿಸುವುದು ಮಾತ್ರ ಸಾಲದು ಎಂದು ಪರಿಣಿತರು ಹೇಳುತ್ತಿದ್ದಾರೆ. ಭಾರಿ ಬೇಡಿಕೆಯನ್ನು ಪೂರೈಸುವ ಮಟ್ಟಕ್ಕೆ ಉತ್ಪಾದನೆ ತಲುಪಬೇಕಾದರೆ, ತಂತ್ರಜ್ಞಾನ ವರ್ಗಾವಣೆ, ಸಂಕೀರ್ಣ ಯಂತ್ರಗಳು, ಕಚ್ಚಾ ಸಾಮಗ್ರಿ ಮತ್ತು ಪರಿಣಿತ ಮಾನವ ಸಂಪನ್ಮೂಲದ ಸಮಸ್ಯೆಯನ್ನೂ ಪರಿಹರಿಸಬೇಕಾಗುತ್ತದೆ. ಬೌದ್ಧಿಕ ಸ್ವತ್ತು ಹಕ್ಕುಗಳಿಗೆ ವಿನಾಯಿತಿ ನೀಡಿದರೂ, ಎಂಆರ್‌ಎನ್‌ಎ ತಂತ್ರಜ್ಞಾನದ ವರ್ಗಾವಣೆ ಮಾಡದೇ, ಮೊಡೆರ್ನಾ ಮತ್ತು ಫೈಝರ್ ಲಸಿಕೆಗಳನ್ನು ಭಾರತ ಉತ್ಪಾದನೆ ಮಾಡಲಾಗದು.
ಬಹುತೇಕ ಭಾರತೀಯರಿಗೆ ಲಸಿಕೆಯನ್ನು ಲಭ್ಯವಾಗಿಸಲು ಸಹಾಯವಾಗುವ ಕಾರ್ಯವಿಧಾನಗಳನ್ನು ಕೇಂದ್ರ ಸರ್ಕಾರ ಅಳವಡಿಸಿಕೊಳ್ಳಬೇಕಿದೆ. ಇದರ ಜೊತೆಗೆ, ಭಾರತದಂತಹ ದೊಡ್ಡ ದೇಶಗಳ ಅನುಕೂಲಕ್ಕೆ ಹೆಚ್ಚುವರಿ ಲಸಿಕೆಯನ್ನು ಒದಗಿಸಲು ಸುಧಾರಿತ ದೇಶಗಳು ಮುಂದೆ ಬರುವ ಅಗತ್ಯವಿದೆ. ರಾಜ್ಯಗಳ ದೃಷ್ಟಿಕೋನಗಳನ್ನು ಒಪ್ಪಿಕೊಳ್ಳಲು ನಿರಾಕರಿಸುವ ಮನಸ್ಥಿತಿಯನ್ನು ಕೇಂದ್ರ ಸರ್ಕಾರ ಒಪ್ಪಿದರೆ ಮಾತ್ರ ದೇಶ ಈ ಸನ್ನಿವೇಶದಿಂದ ಮುಕ್ತಿ ಪಡೆಯಬಹುದು.