ಚೆನ್ನೈ: ತೆಲಂಗಾಣ ಮೂಲದ ಕರ್ಣಂ ಸಾಯಿ ದಿಲೀಪ್ ಎಂಬುವರು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಅಧ್ಯಯನ ಮಾಡಲು ವಿದ್ಯಾರ್ಥಿ ವೀಸಾಕ್ಕಾಗಿ ನಕಲಿ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.ಅಮೆರಿಕ ರಾಯಭಾರಿ ಕಚೇರಿಯ ಭದ್ರತಾ ಅಧಿಕಾರಿಗಳು ಚೆನ್ನೈ ಪೊಲೀಸ್ ಕಮಿಷನರ್ ಕಚೇರಿಯಲ್ಲಿಈ ಬಗ್ಗೆ ದೂರು ದಾಖಲಿಸಿದ್ದಾರೆ.
ಯುಎಸ್ ರಾಯಭಾರ ಕಚೇರಿಗೆ ಕರ್ಣಂ ಅವರು ಕಳೆದ ಶುಕ್ರವಾರ (ಮೇ 20) ಸಂದರ್ಶನಕ್ಕೆ ಬಂದಿದ್ದರು. ಆ ವೇಳೆ ಅವರು ಸಲ್ಲಿಸಿದ ದಾಖಲೆಗಳು ನಕಲಿ ಎಂದು ತಿಳಿದು ಬಂದಿದೆ. ಆದ್ದರಿಂದ ಕರ್ಣಂ ಮತ್ತು ಅವರು ಸಲ್ಲಿಸಿದ ದಾಖಲೆಗಳನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ವಿವರಿಸಿದರು.