ನವದೆಹಲಿ:1990ರಲ್ಲಿ ಕಾಶ್ಮೀರಿ ಪಂಡಿತರ ಮೇಲೆ ಇಸ್ಲಾಂ ಮೂಲಭೂತವಾದಿಗಳು ನಡೆಸಿದ ಭೀಕರ ಹಿಂಸೆ, ಸಾಮೂಹಿಕ ಅತ್ಯಾಚಾರದ ಘಟನಾವಳಿಗಳನ್ನು ದಿ ಕಾಶ್ಮೀರಿ ಫೈಲ್ಸ್ ಚಿತ್ರ ತೆರೆದಿಟ್ಟಿದ್ದು ಗೃಹ ಸಚಿವ ಅಮಿತ್ ಶಾ ಕೂಡ ಮೆಚ್ಚುಗೆ ವ್ಯಕ್ತಪಡಿಸಿ, ಇದೊಂದು ಸತ್ಯದ ದಿಟ್ಟ ಪ್ರಾತಿನಿಧ್ಯ ಎಂದು ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅಮಿತ್ ಶಾ, ದಿ ಕಾಶ್ಮೀರಿ ಫೈಲ್ಸ್ ಚಿತ್ರ ಕಾಶ್ಮೀರಿ ಪಂಡಿತರ ನೋವು, ಕಣಿವೆ ನಾಡಿನಿಂದ ಕಾಶ್ಮೀರಿ ಪಂಡಿತರ ಬಲವಂತದ ವಲಸೆಯ ಸತ್ಯದ ದಿಟ್ಟ ಪ್ರತಿಬಿಂಬವಾಗಿದೆ. ಈ ಚಿತ್ರವು ಇಂತಹ ತಪ್ಪುಗಳು ಪುನರಾವರ್ತನೆಯಾಗದಂತೆ ಸಮಾಜ ಮತ್ತು ದೇಶವನ್ನು ಜಾಗೃತಗೊಳಿಸುವ ಕೆಲಸ ಮಾಡುತ್ತದೆ ಎಂದಿದ್ದಾರೆ.
ಇಂದು 'The Kashmir Files' ಚಿತ್ರ ತಂಡವನ್ನು ಭೇಟಿ ಮಾಡಿದೆ. ಕಾಶ್ಮೀರಿ ಪಂಡಿತರ ನೋವು ಅವರ ಹೋರಾಟದ ಸತ್ಯಾಂಶ ಚಿತ್ರದ ಮೂಲಕ ಇಡೀ ಜಗತ್ತಿಗೆ ಗೊತ್ತಾಗಿದೆ ಎಂದು ಬರೆದುಕೊಂಡಿದ್ದಾರೆ.