ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಮತ ಎಣಿಕೆಯ ಆರಂಭಿಕ ಫಲಿತಾಂಶದಲ್ಲಿ ಡಿಎಂಕೆ ಮುನ್ನಡೆ ಸಾಧಿಸಿದೆ.
ತಮಿಳುನಾಡಲ್ಲಿ ದಶಕದ ಬಳಿಕ ಉದಯಿಸುತ್ತಿರುವ ಸೂರ್ಯ! - ಚುನಾವಣಾ ಫಲಿತಾಂಶ ಇಂದು ಲೈವ್
ಸ್ಟಾಲಿನ್ ನಾಯಕತ್ವದ ಡಿಎಂಕೆ ಪಕ್ಷ 136 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತಿದ್ದರೆ, ಆಡಳಿತಾರೂಢ ಎಐಎಡಿಎಂಕೆ 93 ಸ್ಥಾನಗಳಲ್ಲಿ ಮುಂದಿದೆ. 234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ಸರ್ಕಾರ ರಚನೆಗೆ 118 ಸ್ಥಾನಗಳ ಅಗತ್ಯವಿದೆ. ಸ್ಟಾಲಿನ್ ಪಕ್ಷ ಈಗಾಗಲೇ 135 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಸ್ಟಾಲಿನ್ ನಾಯಕತ್ವದ ಡಿಎಂಕೆ ಪಕ್ಷ 136 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತಿದ್ದರೆ, ಆಡಳಿತಾರೂಢ ಎಐಎಡಿಎಂಕೆ 93 ಸ್ಥಾನಗಳಲ್ಲಿ ಮುಂದಿದೆ. 234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ಸರ್ಕಾರ ರಚನೆಗೆ 118 ಸ್ಥಾನಗಳ ಅಗತ್ಯವಿದೆ. ಸ್ಟಾಲಿನ್ ಪಕ್ಷ ಈಗಾಗಲೇ 135 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. 2011ರಿಂದ ಅಧಿಕಾರದಲ್ಲಿರುವ ಎಐಎಡಿಎಂಕೆ, ರಾಜ್ಯದ ಮೇಲಿನ ತನ್ನ ಹಿಡಿತವನ್ನು ಕಳೆದುಕೊಂಡಂತಿದೆ. 10 ವರ್ಷಗಳ ಬಳಿಕ ಸೂರ್ಯ ಚಿಹ್ನೆಯ ಡಿಎಂಕೆ ಅಧಿಕಾರ ಗದ್ದುಗೆಯತ್ತ ಸಾಗುತ್ತಿದೆ.
ಕೊಳತ್ತೂರು ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಡಿಎಂಕೆ ವರಿಷ್ಠ ಸ್ಟಾಲಿನ್ ಮುನ್ನಡೆ ಸಾಧಿಸಿದ್ದಾರೆ.