ನವದೆಹಲಿ: ಅರುಣಾಚಲ ಪ್ರದೇಶದ ತವಾಂಗ್ನಲ್ಲಿ ಭಾರತೀಯ ಸೇನೆ ತೋರಿದ ಧೈರ್ಯ ಮತ್ತು ಶೌರ್ಯಕ್ಕೆ ಎಷ್ಟು ಹೊಗಳಿದರೂ ಸಾಲದು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಎಫ್ಐಸಿಸಿಐನಲ್ಲಿ ಮಾತನಾಡಿದ ಅವರು, ಇದೇ ವೇಳೆ ಚೀನಾ ಜೊತೆಗಿನ ಗಡಿ ವಿವಾದವನ್ನು ಸರ್ಕಾರ ನಿಭಾಯಿಸುತ್ತಿರುವ ಬಗ್ಗೆ ರಾಹುಲ್ ಗಾಂಧಿ ಅನುಮಾನ ವ್ಯಕ್ತಪಡಿಸಿದರ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ತವಾಂಗ್ ಅಥವಾ ಗಾಲ್ವಾನ್ನಲ್ಲಿ ಭಾರತೀಯ ಸೇನೆ ತೋರಿದ ದಿಟ್ಟತನ ಪ್ರಶಂಸನೀಯ. ಇದನ್ನು ಮಾತಿನಲ್ಲಿ ಬಣ್ಣಿಸಲು ಸಾಧ್ಯವಿಲ್ಲ ಎಂದು ಸಂತಸ ಹಂಚಿಕೊಂಡಿದ್ದಾರೆ.
ವಿಪಕ್ಷಗಳ ಯಾವುದೇ ನಾಯಕರ ಗುರಿಯನ್ನು ನಾವು ಎಂದಿಗೂ ಪ್ರಶ್ನಿಸಿಲ್ಲ. ನಿಯಮದ ಆಧಾರದ ಮೇಲೆ ನಾವು ಅದನ್ನು ಚರ್ಚಿಸಿದ್ದೇವೆ. ರಾಜಕೀಯ ಸತ್ಯದ ಆಧಾರದ ಮೇಲೆ ಇರಬೇಕು. ಸುಳ್ಳಿನ ಅಧಾರದ ಮೇಲೆ ರಾಜಕೀಯವನ್ನು ದೀರ್ಘಕಾಲ ನಡೆಸಲು ಸಾಧ್ಯವಿಲ್ಲ ಎಂದರು.
ಸಮಾಜವನ್ನು ಸರಿಯಾದ ಹಾದಿಯಲ್ಲಿ ಕರೆದುಕೊಂಡು ಹೋಗುವುದು ರಾಜನೀತಿ. ಯಾವುದೇ ವಿಷಯದಲ್ಲಿ ಯಾರೇ ಆಗಲಿ, ಅನುಮಾನ ವ್ಯಕ್ತಪಡಿಸುವುದರ ಹಿಂದಿನ ಕಾರಣ ನನಗೆ ಅರ್ಥವಾಗುತ್ತಿಲ್ಲ ಎಂದಿದ್ದಾರೆ.
ಇನ್ನು, ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತದ ಬೆಳವಣಿಗೆ ಗಮನಾರ್ಹವಾಗಿ ಹೆಚ್ಚಿದೆ. ಈಗ ಭಾರತವು ವಿಶ್ವ ವೇದಿಕೆಯಲ್ಲಿ ಅಜೆಂಡಾ ರೂಪಿಸುವ ಕೆಲಸ ಮಾಡುತ್ತಿದೆ ಎಂದು ರಾಜನಾಥ್ ಸಿಂಗ್ ಹೇಳಿದರು.
ಇದನ್ನೂ ಓದಿ: ಇಂದಿನ ಭಾರತ-ಚೀನಾ ಗಡಿ ಪರಿಸ್ಥಿತಿಗೆ ನೆಹರು ಕಾರಣ: ಅರುಣಾಚಲ ಪ್ರದೇಶ ಸಿಎಂ