ನವದೆಹಲಿ:ಇಲ್ಲಿನ ಮಂಡೋಲಿ ಜೈಲಿನಿಂದ ತಮ್ಮನ್ನು ಸ್ಥಳಾಂತರಿಸಿ ದೇಶದ ಇತರ ಜೈಲಿಗೆ ಸ್ಥಳಾಂತರ ಮಾಡುವಂತೆ ಕೋರಿ ವಂಚಕ ಸುಕೇಶ್ ಚಂದ್ರಶೇಖರ್ ಮನವಿ ಕುರಿತು ಸುಪ್ರೀಂ ಕೋರ್ಟ್ ಕೇಂದ್ರ ಮತ್ತು ದೆಹಲಿ ಸರ್ಕಾರ ಪ್ರತಿಕ್ರಿಯೆ ಕೋರಿದೆ.
ಮಂಡೋಲಿ ಕಾರಾಗೃಹದಲ್ಲಿ ಸುಕೇಶ್ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಇಲ್ಲಿ ಅವರಿಗೆ ಜೀವ ಭಯ ಇದೆ ಎಂಬ ಅವರ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. ಈ ವಾದ ಆಲಿಸಿದ ನ್ಯಾ. ಅಜಯ್ ರಸ್ತೋಗಿ ಮತ್ತು ಸಿಟಿ ರವಿ ಕುಮಾರ್ ಅವರನ್ನ ಒಳಗೊಂಡ ಪೀಠ, ಚಂದ್ರಶೇಶರ್ ಅವರ ಎರಡು ಪ್ರತ್ಯೇಕ ಅರ್ಜಿಯನ್ನು ಆಲಿಸಿದೆ. ಈ ವೇಳೆ ಜೈಲಿನಿಂದ ಶಿಫ್ಟ್ ಮಾಡುವುದು ಮತ್ತು ಅವರ ವಕೀಲರನ್ನು ಭೇಟಿ ಮಾಡುವಂತೆ ತಿಳಿಸಿದೆ.
ದೇಶಾದ್ಯಂತ ಆರು ನಗರಗಳಲ್ಲಿ ಅವರ ವಿರುದ್ಧ 28 ಪ್ರಕರಣಗಳು ಬಾಕಿ ಉಳಿದಿವೆ. ಈ ಸಂಬಂಧ ಅವರು ದೆಹಲಿ ಜೈಲು ನಿಯಮಗಳ ಅಡಿ ವಾರಕ್ಕೆ ಎರಡು ಬಾರಿ 30 ನಿಮಿಷಗಳಂತೆ ಪ್ರತಿದಿನ 60 ನಿಮಿಷಗಳ ಕಾಲ ತಮ್ಮ ವಕೀಲರನ್ನು ಭೇಟಿ ಮಾಡಬೇಕಾಗುತ್ತದೆ ಎಂದು ಸುಕೇಶ್ ಪರ ವಕೀಲರು ಹೇಳಿದರು.