ಕರ್ನಾಟಕ

karnataka

ETV Bharat / bharat

ಕಾಂಗ್ರೆಸ್​ ಪಕ್ಷಕ್ಕೆ ಶಕ್ತಿ ತುಂಬಲು, ಶೀಘ್ರವೇ ಹೊಸ ನಾಯಕತ್ವ ಬೇಕು : ಶಶಿ ತರೂರ್​ - ಸಂಸದ ಶಶಿ ತರೂರ್​

ಒಂದು ವೇಳೆ ರಾಹುಲ್​ ಗಾಂಧಿ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲು ಬಯಸಿದರೆ, ಆದಷ್ಟು ಬೇಗ ಅದು ಕಾರ್ಯರೂಪಕ್ಕೆ ಬರಬೇಕು ಎಂದಿರುವ ಕಾಂಗ್ರೆಸ್​ನ ಹಿರಿಯ ಮುಖಂಡ, ದೇಶದಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕಾರೆ ಈ ಕೆಲಸ ಬೇಗ ನಡೆಯಬೇಕು..

Shashi Tharoor
Shashi Tharoor

By

Published : Sep 18, 2021, 10:16 PM IST

ಕೊಚ್ಚಿ(ಕೇರಳ):ಕಳೆದ ಎರಡು ವರ್ಷಗಳಿಂದ ಕಾಂಗ್ರೆಸ್​ ಶಾಶ್ವತ ಅಧ್ಯಕ್ಷರನ್ನ ಹೊಂದಿಲ್ಲ. ಪಕ್ಷದಲ್ಲಿ ಶಕ್ತಿ ತುಂಬಲು ಇದೀಗ ಖಾಯಂ ಅಧ್ಯಕ್ಷರನ್ನ ಹುಟ್ಟುಹಾಕಬೇಕಾಗಿದೆ ಎಂದು ಲೋಕಸಭಾ ಸಂಸದ ಶಶಿ ತರೂರ್​ ಅಭಿಪ್ರಾಯಪಟ್ಟಿದ್ದಾರೆ.

ಕೇರಳದ ಕೊಚ್ಚಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕಾಂಗ್ರೆಸ್​ ಪಕ್ಷಕ್ಕೆ ಹೊಸ ನಾಯಕತ್ವದ ಅವಶ್ಯಕತೆ ಇದೆ. ನಾವೆಲ್ಲರೂ ಸೋನಿಯಾ ಗಾಂಧಿಯವರ ನಾಯಕತ್ವ ಇಷ್ಟಪಟ್ಟಿದ್ದೇವೆ. ಅವರ ಬಗ್ಗೆ ಯಾವುದೇ ರೀತಿಯ ಬಿನ್ನಾಭಿಪ್ರಾಯವಿಲ್ಲ. ಆದರೆ, ಖುದ್ದಾಗಿ ಅವರು ರಾಜೀನಾಮೆ ನೀಡಲು ಮುಂದಾಗಿರುವ ಕಾರಣ, ಆದಷ್ಟು ಬೇಗ ಹೊಸ ನಾಯಕತ್ವದ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.

ಇದನ್ನೂ ಓದಿರಿ:ಡ್ರಗ್ಸ್​​ ಪರೀಕ್ಷೆಗೊಳಪಡಲು ನಾನು ಸಿದ್ಧ ; ರಾಹುಲ್​ ಗಾಂಧಿಗೆ ಆ ಧೈರ್ಯ ಇದೆಯಾ? ಕೆಟಿಆರ್​ ಪ್ರಶ್ನೆ

ಒಂದು ವೇಳೆ ರಾಹುಲ್​ ಗಾಂಧಿ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲು ಬಯಸಿದರೆ, ಆದಷ್ಟು ಬೇಗ ಅದು ಕಾರ್ಯರೂಪಕ್ಕೆ ಬರಬೇಕು ಎಂದಿರುವ ಕಾಂಗ್ರೆಸ್​ನ ಹಿರಿಯ ಮುಖಂಡ, ದೇಶದಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕಾರೆ ಈ ಕೆಲಸ ಬೇಗ ನಡೆಯಬೇಕು ಎಂದರು.

ಲೋಕಸಭೆ ಚುನಾವಣೆ ಎದುರಿಸಲು ನಾವೆಲ್ಲರೂ ತಯಾರಾಗಬೇಕಾಗಿದ್ದು, ಅದಕ್ಕಾಗಿ ಕಾಂಗ್ರೆಸ್​​ನಲ್ಲಿ ಹೊಸ ನಾಯಕತ್ವಬೇಕು ಎಂದು ಹೇಳಿದ್ದಾರೆ. ಎಐಸಿಸಿ ಅಧ್ಯಕ್ಷರಾಗಿರುವ ಸೋನಿಯಾ ಗಾಂಧಿ ತಮ್ಮ ಕರ್ತವ್ಯದಿಂದ ಮುಕ್ತರಾಗಲು ನಿರ್ಧರಿಸಿದ್ದು, ಇದೀಗ ಹೊಸ ನಾಯಕತ್ವಬೇಕು ಎಂದು ತಿಳಿಸಿದ್ದಾರೆ.

ABOUT THE AUTHOR

...view details