ಕರ್ನಾಟಕ

karnataka

ETV Bharat / bharat

ಮುಗಿಯದ ಬಿಕ್ಕಟ್ಟು: ಕೇಂದ್ರ-ರೈತ ಸಂಘಟನೆಗಳ ನಡುವೆ ಜ.19ಕ್ಕೆ ಮತ್ತೊಂದು ಸುತ್ತಿನ ಮಾತುಕತೆ - ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ

Rakesh Tikait
Rakesh Tikait

By

Published : Jan 15, 2021, 5:05 PM IST

Updated : Jan 15, 2021, 5:38 PM IST

17:02 January 15

ಕೇಂದ್ರ-ರೈತ ಸಂಘಟನೆಗಳ ನಡುವಿನ ಮಾತುಕತೆ ಮುಕ್ತಾಯ

ನವದೆಹಲಿ:ಕೇಂದ್ರ ಸರ್ಕಾರ ಹೊರತಂದಿರುವ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆ ಮುಂದುವರೆಯುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದ್ದು, ಇಂದು ನಡೆದ 9ನೇ ಸುತ್ತಿನ ಮಾತುಕತೆ ಕೂಡ ಯಾವುದೇ ಅಂತಿಮ ನಿರ್ಧಾರಕ್ಕೆ ಬರದೇ ಮುಕ್ತಾಯಗೊಂಡಿದೆ.  

ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಮಾತುಕತೆಯಲ್ಲಿ 40 ರೈತ ಸಂಘಟನೆಗಳ ಮುಖಂಡರು ಹಾಗೂ ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ತೋಮರ್​, ಪಿಯೂಷ್ ಗೋಯಲ್​ ಹಾಗೂ ಸೋಮ ಪ್ರಕಾಶ್ ಭಾಗಿಯಾಗಿದ್ದರು. ಈ ವೇಳೆ ರೈತ ಮುಖಂಡರು ತಮ್ಮ ನಿರ್ಧಾರದಲ್ಲಿ ಮೃದುವಾಗಿರಬೇಕು ಎಂದು ಕೇಂದ್ರ ಮನವಿ ಮಾಡಿದೆ. ಆದರೆ ರೈತ ಸಂಘಟನೆಗಳು ಯಾವುದೇ ಕಾರಣಕ್ಕೂ ತಮ್ಮ ಪಟ್ಟು ಸಡಲಿಕೆ ಮಾಡುವುದಿಲ್ಲ ಎಂದಿರುವ ಕಾರಣ ಒಂಬತ್ತನೇ ಸುತ್ತಿನ ಮಾತುಕತೆ ವಿಫಲಗೊಂಡಿದೆ.

ಇದನ್ನೂ  ಓದಿ: 50ನೇ ದಿನಕ್ಕೆ ಕಾಲಿಟ್ಟ ಆಂದೋಲನ: ಗಡಿ ದಾಟಲು ಅನುಮತಿ ಇಲ್ಲದೇ ಆಟೋ ಚಾಲಕರ ಆಕ್ರಂದನ

ಇನ್ನು ಸುಪ್ರೀಂಕೋರ್ಟ್​ನಿಂದ ನೇಮಕಗೊಂಡಿರುವ ಸಮಿತಿಯಲ್ಲಿ ತಾವು ಭಾಗಿಯಾಗುವುದಿಲ್ಲ ಎಂದು ರೈತ ಸಂಘಟನೆಗಳು ಕೇಂದ್ರದ ಮುಂದೆ ಹೇಳಿದ್ದು, ಕೇಂದ್ರದೊಂದಿಗಿನ ಮಾತುಕತೆ ಮೂಲಕ ತಾವು ಪರಿಹಾರ ಕಂಡುಕೊಳ್ಳಲು ಸಿದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ. ಹೀಗಾಗಿ ಮುಂದಿನ ಹಂತದ ಮಾತುಕತೆ ಜನವರಿ 19ರಂದು ನಡೆಯಲಿದೆ. ಇದರ ಮಧ್ಯೆ ರೈತರು ತಮ್ಮ ಪ್ರತಿಭಟನೆ ಮುಂದುವರೆಸುವ ಸಾಧ್ಯತೆ ಇದೆ.

ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ರೈತ ಸಂಘಟನೆಗಳು ನವೆಂಬರ್​ 26ರಿಂದಲೂ ಪ್ರತಿಭಟನೆ ನಡೆಸುತ್ತಿವೆ.

Last Updated : Jan 15, 2021, 5:38 PM IST

ABOUT THE AUTHOR

...view details