ನವದೆಹಲಿ: ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಹೇಳಿಕೆಗಳು ಜಾಗತಿಕ ಮಟ್ಟದಲ್ಲಿ ಭಾರತದ ಪ್ರತಿಷ್ಠೆಗೆ ಧಕ್ಕೆ ತಂದಿವೆ. ಸಾರ್ವಜನಿಕವಾಗಿ ಇಂಥ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವ ಕೆಟ್ಟ ಅಭ್ಯಾಸವನ್ನು ಅವರು ಬೆಳೆಸಿಕೊಂಡಿದ್ದಾರೆ ಎಂದು ಮಾಜಿ ವಿದೇಶಾಂಗ ಕಾರ್ಯದರ್ಶಿ ಕನ್ವಾಲ್ ಸಿಬಲ್ ಹೇಳಿದ್ದಾರೆ.
ಈಟಿವಿ ಭಾರತದೊಂದಿಗೆ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಕನ್ವಾಲ್ ಸಿಬಲ್, ತರೂರ್ ಅಂತಾರಾಷ್ಟ್ರೀಯ ನಿಯತಕಾಲಿಕೆಗಳು ಮತ್ತು ಪತ್ರಿಕೆಗಳಿಗೆ ಆಗಾಗ ಲೇಖನಗಳನ್ನು ಬರೆಯುತ್ತಾರೆ. ಈ ಹಿಂದೆ ಇಸ್ರೇಲಿ ಪತ್ರಿಕೆಯಾದ ಹಾರೆಟ್ಜ್‌ಗೆ ಲೇಖನವನ್ನು ಬರೆದಿದ್ದರು. ಆ ಲೇಖನದಲ್ಲಿ ಭಾರತದ ಬಗ್ಗೆ ಅತ್ಯಂತ ಕೆಟ್ಟದಾಗಿ ಬಿಂಬಿಸಲಾಗಿತ್ತು. ಅವರ ನಕಾರಾತ್ಮಕ ಲೇಖನಕ್ಕೆ ಪ್ರತಿಕ್ರಿಯೆಯಾಗಿ ನಾನೂ ಸಹ ಲೇಖನವನ್ನು ಬರೆದಿದ್ದೇನೆ. ಅವರು ಬರೆಯುವ ರೀತಿ ಭಾರತದ ಬಗ್ಗೆ ಅತ್ಯಂತ ನಕಾರಾತ್ಮಕ ಭಾವನೆಯನ್ನು ಮೂಡಿಸುತ್ತದೆ. ಇಂಥ ಕೆಲಸಗಳನ್ನು ಅವರು ನಿರಂತರವಾಗಿ ಮಾಡುತ್ತಿದ್ದಾರೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕನ್ವಾಲ್ ಸಿಬಲ್ ಅಸಮಾಧಾನಕ್ಕೆ ಕಾರಣವೇನು?:ಶುಕ್ರವಾರಷ್ಟೇ ಮಿಜ್ಬಿಲ್ ಅಲ್ ಶುರೇಖಾ ಎಂಬ ವಕೀಲ ಭಾರತ ವಿರೋಧಿ ಧೋರಣೆಯಿಂದ ಟ್ವೀಟ್ ಮಾಡಿದ್ದ. ಭಾರತದ ಆಡಳಿತಾರೂಢ ಬಿಜೆಪಿಯ ಯಾವುದೇ ಸದಸ್ಯರು ಕುವೈತ್ ಪ್ರವೇಶಿಸುವುದನ್ನು ತಕ್ಷಣವೇ ನಿಷೇಧಿಸಲು ಕುವೈತ್‌ನ ಸಂಸದರ ಗುಂಪು ಅಲ್ಲಿನ ಸರ್ಕಾರವನ್ನು ಒತ್ತಾಯಿಸಿದೆ. ಮುಸ್ಲಿಂ ಹೆಣ್ಣುಮಕ್ಕಳು ಸಾರ್ವಜನಿಕವಾಗಿ ಕಿರುಕುಳಕ್ಕೊಳಗಾಗುವುದನ್ನು ನಾವು ನೋಡಿಕೊಂಡು ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಪಾಕಿಸ್ತಾನಿ ಏಜೆಂಟ್ ಎನ್ನಲಾದ ವ್ಯಕ್ತಿ ಟ್ವೀಟ್ ಮಾಡಿದ್ದ.
ಈ ಟ್ವೀಟ್ ಅನ್ನು ರಿಟ್ವೀಟ್ ಮಾಡಿದ್ದ ಶಶಿ ತರೂರ್ 'ಭಾರತದಲ್ಲಿ ಹೆಚ್ಚುತ್ತಿರುವ ಇಸ್ಲಾಮೋಫೋಬಿಯಾವನ್ನು ಖಂಡಿಸಲು ಪ್ರಧಾನಿಗೆ ಆಸಕ್ತಿಯಿಲ್ಲ ಎಂದು ಗಲ್ಫ್ನಲ್ಲಿರುವ ನನ್ನ ಸ್ನೇಹಿತರು ನಿರಾಸೆ ವ್ಯಕ್ತಪಡಿಸಿದ್ದಾರೆ. ದೇಶೀಯ ಕ್ರಮಗಳು ಅಂತಾರಾಷ್ಟ್ರೀಯ ಪರಿಣಾಮಗಳನ್ನು ಹೊಂದಿವೆ' ಎಂದು ಪ್ರತಿಕ್ರಿಯೆ ನೀಡಿದ್ದರು.
ಶಶಿ ತರೂರ್ ಅವರ ಟ್ವೀಟ್ಗೆ ಸಂಬಂಧಿಸಿದಂತೆ ಭಾರತದ ಸಂಸತ್ತಿನ ಸದಸ್ಯರೊಬ್ಬರು ಭಾರತ ವಿರೋಧಿ ಚಟುವಟಿಕೆಗಳಿಗಾಗಿ ನೀಡುವ ಪಾಕಿಸ್ತಾನದ ಪ್ರಶಸ್ತಿ 'ಅಂಬಾಸಿಡರ್ ಆಫ್ ಪೀಸ್' ಪುರಸ್ಕೃತರಾಗಿರುವ ಪಾಕಿಸ್ತಾನಿ ಏಜೆಂಟ್‌ನ ಭಾರತ ವಿರೋಧಿ ಟ್ವೀಟ್ ಅನ್ನು ಮರುಟ್ವೀಟ್ ಮಾಡುವುದನ್ನು ನೋಡಲು ಬೇಸರವಾಗಿದೆ. ಇಂತಹ ಭಾರತ ವಿರೋಧಿ ಅಂಶಗಳನ್ನು ನಾವು ಪ್ರೋತ್ಸಾಹಿಸಬಾರದು ಎಂದು ಕುವೈತ್‌ನ ಭಾರತೀಯ ರಾಯಭಾರ ಕಚೇರಿ ಅಸಮಾಧಾನ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಕನ್ವಾಲ್ ಸಿಬಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಬಲ್ ಕೂಡ ತರೂರ್ ವಿರುದ್ಧ ಟ್ವಿಟರ್‌ನಲ್ಲಿ ವಾಗ್ದಾಳಿ ನಡೆಸಿದ್ದಾರೆ. ವಿದೇಶಿ ಪ್ರಕಟಣೆಗಳಲ್ಲಿ ಅದೇ ಧಾಟಿಯಲ್ಲಿ ಬರೆಯುವ ಬದಲು ಈ ತಪ್ಪು ಅನಿಸಿಕೆಗಳನ್ನು ತೆಗೆದುಹಾಕಿ. ಸೌದಿ ಸೇನಾ ಮುಖ್ಯಸ್ಥ ಮತ್ತು ಒಮನ್ ನೌಕಾ ಮುಖ್ಯಸ್ಥರು ಈಗಷ್ಟೇ ಭಾರತಕ್ಕೆ ಭೇಟಿ ನೀಡಿದ್ದಾರೆ. ಭಾರತ ಯುಎಇಯೊಂದಿಗೆ ಮುಕ್ತ ವ್ಯಾಪಾರಕ್ಕೆ ಸಹಿ ಮಾಡಿದೆ. ಮೋದಿಯನ್ನು ದೂಷಿಸುವುದನ್ನು ಕ್ಷಮಿಸುವುದೇಕೆ? ಹಿಂದೂಫೋಬಿಯಾ ಪ್ರಾರಂಭವಾಗಲಿದೆ ಎಂದು ಟ್ವೀಟ್ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು.
ರಾಹುಲ್ ಮಾತನಾಡುವುದು ಮುಗಿದಿದೆ:ಈಗ ಈಟಿವಿ ಭಾರತ ಸಂದರ್ಶನದಲ್ಲಿ ತರೂರ್ ಅವರ ನಡೆಯನ್ನು ಕಾಂಗ್ರೆಸ್ ಗಮನಿಸಬೇಕೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಬಲ್, ರಾಹುಲ್ ಗಾಂಧಿ ನರೇಂದ್ರ ಮೋದಿಯ ಬಗ್ಗೆ ಮಾತನಾಡುವ ಮತ್ತು ಬರೆಯುವುದು ಮುಗಿದಿದೆ. ಕಳೆದ ವರ್ಷ ಸಂವಾದವೊಂದರಲ್ಲಿ ರಾಹುಲ್ ಗಾಂಧಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದಿಂದ ಭಾರತದ ಪ್ರಜಾಪ್ರಭುತ್ವಕ್ಕೆ ಅಡ್ಡಿಯಾಗುತ್ತಿರುವುದನ್ನು ಅಮೆರಿಕ ಏಕೆ ಗಮನಿಸುತ್ತಿಲ್ಲ ಎಂದು ಕೇಳಿದ್ದರು. ಭಾರತದ ಆಂತರಿಕ ರಾಜಕೀಯದಲ್ಲಿ ಮಧ್ಯಪ್ರವೇಶಿಸುವಂತೆ ಕೇಳಿಕೊಂಡಿದ್ದರು. ಆದ್ದರಿಂದ ಕಾಂಗ್ರೆಸ್ ಪಕ್ಷದಿಂದ ಇಂಥ ನಿರೀಕ್ಷೆ ಅಸಾಧ್ಯ ಎಂದಿದ್ದಾರೆ. ಕಾಂಗ್ರೆಸ್ ಆದೇಶ ವ್ಯರ್ಥ ಎಂಬ ಅರ್ಥದಲ್ಲಿ ಸಿಬಲ್ ಹೇಳಿದ್ದಾರೆ.
ಆಂತರಿಕ ರಾಜಕೀಯ ಮತ್ತು ಬಾಹ್ಯ ವ್ಯವಹಾರಗಳಲ್ಲಿ ಸ್ಪಷ್ಟವಾದ ರೇಖೆಯಿದೆ. ಅದು ಆದರ್ಶ ಮತ್ತು ನೈತಿಕ ಪರಿಕಲ್ಪನೆಯಾಗಿದೆ ಎಂದು ಸಿಬಲ್ ಹೇಳಿದ್ದು, 2012ರ ಕೊನೆಯಲ್ಲಿ 65 ಸಂಸದರು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರಿಗೆ ನರೇಂದ್ರ ಮೋದಿಗೆ ಅಮೆರಿಕ ವೀಸಾ ನೀಡಬಾರದೆಂದು ಮನವಿ ಮಾಡಿ ಪತ್ರ ಬರೆದಿದ್ದರು. ಇಲ್ಲಿನ ಪ್ರಜಾಪ್ರಭುತ್ವ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಿಳಿದುಕೊಳ್ಳಲು ಇದೊಂದೇ ಘಟನೆ ಸಾಕು ಎಂದು ಸಿಬಲ್ ಅಭಿಪ್ರಾಯಪಟ್ಟಿದ್ದಾರೆ.