ನವದೆಹಲಿ: ಕುಸ್ತಿಪಟು ಸಾಗರ್ ಧಂಕರ್ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ತಿಹಾರ್ ಜೈಲಿನಲ್ಲಿರುವ ಒಲಿಂಪಿಕ್ಸ್ ಪದಕ ವಿಜೇತ ಸುಶೀಲ್ ಕುಮಾರ್ ಕಾರಾಗೃಹದ ಸಿಬ್ಬಂದಿಯೊಂದಿಗೆ ಫಿಟ್ನೆಸ್ ಮಂತ್ರಗಳನ್ನ ಹಂಚಿಕೊಳ್ಳುತ್ತಿದ್ದಾರೆ. ಜೊತೆಗೆ ಆರೋಗ್ಯಕರ ಫಿಟ್ ದೇಹಕ್ಕಾಗಿ ತೆಗೆದುಕೊಳ್ಳಬೇಕಾದ ಆಹಾರದ ಬಗ್ಗೆಯೂ ಅವರು ಸಲಹೆ ನೀಡುತ್ತಿದ್ದಾರೆ.
ಇದಕ್ಕೂ ಮುನ್ನ ಸುಶೀಲ್ ಕುಮಾರ್ ತನಗಾಗಿ ಪ್ರೋಟೀನ್ ಭರಿತ ವಿಶೇಷ ಆಹಾರಕ್ಕಾಗಿ ಬೇಡಿಕೆ ಇಟ್ಟಿದ್ದರು, ಇದನ್ನು ಜೈಲಿನ ಆಡಳಿತ ತಿರಸ್ಕರಿಸಿತ್ತು. ನಂತರ ಅವರು ಒಲಿಂಪಿಕ್ಸ್ ನೋಡಲು ದೂರದರ್ಶನಕ್ಕೆ ಬೇಡಿಕೆ ಇಟ್ಟರು, ಇದನ್ನು ಆಡಳಿತವು ಅನುಮೋದಿಸಿತ್ತು. ಜೈಲಿನಿಂದಲೇ ರವಿ ದಹಿಯಾ ಫೈನಲ್ ಕುಸ್ತಿ ನೋಡಿ ಭಾವೋದ್ವೇಗಕ್ಕೊಳಗಾಗಿದ್ದರು.