ಕರ್ನಾಟಕ

karnataka

ETV Bharat / bharat

ವಿದೇಶಿ ನೆಲದಲ್ಲಿ ಇದೇ ಮೊದಲ ಬಾರಿಗೆ ಭಾರತದ ತೇಜಸ್​ ಯುದ್ಧ ವಿಮಾನ ಹಾರಾಟ

ಯುಎಇನಲ್ಲಿ ಫೆಬ್ರವರಿ 27 ರಿಂದ ಮಾರ್ಚ್ 17ರ ವರೆಗೆ ಬಹುಪಕ್ಷೀಯ ಯುದ್ಧಾಭ್ಯಾಸ ನಡೆಯಲಿದೆ.

ವಿದೇಶಿ ನೆಲದಲ್ಲಿ ತೇಜಸ್​ ಯುದ್ಧ ವಿಮಾನದ ಹಾರಾಟ
ವಿದೇಶಿ ನೆಲದಲ್ಲಿ ತೇಜಸ್​ ಯುದ್ಧ ವಿಮಾನದ ಹಾರಾಟ

By

Published : Feb 26, 2023, 9:22 AM IST

ನವದೆಹಲಿ:ಯುನೈಟೆಡ್ ​ಅರಬ್​ ಎಮಿರೇಟ್ಸ್​ನಲ್ಲಿ(ಯುಎಇ) ನಡೆಯುವ ಬಹುಪಕ್ಷೀಯ ಯುದ್ಧಾಭ್ಯಾಸದಲ್ಲಿ ಭಾರತದ ತೇಜಸ್​ ಲಘು ಯುದ್ಧ ವಿಮಾನಗಳು ಹಾರಾಟ ನಡೆಸಿ ತಮ್ಮ ಝಲಕ್​ ತೋರಿಸಲಿವೆ. ವಿಶೇಷವೆಂದರೆ, ಇದೇ ಮೊದಲ ಬಾರಿಗೆ ಸ್ವದೇಶಿ ನಿರ್ಮಿತ ಜೆಟ್​ ಯುದ್ಧ ವಿಮಾನವೊಂದು ವಿದೇಶದಲ್ಲಿ ನಡೆಯುತ್ತಿರುವ ತರಬೇತಿಯಲ್ಲಿ ಭಾಗವಹಿಸುತ್ತಿದೆ.

ವಾಯುದಳದ 110 ಯೋಧರನ್ನೊಳಗೊಂಡ ಐಎಎಫ್ ತುಕಡಿಯು ಅಲ್ ದಹ್ಫ್ರಾ ವಾಯುನೆಲೆಗೆ ಡಸರ್ಟ್ ಫ್ಲ್ಯಾಗ್ ಅಭ್ಯಾಸದಲ್ಲಿ ಭಾಗವಹಿಸಲು ಆಗಮಿಸಿದೆ. 5 ತೇಜಸ್ ಮತ್ತು ಎರಡು C-17 ಗ್ಲೋಬ್‌ಮಾಸ್ಟರ್ III ವಿಮಾನಗಳು ಇಲ್ಲಿ ಹಾರಾಡಲಿವೆ. ಎಲ್‌ಸಿಎ ತೇಜಸ್ ಭಾರತದ ಹೊರಗೆ ಅಂತಾರಾಷ್ಟ್ರೀಯ ಮಟ್ಟದ ಯುದ್ಧಾಭ್ಯಾಸದಲ್ಲಿ ಭಾಗವಹಿಸುತ್ತಿರುವ ಮೊದಲ ಸಂದರ್ಭವಿದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಯಾವ ದೇಶಗಳು ಭಾಗಿ:ಯುದ್ಧಾಭ್ಯಾಸದಲ್ಲಿ ಯುಎಇ, ಫ್ರಾನ್ಸ್, ಕುವೈತ್, ಆಸ್ಟ್ರೇಲಿಯಾ, ಯುಕೆ, ಬಹ್ರೇನ್, ಮೊರಾಕೊ, ಸ್ಪೇನ್, ರಿಪಬ್ಲಿಕ್ ಆಫ್ ಕೊರಿಯಾ ಮತ್ತು ಅಮೆರಿಕ ವಾಯುಪಡೆಗಳು ಭಾಗವಹಿಸಲಿವೆ. ಫೆಬ್ರವರಿ 27 ರಿಂದ ಮಾರ್ಚ್ 17ರ ವರೆಗೆ ತರಬೇತಿ ನಡೆಯಲಿದೆ. ಈ ರೀತಿಯ ವಿಶೇಷ ತರಬೇತಿಯಲ್ಲಿ ಭಾಗವಹಿಸುವುದು ಮತ್ತು ವಿವಿಧ ವಾಯುಪಡೆಗಳ ಉತ್ತಮ ಕೌಶಲ್ಯಗಳನ್ನು ಕಲಿಯುವುದು ಅಭ್ಯಾಸದ ಗುರಿಯಾಗಿದೆ.

ತೇಜಸ್ ವಿಶೇಷತೆ: ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನಿಂದ ​(HAL) ತಯಾರಿಸಲ್ಪಟ್ಟ ತೇಜಸ್, ಏಕ ಬಳಕೆಯ ಎಂಜಿನ್ ಮತ್ತು ಅತ್ಯಂತ ಚುರುಕಾದ ಸೂಪರ್‌ಸಾನಿಕ್ ಸಮರ ವಿಮಾನ. ವಿಷಮಸ್ಥಿತಿಯ ವಾಯು ಪರಿಸರದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಇದಕ್ಕಿದೆ.

83 ವಿಮಾನ ಖರೀದಿ ಒಪ್ಪಂದ:ಭಾರತೀಯ ವಾಯುಪಡೆಗೆ ಅತ್ಯಗತ್ಯವಾಗಿರುವ ತೇಜಸ್​ ಯುದ್ಧ ವಿಮಾನ ರೂಪಿಸಲು ಹೆಚ್‌ಎಎಲ್‌ ಜೊತೆ ಒಪ್ಪಂದ ಮಾಡಲಾಗಿದೆ. ಭಾರತೀಯ ವಾಯುಸೇನೆಗೆ 83 ತೇಜಸ್​ ಲಘು ಯುದ್ಧ ವಿಮಾನಗಳ ಖರೀದಿಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. 48,000 ಕೋಟಿ ರೂ. ವೆಚ್ಚದಲ್ಲಿ 83 ಲಘು ಯುದ್ಧ ವಿಮಾನಗಳು ವಾಯುಪಡೆ ಬತ್ತಳಿಕೆ ಸೇರಲಿವೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಭದ್ರತಾ ಸಂಪುಟ ಸಮಿತಿ (ಸಿಸಿಎಸ್) ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದರು. ಭಾರತೀಯ ರಕ್ಷಣಾ ಉತ್ಪಾದನೆಯಲ್ಲಿನ ಸ್ವಾವಲಂಬನೆಗಾಗಿ ಈ ಒಪ್ಪಂದ 'ಗೇಮ್​ ಚೇಂಜರ್'​ ಆಗಲಿದೆ ಎಂದು ಸಿಂಗ್​ ಟ್ವೀಟ್ ಮಾಡಿದ್ದರು.

ಸುಮಾರು ಮೂರು ವರ್ಷಗಳ ಹಿಂದೆ ಐಎಎಫ್ 83 ತೇಜಸ್ ಖರೀದಿಸಲು ಆರಂಭಿಕ ಟೆಂಡರ್ ನೀಡಿತ್ತು. ಇದೀಗ ಒಪ್ಪಂದಕ್ಕೆ ಒಪ್ಪಿಗೆ ಸಿಕ್ಕಿದೆ. 83 ಮಾರ್ಕ್ 1 ಎ ತೇಜಸ್ ಲಘು ಯುದ್ಧ ವಿಮಾನಗಳ ಒಪ್ಪಂದ ಇದಾಗಿದ್ದು, ಸುಧಾರಿತ ಸೇವಾ ಸಾಮರ್ಥ್ಯ, ವೇಗದ ಶಸ್ತ್ರಾಸ್ತ್ರ-ಲೋಡಿಂಗ್, ದೀರ್ಘಾಯುಷ್ಯ, ಉತ್ತಮ ಎಲೆಕ್ಟ್ರಾನಿಕ್ ವಾರ್​ಫೇರ್​​ ಸೂಟ್ ಮತ್ತು ಆ್ಯಕ್ಟೀವ್​ ಎಲೆಕ್ಟ್ರಾನಿಕ್ ಸ್ಕ್ಯಾನ್ಡ್ ಅರೇ (ಎಇಎಸ್ಎ) ರೇಡಾರ್‌ನೊಂದಿಗೆ ಈ ವಿಮಾನಗಳು ತಮ್ಮ ಸಾಮರ್ಥ್ಯ ಹೆಚ್ಚಿಸಲಿವೆ.

ಇದನ್ನೂ ಓದಿ: ಉತ್ತರ ನೆವಾಡಾದಲ್ಲಿ ವೈದ್ಯಕೀಯ ವಿಮಾನ ಪತನ: ರೋಗಿ ಸೇರಿ ಐವರು ಸಾವು

ABOUT THE AUTHOR

...view details