ಕರ್ನಾಟಕ

karnataka

ETV Bharat / bharat

ಟಾಟಾ ಸನ್ಸ್​ನ ಅಧ್ಯಕ್ಷರಾಗಿ ಎನ್​.ಚಂದ್ರಶೇಖರ್​ ಮರುನೇಮಕ - ಟಾಟಾ ಸನ್ಸ್​ನ ಕಾರ್ಯಕಾರಿ ಅಧ್ಯಕ್ಷರಾಗಿ ಎನ್​.ಚಂದ್ರಶೇಖರ್​ ಮರುನೇಮಕ

ಎನ್​.ಚಂದ್ರಶೇಖರ್​ ಅವರು ಟಾಟಾ ಸನ್ಸ್ ಕಂಪನಿಯ ಕಾರ್ಯಕಾರಿ ಅಧ್ಯಕ್ಷರಾಗಿ ಇನ್ನೂ 5 ವರ್ಷಗಳವರೆಗೆ ಮರುನೇಮಕವಾಗಿದ್ದಾರೆ.

Executive Chairman
ಚಂದ್ರಶೇಖರ್

By

Published : Feb 11, 2022, 3:23 PM IST

Updated : Feb 11, 2022, 4:54 PM IST

ಮುಂಬೈ:ಎನ್​.ಚಂದ್ರಶೇಖರ್​ ಅವರು ಟಾಟಾ ಸನ್ಸ್ ಕಂಪನಿಯ ಕಾರ್ಯಕಾರಿ ಅಧ್ಯಕ್ಷರಾಗಿ ಇನ್ನೂ 5 ವರ್ಷಗಳವರೆಗೆ ಮರು ನೇಮಕವಾಗಿದ್ದಾರೆ. ಇವರ ಆಡಳಿತಾವಧಿಯು ಕೊನೆಗೊಳ್ಳುವ ಸಂಬಂಧ ಟಾಟಾ ಸನ್ಸ್​ ಸಂಸ್ಥೆಯಲ್ಲಿ ಇಂದು (ಶುಕ್ರವಾರ) ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಚಂದ್ರಶೇಖರ್​ ಅವರನ್ನೇ ಮುಂದಿನ ಕಾರ್ಯಕಾರಿ ಅಧ್ಯಕ್ಷರನ್ನಾಗಿ ಮುಂದುವರಿಸಲು ನಿರ್ಧರಿಸಲಾಗಿದೆ.

ಸಭೆಯಲ್ಲಿ ವಿಶೇಷ ಆಹ್ವಾನಿತರಾಗಿದ್ದ ರತನ್​ ಟಾಟಾ ಅವರು ಟಾಟಾ ಗ್ರೂಪ್​ನ ಪ್ರಗತಿ ಮತ್ತು ಕಾರ್ಯಕ್ಷಮತೆಯ ಮತ್ತು ಎನ್​. ಚಂದ್ರಶೇಖರ್​ ಅವರ ಕಾರ್ಯಾಧಿಕಾರದ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಂದ್ರಶೇಖರ್​ ಅವರ ಅಧಿಕಾರವಧಿಯನ್ನು ಇನ್ನೂ 5 ವರ್ಷಗಳವರೆಗೆ ವಿಸ್ತರಿಸಲು ಶಿಫಾರಸು ಮಾಡಿದಾಗ ಸರ್ವಸದಸ್ಯರು ಇದನ್ನು ಅನುಮೋದಿಸಿದ್ದಾರೆ.

ಟಾಟಾ ಸನ್ಸ್​ ಕಂಪನಿಯು 2020-21 ರಲ್ಲಿ 103 ಬಿಲಿಯನ್​ ಡಾಲರ್​ನಷ್ಟು ವಹಿವಾಟು ನಡೆಸಿದೆ. ಅಲ್ಲದೇ ದೇಶದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿದ ಪ್ರಮುಖ ಕಂಪನಿಯಾಗಿದೆ.

ಓದಿ:ಹಿಜಾಬ್ ವಿವಾದ: ಹೈಕೋರ್ಟ್ ಹೊರಡಿಸಿದ ಮಧ್ಯಂತರ ತೀರ್ಪಿನಲ್ಲಿ ಏನೇನಿದೆ.?

Last Updated : Feb 11, 2022, 4:54 PM IST

For All Latest Updates

TAGGED:

ABOUT THE AUTHOR

...view details