ತಿರುವನಂತಪುರ(ಕೇರಳ):ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಈ ವೇಳೆ, ಮಾಧ್ಯಮಗಳು ಚುನಾವಣ ಪೂರ್ವ ಸಮೀಕ್ಷೆಗಳನ್ನು ನಡೆಸಿ ಫಲಿತಾಂಶಗಳನ್ನು ಪ್ರಕಟಿಸಿವೆ. ಸಮೀಕ್ಷೆಯ ಫಲಿತಾಂಶಗಳು ಎಡಪಂಥೀಯರು ಎರಡನೇ ಅವಧಿಗೆ ಮತ್ತೆ ಅಧಿಕಾರಕ್ಕೆ ಬರಲಿದ್ದಾರೆ ಮತ್ತು ಪಿಣರಾಯಿ ವಿಜಯನ್ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಸೂಚಿಸುತ್ತಿದೆ.
ವಿವಾದ - ಸಮೀಕ್ಷೆಗಳ ನಡುವೆ ನಡೆಯಲಿದೆ ಕೇರಳ ವಿಧಾನಸಭಾ ಚುನಾವಣೆ
ಕೇರಳದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ವಿವಾದಗಳು, ಐಟಿ ದಾಳಿಗಳು ನಡೆಯುತ್ತಿದೆ. ಆದರೆ, ಕೆಲ ಮಾಧ್ಯಮಗಳು ಚುನಾವಣ ಪೂರ್ವ ಸಮೀಕ್ಷೆಗಳನ್ನು ನಡೆಸಿ ಫಲಿತಾಂಶಗಳನ್ನು ಪ್ರಕಟಿಸುತ್ತಿವೆ.
ಪ್ರತಿಪಕ್ಷದ ಭಾಗವಾಗಿಲ್ಲದಿದ್ದರೂ, ಪಿಣರಾಯಿ ವಿಜಯನ್ ಅವರನ್ನು ಟೀಕಿಸುವಲ್ಲಿ ನಾಯರ್ ಸರ್ವಿಸ್ ಸೊಸೈಟಿ (ಎನ್‌ಎಸ್‌ಎಸ್) ಮುಂಚೂಣಿಯಲ್ಲಿದೆ. ಕಳೆದ ನಾಲ್ಕು ದಿನಗಳಿಂದ ಎನ್‌ಎಸ್‌ಎಸ್ ಮತ್ತು ಎಲ್‌ಡಿಎಫ್ ನಾಯಕರು ಪರಸ್ಪರರ ವಿರುದ್ಧ ಎದ್ದಿರುವ ಆರೋಪಗಳು ಮತ್ತು ಪ್ರತಿ - ಆರೋಪಗಳಿಗೆ ಅಂತ್ಯವಿಲ್ಲ.
ಈ ಎಲ್ಲದರ ಮಧ್ಯೆ, ಆದಾಯ ತೆರಿಗೆ ಇಲಾಖೆ ಗುರುವಾರ ಕೇರಳ ಮೂಲಸೌಕರ್ಯ ಹೂಡಿಕೆ ನಿಧಿ ಮಂಡಳಿ (ಕೆಐಐಎಫ್‌ಬಿ)ಯ ಮೇಲೆ ದಾಳಿ ನಡೆಸಿತು. ಕೆಐಐಎಫ್‌ಬಿ ವಿರುದ್ಧ ಜಾರಿ ಇಲಾಖೆಯ ತನಿಖೆ ಈ ಹಿಂದೆ ವಿವಾದಾಸ್ಪದವಾಗಿತ್ತು. ಜಾರಿ ನಿರ್ದೇಶನಾಲಯವನ್ನು ಅನುಸರಿಸಿ, ಮತ್ತೊಂದು ಕೇಂದ್ರ ಸಂಸ್ಥೆ ಐಟಿ ಇಲಾಖೆ ಕೆಐಐಎಫ್‌ಬಿಯಲ್ಲಿ ದಾಳಿ ನಡೆಸಿದೆ. ಕೇಂದ್ರವು ಕೆಐಐಎಫ್‌ಬಿಯನ್ನು ನಾಶಮಾಡಲು ಪ್ರಯತ್ನಿಸುತ್ತಿದೆ ಎಂಬ ಆರೋಪದ ಮಧ್ಯೆ, ಹೊಸ ತನಿಖೆ ಮತ್ತು ದಾಳಿಗಳನ್ನು ತಿರುವನಂತಪುರಂನ ಕೆಐಐಎಫ್‌ಬಿ ಕೇಂದ್ರ ಕಚೇರಿಯಲ್ಲಿ ನಡೆಸಲಾಗಿದೆ.