ಬಲವಂತಪುರ( ತೆಲಂಗಾಣ): ಜಿಲ್ಲೆಯ ಬಲ್ವಂತಪುರದಲ್ಲಿ ಸೋಮವಾರ ಹತ್ಯೆಗೀಡಾದ ಸಾಫ್ಟ್‌ವೇರ್ ಇಂಜಿನಿಯರ್ ಪವನ್ ಕುಮಾರ್ ಕೊಲೆ ಪ್ರಕರಣದಲ್ಲಿ ಪತ್ನಿ ಕೃಷ್ಣವೇಣಿ ಕೂಡ ಈ ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎಂದು ಸರ್ಕಲ್ ಇನ್ಸ್ಪೆಕ್ಟರ್ ಕಿಶೋರ್ ಹೇಳಿದ್ದಾರೆ.
ಸೋದರ ಮಾವನನ್ನು ಕೊಲ್ಲಲು ಮಾಟಮಂತ್ರ ಮಾಡಿದ್ದಾನೆ ಎಂಬ ಅನುಮಾನದ ಮೇಲೆ ಟೆಕ್ಕಿಯನ್ನು ಕುರ್ಚಿಗೆ ಕಟ್ಟಿ ದೇವಾಲಯದಲ್ಲಿ ಜೀವಂತವಾಗಿ ಸುಟ್ಟು ಹಾಕಿರುವ ಘಟನೆ ತೆಲಂಗಾಣದಲ್ಲಿ ನಡೆದಿತ್ತು.
ಪತಿ ಕೊಲೆಗೆ ಪತ್ನಿಯೇ ರೂಪಿಸಿದ್ದಳಾ ಸಂಚು.!? ಸಿಐ ಕಿಶೋರ್ ಪ್ರಕಾರ, ಕೃಷ್ಣವೇಣಿ ಒಂದು ವರ್ಷದ ಹಿಂದೆ ಆದಿಲಾಬಾದ್‌ನಲ್ಲಿ ಸಂಬಂಧಿಕರ ವಿವಾಹಕ್ಕೆ ತೆರಳುತ್ತಿದ್ದಾಗ ಆಕೆಯ ಆರು ತೊಲ ಚಿನ್ನದ ಆಭರಣಗಳನ್ನು ಕಳವು ಮಾಡಲಾಗಿತ್ತು. ಅಂದಿನಿಂದ, ಪವನ್ ಕುಮಾರ್ ಅವರು ತಮ್ಮ ಹೆಂಡತಿಯೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದರು. ಜಗನ್ ಎಂಬ ಸೋದರ ಸಂಬಂಧಿಯೇ ಆ ಆಭರಣ ಕದ್ದಿದ್ದಾನೆ ಎಂದು ಪವನ್ ದೂಷಿಸುತ್ತಿದ್ದರು. ಇತ್ತಿಚೆಗೆ ಜಗನ್ ಮೃತಪಟ್ಟಿದ್ದರು.
ಓದಿ : ತೆಲಂಗಾಣದಲ್ಲಿ ಇಂಜಿನಿಯರ್ ಸಜೀವ ದಹನ ಪ್ರಕರಣ: ಪತಿ ಕೊಲೆಗೆ ಪತ್ನಿಯೇ ರೂಪಿಸಿದ್ದಳಾ ಸಂಚು.!?
ಕೃಷ್ಣವೇಣಿ ಸಹೋದರ ಸಂಬಂಧಿಯಾದ ವಿಜಯಸ್ವಾಮಿ ಬಲ್ವಂತ್ಪುರದ ಹೊರವಲಯದಲ್ಲಿ ಆಶ್ರಮ ನಡೆಸುತ್ತಿದ್ದ. ಪವನ್ ಕುಮಾರ್ ಅವರ ವಾಮಾಚಾರದಿಂದ (ಬ್ಲ್ಯಾಕ್ ಮ್ಯಾಜಿಕ್) ಜಗನ್ ಮೃತಪಟ್ಟಿದ್ದಾನೆ ಎಂದು ಕುಟುಂಬ ಸದಸ್ಯರಿಗೆ ತಿಳಿಸಿದರು. ಕೃಷ್ಣವೇಣಿ ಮತ್ತು ವಿಜಯಸ್ವಾಮಿ ಅವರೊಂದಿಗೆ, ಅವರ ಸೋದರ ಸಂಬಂಧಿ ಸುಮಲತಾ, ಸಹೋದರಿ ಸ್ವರೂಪಾ ಮತ್ತು ಮೊತೆರಾ ಪ್ರಮಿಲಾ ಸೇರಿ ಕೊಲೆಗೆ ಯೋಜನೆ ರೂಪಿಸಿದರು.
ಜಗನ್ ಅವರ ಹನ್ನೆರಡನೇ ದಿನದ ಆಚರಣೆಯ ಸಂದರ್ಭದಲ್ಲಿ ಸೋಮವಾರ ಮಂಜುನಾಥ ದೇವಸ್ಥಾನದ ಪಕ್ಕದ ಕೋಣೆಯಲ್ಲಿದ್ದ ಪವನ್ ಕುಮಾರ್ಗೆ ತಿಳಿಯದಂತೆ ಹೊರಗಿನಿಂದ ಬಾಗಿಲು ಮುಚ್ಚಿ ಬೀಗ ಹಾಕಲಾಗಿತ್ತು. ನಂತರ ಕೃಷ್ಣವೇಣಿ ಅವರ ಆಪ್ತರು ಮತ್ತು ಕೊಂಡಗಟ್ಟಿನ ನಿರಂಜನ್ ರೆಡ್ಡಿ ಎಂಬ ಯುವಕ ಕೋಣೆಯ ಕಿಟಕಿಯಿಂದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ಕಿಶೋರ್ ತಿಳಿಸಿದರು.