ಕರ್ನಾಟಕ

karnataka

ETV Bharat / bharat

ಮಂಡ್ಯ ಕುಟುಂಬಕ್ಕೆ ನೆರವಾಗುವಂತೆ ಡಿಕೆಶಿ ಮನವಿ.. ಅರ್ಧಗಂಟೆಯಲ್ಲಿ ಸ್ಪಂದಿಸಿದ ತೆಲಂಗಾಣ ಸಚಿವ

ಕೇವಲ ಅರ್ಧ ಗಂಟೆಯಲ್ಲಿ ಸ್ಪಂದಿಸಿರುವ ತೆಲಂಗಾಣ ಟಿಆರ್​ಎಸ್​​​ ಪಕ್ಷದ ಕಾರ್ಯಾಧ್ಯಕ್ಷ ಹಾಗೂ ಸಚಿವ ಕಲ್ವಕುಂಟ್ಲ ತಾರಕ ರಾಮರಾವ್ (ಕೆಟಿಆರ್), ಶಿವಕುಮಾರ್ ಅವರೇ, ನಾವು ಆ ಕುಟುಂಬದ ಕಾಳಜಿ ವಹಿಸುತ್ತೇವೆ..

ಮಂಡ್ಯ ಕುಟುಂಬಕ್ಕೆ ನೆರವಾಗುವಂತೆ ಡಿಕೆಶಿ ಮನವಿ
ಮಂಡ್ಯ ಕುಟುಂಬಕ್ಕೆ ನೆರವಾಗುವಂತೆ ಡಿಕೆಶಿ ಮನವಿ

By

Published : May 30, 2021, 8:59 PM IST

Updated : May 30, 2021, 9:30 PM IST

ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮನವಿಗೆ ತೆಲಂಗಾಣ ಸರ್ಕಾರ ತ್ವರಿತವಾಗಿ ಸ್ಪಂದಿಸಿದೆ. ಸಂಕಷ್ಟದಲ್ಲಿರುವ ಮಂಡ್ಯದ ಕುಟುಂಬವೊಂದರ ರಕ್ಷಣೆ ಮಾಡುವಂತೆ ಟ್ವೀಟ್ ಮೂಲಕ ಡಿಕೆಶಿ ಮನವಿ ಮಾಡಿದ್ದರು. ಈ ಕುರಿತು ತ್ವರಿತವಾಗಿ ಸ್ಪಂದಿಸಿರುವ ಕೆಸಿಆರ್ ಸರ್ಕಾರ ಈ ವಿಚಾರದಲ್ಲಿ ಆತಂಕ ಬೇಡ ಎಂದು ಭರವಸೆ ನೀಡಿದೆ.

ಮಂಡ್ಯ ಮೂಲಕ ಶಶಿಕಲಾ ಮಂಜುನಾಥ್ ಅವರ ಕುಟುಂಬ ಆಸ್ಪತ್ರೆಯ ಬಿಲ್​ ತುಂಬಲಾಗದೇ ಸಂಕಷ್ಟದಲ್ಲಿತ್ತು. ಹೈಟೆಕ್​ ಸಿಟಿಯಲ್ಲಿರುವ ಮೆಡಿಕೋವರ್ ಆಸ್ಪತ್ರೆಯಲ್ಲಿಶಶಿಕಲಾಅವರ ಪತಿ ಮಂಜುನಾಥ್​ ಇಂದು ನಿಧನರಾಗಿದ್ದಾರೆ. ಪತಿಯ ಚಿಕಿತ್ಸೆಗಾಗಿ ಶಶಿಕಲಾ ಅವರು ಸಾಕಷ್ಟು ಹಣ ವ್ಯಯಿಸಿದ್ದರೂ ಸಹ ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ.

ಅಂತಿಮವಾಗಿ 7.5 ಲಕ್ಷ ರೂ. ಬಿಲ್ ಆಗಿದ್ದು, ಇದರಲ್ಲಿ 2 ಲಕ್ಷ ರೂಪಾಯಿಯನ್ನು ಮಾತ್ರ ಶಶಿಕಲಾ ಭರಿಸಿದ್ದಾರೆ. ಆದರೆ, ತೆಲಂಗಾಣ ಸರ್ಕಾರದ ಸೂಚನೆ ಮೇರೆಗೆ ಮೃತದೇಹವನ್ನು ಆಸ್ಪತ್ರೆ ಆಡಳಿತ ಮಂಡಳಿ ಬಿಟ್ಟುಕೊಟ್ಟಿದೆ. ಕೆಪಿಸಿಸಿ ಅಧ್ಯಕ್ಷರ ಮನವಿಗೆ ಸ್ಪಂದಿಸಿರುವ ಸಿಎಂ ಕೆಸಿಆರ್​ ಅವರ ಪುತ್ರ, ಸಚಿವ ಕೆ ಟಿ ಆರ್​ ಅವರು ಶಶಿಕಲಾ ಕುಟುಂಬದ ಸಂಕಷ್ಟಕ್ಕೆ ಶೀಘ್ರವಾಗಿ ಸ್ಪಂದಿಸಿದ್ದಾರೆ.

ಸ್ಪಂದಿಸಿದ ಸರ್ಕಾರ

ಕೇವಲ ಅರ್ಧ ಗಂಟೆಯಲ್ಲಿ ಸ್ಪಂದಿಸಿರುವ ತೆಲಂಗಾಣ ಸಚಿವ ಟಿಆರ್​ಎಸ್​​​ ಪಕ್ಷದ ಕಾರ್ಯಾಧ್ಯಕ್ಷ ಹಾಗೂ ಸಚಿವ ಕಲ್ವಕುಂಟ್ಲ ತಾರಕ ರಾಮರಾವ್ (ಕೆಟಿಆರ್), ಶಿವಕುಮಾರ್ ಅವರೇ, ನಾವು ಆ ಕುಟುಂಬದ ಕಾಳಜಿ ವಹಿಸುತ್ತೇವೆ.

ದಯವಿಟ್ಟು ಅವರ ಸಂಪರ್ಕ ವಿವರ ನೀಡಿ. ತಮ್ಮ ಕಚೇರಿ ಅಧಿಕಾರಿಗಳು ಕೂಡಲೇ ಆಸ್ಪತ್ರೆ ಮೂಲವನ್ನು ಸಂಪರ್ಕಿಸಿ ಮಾಹಿತಿ ಪಡೆಯಲಿದ್ದಾರೆ ಎಂದು ಭರವಸೆ ನೀಡಿದ್ದರು. ಅದರಂತೆ ನಡೆದುಕೊಂಡಿದ್ದಾರೆ.

ತೆಲಂಗಾಣ ಸರ್ಕಾರ ಹಾಗೂ ಸಚಿವ ಕೆಟಿಆರ್​ ಅವರಿಂದ ಶೀಘ್ರ ಸ್ಪಂದನೆ ಮತ್ತು ಮಂಡ್ಯದ ಕುಟುಂಬಕ್ಕೆ ನೆರವಾಗಿದ್ದಕ್ಕೆ ಡಿಕೆಶಿ ಅವರು ಧನ್ಯವಾದ ತಿಳಿಸಿದ್ದಾರೆ.

Last Updated : May 30, 2021, 9:30 PM IST

ABOUT THE AUTHOR

...view details