ಸುಧಾರಿತ ಸ್ಫೋಟಕ ಸಾಧನ ಪತ್ತೆ; ನಾಶಪಡಿಸಿ ದುರಂತ ತಪ್ಪಿಸಿದ ಬಾಂಬ್ ನಿಷ್ಕ್ರಿಯ ದಳ - ಭದ್ರತಾ ಪಡೆಗಳ ಕಾರ್ಯವೈಖರಿ
ಜಮ್ಮು ಕಾಶ್ಮೀರ ಪೊಲೀಸರು ಬಾಂಬ್ ನಿಷ್ಕ್ರಿಯ ದಳವನ್ನು ಸ್ಥಳಕ್ಕೆ ಕರೆಸಿ ಶಂಕಿತ ಐಇಡಿಯನ್ನು ನಾಶಪಡಿಸಿ ಸಂಭಾವ್ಯ ಅನಾಹುತ ತಪ್ಪಿಸಿದರು.
Suspected IED diffused in J-K's Pulwama
ಶ್ರೀನಗರ:ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮಂಗಳವಾರ ಸುಧಾರಿತ ಸ್ಫೋಟಕ ಸಾಧನವನ್ನು (ಐಇಡಿ) ಪತ್ತೆ ಹಚ್ಚಿ ನಾಶಪಡಿಸುವ ಮೂಲಕ ಬಹುದೊಡ್ಡ ದುರಂತ ತಪ್ಪಿದೆ. ದಕ್ಷಿಣ ಕಾಶ್ಮೀರ ಜಿಲ್ಲೆಯ ಲಿಟ್ಟರ್ ಪ್ರದೇಶದ ಚೌದರಿ ಬಾಗ್‌ನ ರಸ್ತೆಯುದ್ದಕ್ಕೂ ಗ್ಯಾಸ್ ಸಿಲಿಂಡರ್‌ನಲ್ಲಿ ಕೆಲವು ಪಟಾಕಿಗಳೊಂದಿಗೆ ಈ ಶಂಕಿತ ಐಇಡಿಯನ್ನು ಅಳವಡಿಸಲಾಗಿತ್ತು.