ಶ್ರಾವಸ್ತಿ (ಉ.ಪ್ರ) :ಉತ್ತರಪ್ರದೇಶದ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಈ ನಡುವೆ ನಾಲೆ ಉಕ್ಕಿ ಹರಿದ ಪರಿಣಾಮ ಮದುವೆಗೆಂದು ತೆರಳಿದ್ದ ವರ ಗ್ರಾಮದೊಳಗೆ ಸಿಲುಕಿದ್ದ ಪ್ರಸಂಗ ನಡೆದಿದೆ. ಮದುವೆಯ ದಿನ ವಧುವಿನ ಮನೆಗೆ ತೆರಳಿದ್ದ ವೇಳೆ ಧಾರಾಕಾರ ಮಳೆಯಾಗಿದೆ. ಹೀಗಾಗಿ, ಎರಡು ಗ್ರಾಮಗಳ ನಡುವೆ ಹರಿಯುವ ನಾಲೆ ತುಂಬಿ ಹೋಗಿದೆ. ನಾಲೆ ದಾಟಲು ಸೇತುವೆ ಇಲ್ಲದ ಕಾರಣ ವರ ಆ ಗ್ರಾಮದಲ್ಲಿ 2 ದಿನಗಳ ಕಾಲ ಉಳಿಯಬೇಕಾದ ಪ್ರಸಂಗ ಎದುರಾಗಿತ್ತು.
ಮದುವೆ ನಿಶ್ಚಯವಾಗಿದ್ದ ಹಿನ್ನೆಲೆ ವರ ಮೆರವಣಿಗೆಯ ಮೂಲಕ ವಧುವಿನ ಗ್ರಾಮಕ್ಕೆ ತೆರಳಿದ್ದ. ಆದರೆ, ಇದ್ದಕ್ಕಿದ್ದಂತೆ ಸುರಿದ ಮಳೆಗೆ ನಾಲೆ ತುಂಬಿ ಹರಿದಿದೆ. ಹೀಗಾಗಿ, ಮದುವೆ ಮುಗಿಸಿ ವಾಪಸು ಬರಲಾಗದೆ ಅದೇ ಗ್ರಾಮದಲ್ಲಿ ಮೆರವಣಿಗೆ ಸಮೇತ ಉಳಿದುಕೊಂಡಿದ್ದ. 2 ದಿನದ ಬಳಿಕ ಮಳೆ ನಿಂತಾಗ ಗ್ರಾಮದ ಹತಿಯಕುಂದ ಬಳಿ ನಾಲೆ ದಾಟಲು ಆಗಮಿಸಿದ್ದಾರೆ.