ಕರ್ನಾಟಕ

karnataka

ETV Bharat / bharat

ಹಿಜಾಬ್​ ಪರ ಸುಪ್ರೀಂಗೆ ಮೇಲ್ಮನವಿ: ಸೆಪ್ಟೆಂಬರ್​ 7ಕ್ಕೆ ವಿಚಾರಣೆ ಮುಂದೂಡಿಕೆ - ಹಿಜಾಬ್​ ನಿಷೇಧಿಸಿ ತೀರ್ಪು ನೀಡಿದ ಹೈಕೋರ್ಟ್

ಕರ್ನಾಟಕದ ಶಾಲಾ - ಕಾಲೇಜುಗಳ ತರಗತಿಯಲ್ಲಿ ಹಿಜಾಬ್​ ನಿಷೇಧಿಸಿ ತೀರ್ಪು ನೀಡಿದ ಹೈಕೋರ್ಟ್​ ಆದೇಶದ ವಿರುದ್ಧ ಸಲ್ಲಿಸಲಾದ ಅರ್ಜಿಗಳನ್ನು ಕೈಗೆತ್ತಿಕೊಂಡ ಸುಪ್ರೀಂಕೋರ್ಟ್​, ಸೆಪ್ಟೆಂಬರ್​ 7ಕ್ಕೆ ವಿಚಾರಣೆ ಮುಂದೂಡಿದೆ.

supreme-court-started-hearing-hijab-petition
ಹಿಜಾಬ್​ ಪರ ಸುಪ್ರೀಂಗೆ ಮೇಲ್ಮನವಿ

By

Published : Sep 5, 2022, 3:14 PM IST

Updated : Sep 5, 2022, 5:00 PM IST

ನವದೆಹಲಿ:ಶಾಲಾ- ಕಾಲೇಜುಗಳಲ್ಲಿ ಹಿಜಾಬ್​ ಧರಿಸಿ ಬರುವುದಾದರೆ, ಶಿಕ್ಷಣ ಸಂಸ್ಥೆಗಳು ರೂಪಿಸಿದ ಸಮವಸ್ತ್ರ ನಿಯಮದ ಅಗತ್ಯವೇನು?. ವಿದ್ಯಾರ್ಥಿಗಳು ತಮ್ಮ ಇಚ್ಚಾನುಸಾರ ಯಾವ ಧಿರಿಸು ಬೇಕಾದರೂ ಹಾಕಿಕೊಂಡು ತರಗತಿಗೆ ಬರಬಹುದೇ ಎಂದು ಸುಪ್ರೀಂಕೋರ್ಟ್​ ಪ್ರಶ್ನಿಸಿದೆ.

ಶಾಲಾ - ಕಾಲೇಜುಗಳ ತರಗತಿಯಲ್ಲಿ ಹಿಜಾಬ್ ಧರಿಸುವುದರ ಮೇಲಿನ ನಿಷೇಧವನ್ನು ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್ ತೀರ್ಪಿನ ವಿರುದ್ಧ ಸಲ್ಲಿಸಲಾದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರಿದ್ದ ಪೀಠ ಫಿರ್ಯಾದುದಾರರಿಗೆ ಈ ಪ್ರಶ್ನೆ ಕೇಳಿತು.

ಕಾಲೇಜು ಅಭಿವೃದ್ಧಿ ಸಮಿತಿಗಳು ರೂಪಿಸಿದ ಸಮವಸ್ತ್ರ ಹಾಕಿಕೊಳ್ಳುವುದು ಕಡ್ಡಾಯಗೊಳಿಸಿದ ಕರ್ನಾಟಕ ಸರ್ಕಾರದ ಆದೇಶವು ಶಿಕ್ಷಣದ ಹಕ್ಕನ್ನು ಉಲ್ಲಂಘಿಸಿದಂತೆ ತೋರುತ್ತಿಲ್ಲ ಎಂದೂ ಸುಪ್ರೀಂ ಹೇಳಿದೆ.

ಶಿಕ್ಷಣ ಸಂಸ್ಥೆಯೊಂದು ಸಮವಸ್ತ್ರ ನಿಯಮ ರೂಪಿಸುವ ಅಧಿಕಾರವಿಲ್ಲವಾದರೆ, ಮಕ್ಕಳು ಶಾಲೆಗೆ ಮಿಡೀಸ್​, ಸ್ಕರ್ಟ್​ ಸೇರಿದಂತೆ ಏನನ್ನೂ ಬೇಕಾದರೂ ಹಾಕಿಕೊಂಡು ಬರಬಹುದೇ ಎಂದು ನ್ಯಾಯಮೂರ್ತಿ ಹೇಮಂತ್​ ಗುಪ್ತಾ ಅವರು ಪ್ರಶ್ನೆ ಕೇಳಿದರು.

ಪ್ರತಿಯೊಬ್ಬ ವ್ಯಕ್ತಿ ತನ್ನ ಧರ್ಮವನ್ನು ಆಚರಿಸುವ ಹಕ್ಕನ್ನು ಹೊಂದಿದ್ದರೂ, ಡ್ರೆಸ್ ಕೋಡ್ ಅನ್ನು ರೂಪಿತವಾದ ಶಿಕ್ಷಣ ಸಂಸ್ಥೆಯೊಳಗೆ ಅದನ್ನು ಆಚರಿಸಬಹುದೇ ಎಂಬುದು ಪ್ರಕರಣದ ಸಮಸ್ಯೆಯಾಗಿದೆ ಎಂದು ಪೀಠ ಹೇಳಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 7 ರಂದು, ಮಧ್ಯಾಹ್ನ 2 ಗಂಟೆಗೆ ಮುಂದೂಡಿತು.

ಫಿರ್ಯಾದುದಾರರ ಪರವಾಗಿ ಹಿರಿಯ ವಕೀಲ ರಾಜೀವ್​ ಧವನ್ ಮತ್ತು ಎಜಾಜ್​ ಮಕ್ಬೂಲ್​ ಮತ್ತು ಸಂಜಯ್​ ಹೆಗ್ಡೆ ವಾದ ಮಂಡಿಸಿದರು. ರಾಜ್ಯ ಸರ್ಕಾರದ ಪರವಾಗಿ ಅಡ್ವೋಕೇಟ್​ ಜನರಲ್​ ಪಿ.ನಾವದಗಿ, ಹೆಚ್ಚುವರಿ ಸಾಲಿಸಿಟರ್​ ಜನರಲ್​ ಕೆಎಂ ನಟರಾಜ್​ ಅವರು ವಾದ ಮಂಡಿಸಿದರು.

ಈ ಹಿಂದಿನ ವಿಚಾರಣೆಯನ್ನು ಸರ್ಕಾರದ ಪರ ವಕೀಲರ ಕೋರಿಕೆಯ ಮೇರೆಗೆ ಮುಂದೂಡಲಾಗಿತ್ತು. ಅಲ್ಲದೇ, ಮುಂದೂಡಲು ಮನವಿ ಮಾಡಿದ ಕಾರಣ ಕೇಳಿ ರಾಜ್ಯ ಸರ್ಕಾರಕ್ಕೆ ಸುಪ್ರೀಂ ನೋಟಿಸ್​ ಜಾರಿ ಮಾಡಿತ್ತು. ತುರ್ತು ವಿಚಾರಣೆ ನಡೆಸಲು ಕೇಳಿ ಈಗ ಮುಂದೂಡಿ ಎಂದರೆ ಹೇಗೆ ಎಂದು ಬೇಸರ ವ್ಯಕ್ತಪಡಿಸಿತ್ತು.

ಪ್ರಕರಣವೇನು?:ಉಡುಪಿಯ ಕಾಲೇಜೊಂದರಲ್ಲಿ ಶುರುವಾದ ಈ ಹಿಜಾಬ್​ ವಿವಾದ ಇದೀಗ ದೇಶ ಸೇರಿದಂತೆ ವಿದೇಶಕ್ಕೂ ಇದು ಹಬ್ಬಿದೆ. ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜಿಗೆ ಹಿಜಾಬ್​ ಧರಿಸಿ ಬಂದಿದ್ದನ್ನು ಪ್ರಶ್ನಿಸಲಾಗಿತ್ತು. ಬಳಿಕ ಶಾಲಾ ಅಭಿವೃದ್ಧಿ ಸಮಿತಿ ಕಾಲೇಜಿನಲ್ಲಿ ಹಿಜಾಬ್​ ಧರಿಸಿ ಬರುವುದನ್ನು ನಿಷೇಧಿಸಿತ್ತು. ಬಳಿಕ ಸರ್ಕಾರವೂ ಕೂಡ ಸಮವಸ್ತ್ರ ನಿಯಮ ರೂಪಿಸುವ ಹಕ್ಕು ಸಮಿತಿಗಳಿಗಿದೆ ಎಂಬ ಆದೇಶ ಹೊರಡಿಸಿತ್ತು.

ಇದರ ವಿರುದ್ಧ ಹೈಕೋರ್ಟ್​ನಲ್ಲಿ ದಾವೆ ಹೂಡಲಾಗಿತ್ತು. ಅರ್ಜಿಯ ವಿಚಾರಣೆ ನಡೆಸಿದ ಆಗಿನ ಮುಖ್ಯ ನ್ಯಾಯಮೂರ್ತಿಯಾಗಿದ್ದ ರಿತು ರಾಜ್ ಅವಸ್ತಿ ಮತ್ತು ನ್ಯಾಯಮೂರ್ತಿಗಳಾದ ಕೃಷ್ಣ ಎಸ್. ದೀಕ್ಷಿತ್ ಮತ್ತು ಜೆಎಂ ಖಾಜಿ ಅವರಿದ್ದ ತ್ರಿಸದಸ್ಯ ಪೀಠವು ಶಾಲಾ-ಕಾಲೇಜುಗಳ ತರಗತಿಯೊಳಗೆ ಹಿಜಾಬ್ ಧರಿಸುವುದನ್ನು ನಿಷೇಧಿಸುವ ಅಧಿಕಾರ ಸರ್ಕಾರಿ ಕಾಲೇಜುಗಳ ಅಭಿವೃದ್ಧಿ ಸಮಿತಿಗಳಿಗಿದೆ ಎಂಬ ರಾಜ್ಯ ಸರ್ಕಾರದ ಆದೇಶವನ್ನು ಎತ್ತಿಹಿಡಿದು ಮಾರ್ಚ್ 15 ರಂದು ತೀರ್ಪು ನೀಡಿತ್ತು.

ಓದಿ:ಬಸವಸಿದ್ಧಲಿಂಗ ಸ್ವಾಮೀಜಿ ಆತ್ಮಹತ್ಯೆ​: ಆಡಿಯೋದಲ್ಲಿ ಮಾತನಾಡಿದ ಮಹಿಳೆಯರ ಬಂಧನಕ್ಕೆ ಭಕ್ತರ ಪಟ್ಟು

Last Updated : Sep 5, 2022, 5:00 PM IST

ABOUT THE AUTHOR

...view details