ಬೆಂಗಳೂರು:ಮಾವಿನ ಹಣ್ಣುಗಳು ಮಾರುಕಟ್ಟೆಗೆ ಲಗ್ಗೆ ಇಡಲು ಪ್ರಾರಂಭಿಸಿದ್ದು, ಸಿಲಿಕಾನ್ ಸಿಟಿಯ ಮಾರ್ಕೆಟ್ನಲ್ಲಿ ಎಲ್ಲಿ ನೋಡಿದರೂ ಹಣ್ಣುಗಳ ರಾಜನ ಕಾರುಬಾರೇ ಗೋಚರಿಸುತ್ತಿದೆ. ವಿವಿಧ ತಳಿಯ ಮಾವಿನ ಹಣ್ಣುಗಳು ತೋಟದಿಂದ ಮಾರುಕಟ್ಟೆಗೆ ಬಂದಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಾವಿನ ಹಣ್ಣುಗಳ ದರ ಹೆಚ್ಚಾಗಿದೆ. ಆದರೂ ಮಾವುಪ್ರಿಯರು ಖರೀದಿಗೆ ಮುಗಿಬಿದ್ದಿದ್ದಾರೆ. ಇದರ ಜೊತೆಗೆ ತರಕಾರಿಗಳ ಬೆಲೆ ಹೆಚ್ಚು-ಕಮ್ಮಿಯಾಗಿದ್ದು, ರಿಟೇಲ್ ಹಣ್ಣು, ತರಕಾರಿಗಳ ಇಂದಿನ ದರಗಳು ಕೆ.ಜಿ ಗಳಲ್ಲಿ ಈ ಕೆಳಗಿನಂತಿದೆ..
ಮಾವಿನಹಣ್ಣು
- ಬಾದಾಮಿ ಕೆಜಿಗೆ 235 ರೂ.
- ತೋತಾಪುರಿ ಕೆಜಿಗೆ 58 ರೂ.
- ಮಲ್ಲಿಕಾ ಕೆಜಿಗೆ 189 ರೂ.
- ಬಾಗನಪಲ್ಲಿ ಕೆಜಿಗೆ 132 ರೂ.
- ರಸಪುರಿ ಕೆಜಿಗೆ 155 ರೂ.
- ಸಿಂಧೂರ ಕೆಜಿಗೆ 129 ರೂ.
ಹಣ್ಣುಗಳು
- ಮಾವಿನಕಾಯಿ ಕೆಜಿಗೆ 48 ರೂ.
- ಸಪೋಟಾ ಕೆಜಿಗೆ 59 ರೂ.
- ದಾಳಿಂಬೆ ಕೆಜಿಗೆ 179 ರೂ.
- ಸೇಬು ಕೆಜಿಗೆ 159 ರೂ.
- ಗ್ರೇಪ್ಸ್ ಕೆಜಿಗೆ 93 ರೂ.
- ಕರ್ಬೂಜ ಕೆಜಿಗೆ 27 ರೂ.
- ಕಲ್ಲಂಗಡಿ ಕೆಜಿಗೆ 25 ರೂ.
- ಅನಾನಸ್ ಕೆಜಿಗೆ 86 ರೂ.
- ಮೂಸಂಬಿ ಕೆಜಿಗೆ 78 ರೂ.