ಕರ್ನಾಟಕ

karnataka

ETV Bharat / bharat

ಮರಾಠ ಮೀಸಲಾತಿ ಕಾಯ್ದೆ ರದ್ದುಪಡಿಸಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪು

ಶಿಕ್ಷಣ/ಉದ್ಯೋಗಗಳಲ್ಲಿ ಮರಾಠ ಸಮುದಾಯಕ್ಕೆ ಶೇ 50 ಮೀರಿದ ಮೀಸಲಾತಿಯನ್ನು ತಳ್ಳಿಹಾಕಿದ್ದು, ಮರಾಠ ಮೀಸಲಾತಿ ನೀಡುವಾಗ ಶೇ 50 ಮೀಸಲಾತಿಯನ್ನು ಉಲ್ಲಂಘಿಸಲು ಸಾಧ್ಯವೇ ಇಲ್ಲ. ಈ ಕುರಿತಾಗಿ ಸರ್ಕಾರ ರಚಿಸಿರುವ ಕಾಯ್ದೆ 'ಅಸಿಂಧು' ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ಕೊಟ್ಟಿದೆ.

Maratha Reservation law
ಸುಪ್ರೀಂ

By

Published : May 5, 2021, 11:16 AM IST

Updated : May 5, 2021, 1:26 PM IST

ನವದೆಹಲಿ: ಮರಾಠ ಮೀಸಲಾತಿಗೆ ಸಂಬಂಧಿಸಿದಂತೆ ಮಹತ್ವದ ತೀರ್ಪು ನೀಡಿರುವ ಸುಪ್ರೀಂಕೋರ್ಟ್​ ಶೇ.50ಕ್ಕಿಂತ ಹೆಚ್ಚು ಮೀಸಲಾತಿ ನೀಡುವುದು 'ಅಸಾಂವಿಧಾನಿಕ' ನಡೆ ಎಂದು ಅಭಿಪ್ರಾಯಪಟ್ಟಿದೆ. ಈ ಮೂಲಕ ಮಹಾರಾಷ್ಟ್ರ ಸರ್ಕಾರದ 'ಮರಾಠ ಮೀಸಲಾತಿ ಕಾಯ್ದೆ'ಯನ್ನು ರದ್ದುಗೊಳಿಸಿದೆ.

1992ರಲ್ಲಿ ಇಂದ್ರಾ ಸಹಾನಿ ನೇತೃತ್ವದ ಒಂಬತ್ತು ನ್ಯಾಯಾಧೀಶರಿದ್ದ ಸಂವಿಧಾನ ಪೀಠವು ನೀಡಿದ್ದ ಶೇ.50 ರಷ್ಟು ಮೀಸಲಾತಿ ತೀರ್ಪನ್ನು ಮರುಪರಿಶೀಲಿಸುವಲ್ಲಿ ನಮಗೆ ಯಾವುದೇ ಕಾರಣವಿಲ್ಲ ಎಂದು ಸುಪ್ರೀಂ ಕೋರ್ಟ್ ಇದೇ ವೇಳೆ ಅಭಿಪ್ರಾಯಪಟ್ಟಿದೆ.

ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಎಲ್.ನಾಗೇಶ್ವರ ರಾವ್, ಎಸ್.ಅಬ್ದುಲ್ ನಜೀರ್, ಹೇಮಂತ್ ಗುಪ್ತಾ ಮತ್ತು ಎಸ್.ರವೀಂದ್ರ ಭಟ್ ಅವರಿದ್ದ ಸಂವಿಧಾನ ಪೀಠವು ಈ ತೀರ್ಪು ನೀಡಿದೆ.

ಇದನ್ನೂ ಓದಿ:ಇಂದು ಮರಾಠ ಮೀಸಲಾತಿ ಕುರಿತು ತೀರ್ಪು ನೀಡಲಿರುವ ಸುಪ್ರೀಂಕೋರ್ಟ್​

Last Updated : May 5, 2021, 1:26 PM IST

For All Latest Updates

TAGGED:

ABOUT THE AUTHOR

...view details