ಕರ್ನಾಟಕ

karnataka

ETV Bharat / bharat

ಸುಶಾಂತ್ ಸಿಂಗ್ ರಜಪೂತ್ ಪ್ರಕರಣ: ಸಿದ್ದಾರ್ಥ್ ಪಿಥಾನಿಗೆ ಜಾಮೀನು - Siddharth Pithani granted bail for marriage

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಜೊತೆಗೆ ವಾಸವಿದ್ದ ಸಿದ್ದಾರ್ಥ್ ಪಿಥಾನಿಗೆ ನ್ಯಾಯಾಲಯ ಮಧ್ಯಂತರ ಪರಿಹಾರ ನೀಡಿದೆ.

siddharth-pithani-granted-bail-for-marriage
ಸಿದ್ದಾರ್ಥ್ ಪಿಥಾನಿಗೆ ಜಾಮೀನು

By

Published : Jun 18, 2021, 8:30 PM IST

ಮುಂಬೈ: ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ಆರೋಪಿ ಸಿದ್ಧಾರ್ಥ್ ಪಿಥಾನಿಗೆ ಮುಂಬೈ ಸೆಷನ್ಸ್ ನ್ಯಾಯಾಲಯ 50,000 ರೂ.ಗಳ ಬಾಂಡ್‌ ಮೇಲೆ ಮದುವೆಗೆ 10 ದಿನಗಳ ಮಧ್ಯಂತರ ಜಾಮೀನು ನೀಡಿದೆ.

ಸಿದ್ಧಾರ್ಥ್ ಪಿಥಾನಿ ಜೂನ್ 26 ರಂದು ವಿವಾಹವಾಗಲಿದ್ದು, ಅದಕ್ಕಾಗಿ ಅವರಿಗೆ ಜಾಮೀನು ನೀಡಲಾಗಿದೆ. ಮದುವೆಯ ನಂತರ ಪಿಥಾನಿ ಜುಲೈ 2 ರಂದು ಮತ್ತೆ ಕೋರ್ಟ್​ಗೆ ಶರಣಾಗಬೇಕಾಗುತ್ತದೆ. ಸುಶಾಂತ್ ಸಾವಿಗೆ ಸಂಬಂಧಿಸಿದ ಡ್ರಗ್ಸ್ ಪ್ರಕರಣದಲ್ಲಿ ಸಿದ್ಧಾರ್ಥ್ ಅವರನ್ನು ಮೇ 26 ರಂದು ಹೈದರಾಬಾದ್​ನಲ್ಲಿ ಬಂಧಿಸಲಾಗಿತ್ತು.

ನಂತರ ಕೋರ್ಟ್​ ಈತನಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಪಿಥಾನಿ ಹಲವು ದಿನಗಳಿಂದ ಪರಾರಿಯಾಗಿದ್ದರು. ಕೊನೆಗೂ ಎನ್‌ಸಿಬಿ ಕಾರ್ಯಾಚರಣೆ ನಡೆಸಿ ಈತನನ್ನು ಬಂಧಿಸಿತ್ತು. ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ ಆ್ಯಕ್ಟ್​ ಸೇರಿ ಹಲವು ಸೆಕ್ಷನ್​ ಅಡಿಯಲ್ಲಿ ಈತನ ಮೇಲೆ ದೂರು ದಾಖಲಾಗಿದೆ.

ಓದಿ:ದೈಹಿಕ ಶಿಕ್ಷಕರ ಬಹುದಿನಗಳ ಬೇಡಿಕೆಗೆ ಅಸ್ತು -148 ದೈಹಿಕ ಶಿಕ್ಷಕರಿಗೆ ಮುಂಬಡ್ತಿ: ಸುರೇಶ್ ಕುಮಾರ್

ABOUT THE AUTHOR

...view details