ಕರ್ನಾಟಕ

karnataka

ETV Bharat / bharat

ಆನ್‌ಲೈನ್ ಗೇಮಿಂಗ್ ಗೀಳಿಗೆ ಬಿದ್ದು ₹8 ಲಕ್ಷ ಸಾಲ: ಇಬ್ಬರು ಚಿಕ್ಕ ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ - ಮೊಬೈಲ್​ನಲ್ಲಿ ಗೇಮ್​

ಮಹಿಳೆಯೊಬ್ಬರು ತನ್ನ ಇಬ್ಬರು ಚಿಕ್ಕ ಮಕ್ಕಳೊಂದಿಗೆ ನೀರಿನ ತೊಟ್ಟಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಯಾದಾದ್ರಿ ಭುವನಗಿರಿ ಜಿಲ್ಲೆಯಲ್ಲಿ ಜರುಗಿದೆ.

Telangana woman dies by suicide along with two minor sons
ಇಬ್ಬರು ಚಿಕ್ಕ ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

By

Published : Jun 28, 2023, 10:32 PM IST

Updated : Jun 29, 2023, 11:26 AM IST

ಯಾದಾದ್ರಿ ಭುವನಗಿರಿ (ತೆಲಂಗಾಣ):ಆನ್‌ಲೈನ್ ಗೇಮಿಂಗ್​ನಿಂದಾಗಿ ಸಾಲದ ಸುಳಿಯಲ್ಲಿ ಸಿಲುಕಿದ್ದ ಮಹಿಳೆಯೊಬ್ಬರು ತನ್ನಿಬ್ಬರು ಚಿಕ್ಕ ಮಕ್ಕಳಸಮೇತ ಆತ್ಮಹತ್ಯೆ ಮಾಡಿಕೊಂಡ ಘಟನೆ ತೆಲಂಗಾಣದ ಯಾದಾದ್ರಿ ಭುವನಗಿರಿ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ. ಆನ್‌ಲೈನ್​ ಗೇಮಿಂಗ್​ಗಾಗಿ ಮಹಿಳೆ ಸುಮಾರು 8 ಲಕ್ಷ ರೂಪಾಯಿ ಹಣವನ್ನು ಸಂಬಂಧಿಕರಿಂದ ಸಾಲದ ರೂಪದಲ್ಲಿ ತೆಗೆದುಕೊಂಡಿದ್ದರು. ಇದನ್ನು ಮರಳಿಸುವಂತೆ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಸಾವಿಗೆ ಶರಣಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಲ್ಲಿನ ಮಲ್ಲಿಕಾರ್ಜುನ ನಗರದ ನಿವಾಸಿ, 28 ವರ್ಷದ ರಾಜೇಶ್ವರಿ ಎಂಬಾಕೆ ಮೃತಪಟ್ಟಿದ್ದು, ತನ್ನ 5 ಮತ್ತು 3 ವರ್ಷದ ಗಂಡು ಮಕ್ಕಳೊಂದಿಗೆ ಸಂಜೆ ತನ್ನ ಮನೆಯ ಆವರಣದಲ್ಲಿದ್ದ ನೀರಿನ ಟ್ಯಾಂಕ್‌ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ರಾಜೇಶ್ವರಿ ಪತಿ ಲಾರಿ ಚಾಲಕನಾಗಿದ್ದಾನೆ. ಮತ್ತೊಂದೆಡೆ, ಈಕೆ ಮೊಬೈಲ್​ನಲ್ಲಿ ಗೇಮ್​ಗಳಿಗೆ ಅಂಟಿಕೊಂಡಿದ್ದಳು.

ಇದನ್ನೂ ಓದಿ:ಆನ್​ಲೈನ್​ ಗೇಮಿಂಗ್ ಆ್ಯಪ್ ಮೂಲಕ ಬಾಲಕರ ಮತಾಂತರ ಪ್ರಕರಣ: ಐಬಿ ತನಿಖೆ

ಇದಕ್ಕಾಗಿ ಸಂಬಂಧಿಕರ ಬಳಿ ಅಂದಾಜು 8 ಲಕ್ಷ ರೂಪಾಯಿ ಸಾಲ ಮಾಡಿದ್ದಳು. ಸಾಲದಾತರಿಂದ ನಿರಂತರವಾಗಿ ಕಿರುಕುಳ ಅನುಭವಿಸುತ್ತಿದ್ದಳು. ಮಂಗಳವಾರ ಸಂಜೆ ಕೂಡ ಹಣ ನೀಡಿದ್ದ ಸಂಬಂಧಿಕರೊಬ್ಬರು ಆಕೆಯ ಮನೆಗೆ ಬಂದು ಸಾಲವನ್ನು ಮರುಪಾವತಿಸುವಂತೆ ಕೇಳಿದ್ದಾರೆ. ಇದೇ ವಿಷಯವಾಗಿ ರಾಜೇಶ್ವರಿ ದಂಪತಿ ಸಾಲ ನೀಡಿದವರ ನಡುವೆ ತೀವ್ರ ವಾಗ್ವಾದ ನಡೆದಿದೆ. ಆಗ ಜಮೀನು ಮಾರಾಟ ಮಾಡಿ ಹಣ ಪಾವತಿಸುವುದಾಗಿ ದಂಪತಿ ತಿಳಿಸಿದ್ದಾರೆ. ಆದರೆ, ಸುಮಾರು ಹೊತ್ತು ಗಲಾಟೆ ಮುಂದುವರೆದಿದೆ.

ಕೊನೆಗೆ ಪತಿಯೇ ಮನೆಯಿಂದ ಹೊರಗಡೆ ಹೋಗಿದ್ದಾನೆ. ಮತ್ತೊಂದೆಡೆ, ಸಾಲ ನೀಡಿದವರು ಸಹ ಸ್ಥಳದಿಂದ ತೆರಳಿದ್ದಾನೆ. ಮತ್ತೊಂದೆಡೆ, ಇಡೀ ಘಟನೆಯಿಂದ ತನ್ನ ಜೀವನವನ್ನೇ ಕೊನೆಗೊಳಿಸಿದ್ದಾಳೆ. ಸಂಜೆ ಏಳು ಗಂಟೆ ಸುಮಾರಿಗೆ ಪತಿ ಮನೆಗೆ ಹಿಂತಿರುಗಿದ್ದಾನೆ. ಆಗ ಮನೆಯಲ್ಲಿ ಹೆಂಡತಿ ಮತ್ತು ಮಕ್ಕಳು ಕಾಣದೆ ಗಾಬರಿಗೊಂಡಿದ್ದಾನೆ. ಮನೆ ಹಾಗೂ ಸುತ್ತ-ಮುತ್ತ ಅವರಿಗಾಗಿ ಹುಡುಕಾಟ ನಡೆಸಿದ್ದಾನೆ. ಆದರೆ, ಎಲ್ಲೂ ಕಾಣಿಸಿಲ್ಲ. ಕೊನೆಗೆ ಅನುಮಾನಗೊಂಡು ನೀರು ಶೇಖರಣಾ ತೊಟ್ಟಿಯೊಳಗೆ ನೋಡಿದಾಗ ಇಬ್ಬರು ಮಕ್ಕಳು ಹಾಗೂ ರಾಜೇಶ್ವರಿ ಬಿದ್ದಿರುವುದು ಪತ್ತೆಯಾಗಿದೆ.

ತಕ್ಷಣವೇ ಮೂವರನ್ನು ಟ್ಯಾಂಕ್‌ನಿಂದ ಹೊರತೆಗೆದು ಚೌಟುಪ್ಪಲ್ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ, ಅಷ್ಟರಲ್ಲೇ ಮೂವರು ಸಾವನ್ನಪ್ಪಿರುವುದು ವೈದ್ಯರು ಖಚಿತಪಡಿಸಿದ್ದಾರೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ:ಮಂಗಳೂರು: ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಯುವಕ

Last Updated : Jun 29, 2023, 11:26 AM IST

ABOUT THE AUTHOR

...view details