ಚೆನ್ನೈ:ಇತ್ತೀಚೆಗಷ್ಟೇ ಸೈಕಲ್ ತುಳಿದು ಗಮನ ಸೆಳೆದಿದ್ದ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಇದೀಗ ಜಿಮ್ನಲ್ಲಿ ಭಾರಿ ವರ್ಕೌಟ್ ಮಾಡಿದ್ದಾರೆ. ತಮಿಳುನಾಡು ಸಿಎಂ ಜಿಮ್ನಲ್ಲಿ ಬೆವರಿಳಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
68 ವರ್ಷ ವಯಸ್ಸಿನ ಎಂಕೆ ಸ್ಟಾಲಿನ್, ತಮ್ಮ ಬಿಡುವಿಲ್ಲದ ವೇಳಾಪಟ್ಟಿಯಲ್ಲೂ ಫಿಟ್ನೆಸ್ ಕಾಪಾಡಿಕೊಳ್ಳಲು ಜಿಮ್ಗೆ ತೆರಳಿದ್ದಾರೆ.
ಫಿಟ್ನೆಸ್ಗೆ ಹೆಚ್ಚು ಪ್ರಾಮುಖ್ಯತೆ ನೀಡುವ ಸಿಎಂ ಸ್ಟಾಲಿನ್, ಆಗಾಗ್ಗೆ ರಸ್ತೆಗಳಲ್ಲಿ ಸೈಕ್ಲಿಂಗ್ ಮಾಡುತ್ತಾರೆ. ಕೆಲವು ವಾರಗಳ ಹಿಂದೆ ಅವರು ಮಾಮಲ್ಲಾಪುರದಲ್ಲಿ ಸೈಕಲ್ನಲ್ಲಿ ಹೋಗುತ್ತಿದ್ದಾಗ ಸ್ಥಳೀಯರನ್ನು ಭೇಟಿಯಾಗಿ, ಜನರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದ ಫೋಟೋ ಸಹ ವೈರಲ್ ಆಗಿತ್ತು.
ಇದೀಗ ಅವರು ಜಿಮ್ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋ ಜನರ ಹಾಗೂ ಅವರ ಅಭಿಮಾನಿಗಳ ಗಮನ ಸೆಳೆಯುತ್ತಿದೆ.