ಅನಕಾಪಲ್ಲಿ (ಆಂಧ್ರಪ್ರದೇಶ) :2019 ರಲ್ಲಿ ಕಳ್ಳತನವಾಗಿದ್ದ ಬುಲೆಟ್ ಮೋಟಾರ್ ಸೈಕಲ್ ಈಗ ಪೊಲೀಸರಿಗೆ ಸಿಕ್ಕಿಬಿದ್ದಿದೆ. ಅದು ಹೇಗೆ ಸಾಧ್ಯವಾಯಿತು ಎಂದು ನೀವು ತಿಳಿದರೆ ಬೆಚ್ಚಿ ಬೀಳುತ್ತಿರಾ.
ತಂತ್ರಜ್ಞಾನಗಳ ಬಳಕೆಯಂತೂ ಈಗ ಎಲ್ಲ ಕಡೆ ಆವರಿಸಿಬಿಟ್ಟಿದೆ. ಪೊಲೀಸರು ಮತ್ತು ತನಿಖಾ ಸಂಸ್ಥೆಗಳು ಈಗ ಹಲವು ಪ್ರಕರಣಗಳ ನಿಗೂಢತೆಯನ್ನು ಭೇದಿಸಲು ತಂತ್ರಜ್ಞಾನವನ್ನು ಹೆಚ್ಚು ಅವಲಂಬಿಸಿದ್ದಾರೆ. ಈ ಕ್ರಮದಲ್ಲಿ ಪೊಲೀಸರು ಅನಿರೀಕ್ಷಿತವಾಗಿ 3 ವರ್ಷಗಳ ಹಿಂದೆ ಕಳ್ಳತನವಾಗಿದ್ದ ಬುಲೆಟ್ ದ್ವಿಚಕ್ರವಾಹನವನ್ನು ಕಂಡು ಹಿಡಿದಿದ್ದಾರೆ. ಪೊಲೀಸ್ ಅಪ್ಲಿಕೇಶನ್ ಇದಕ್ಕೆ ಸಹಾಯ ಮಾಡಿದೆ.
ಅನಕಾಪಲ್ಲಿ ಜಿಲ್ಲೆ ನರಸೀಪಟ್ಟಣ ಎಸ್‌ಎಸ್ ಲಕ್ಷ್ಮಣ ರಾವ್ ಅವರು ತಮ್ಮ ತಂಡದೊಂದಿಗೆ ಶನಿವಾರ ಅಬಿದ್ ಕೂಡಲಿಯಲ್ಲಿ ರಾತ್ರಿ ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಆಲೂರಿ ಜಿಲ್ಲೆಯ ಚಿಂತಪಲ್ಲಿಯ ಯುವಕ ಸೀತಾರಾಮರಾಜು ಬುಲೆಟ್ ಗಾಡಿಯಲ್ಲಿ ಬಂದಿದ್ದಾನೆ. ಅವನನ್ನು ತಡೆದು ದಾಖಲೆಗಳನ್ನು ತೋರಿಸಲು ಕೇಳಲಾಯಿತು.