ನವದೆಹಲಿ:ಕೇಂದ್ರ ಸರ್ಕಾರವು ವಾರ್ಷಿವಾಗಿ ನಡೆಸುವ ಸ್ವಚ್ಛತಾ ಸಮೀಕ್ಷೆಯಲ್ಲಿ ಮಧ್ಯಪ್ರದೇಶದ ಇಂದೋರ್ ಸತತ ಏಳನೇ ಬಾರಿಗೆ ದೇಶದ ಸ್ವಚ್ಛನಗರಿ ಪ್ರಶಸ್ತಿಯನ್ನು ಬಾಚಿಕೊಂಡಿದೆ. ಗುಜರಾತ್ನ ಸೂರತ್ ಎರಡನೇ ಸ್ಥಾನ, ನವಿ ಮುಂಬೈ ಮೂರನೇ ಸ್ಥಾನವನ್ನು ಉಳಿಸಿಕೊಂಡಿದೆ.
2023 ನೇ ಸಾಲಿನ ಸ್ವಚ್ಛ ನಗರಗಳ ಫಲಿತಾಂಶ ಪ್ರಕಟವಾಗಿದ್ದು, ಅತ್ಯುತ್ತಮ ರಾಜ್ಯಗಳ ಪೈಕಿ ಮಹಾರಾಷ್ಟ್ರವು ಅಗ್ರಸ್ಥಾನ ಪಡೆದುಕೊಂಡಿದೆ. ಮಧ್ಯಪ್ರದೇಶ ಮತ್ತು ಛತ್ತೀಸ್ಗಢ ನಂತರದ ಸ್ಥಾನದಲ್ಲಿದೆ. ಗಂಗಾ ನದಿ ಪಾತ್ರದ ನಗರಗಳ ಪೈಕಿ ವಾರಣಾಸಿ ಮತ್ತು ಪ್ರಯಾಗ್ರಾಜ್ ಮೊದಲೆರಡು ಸ್ಥಾನ ಪಡೆದುಕೊಂಡಿವೆ.