ನವದೆಹಲಿ: ವಿಶ್ವಾಸ ಮತಯಾಚನೆ, ಸ್ಪೀಕರ್ ನೇಮಕ ಮತ್ತು 16 ಬಂಡಾಯ ಶಾಸಕರ ವಿರುದ್ಧದ ಅನರ್ಹತೆ ಅರ್ಜಿಗಳಿಗೆ ಸಂಬಂಧಿಸಿದ ವಿಚಾರಣೆ ಇಂದು ಸುಪ್ರೀಂಕೋರ್ಟ್‌ನಲ್ಲಿ ನಡೆಯಲಿದೆ. ಈ ಅರ್ಜಿಗಳ ವಿಚಾರಣೆಯ ಬಳಿಕ ಶಿಂದೆ ಸಂಪುಟ ವಿಸ್ತರಿಸುವ ನಿರೀಕ್ಷೆಯಿದೆ. ಏಕನಾಥ್ ಶಿಂದೆ ಮತ್ತು ಮತ್ತು ಅವರ ಜೊತೆಗಿರುವ ಬಂಡಾಯ ಶಾಸಕರು ಮಹಾರಾಷ್ಟ್ರ ವಿಧಾನಸಭೆ ಪ್ರವೇಶಿಸದಂತೆ ಆದೇಶಿಸಬೇಕೆಂದು ಶಿವಸೇನೆಯ ಮುಖ್ಯ ವಿಪ್ ಸುನೀಲ್ ಪ್ರಭು ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಏಕನಾಥ್ ಶಿಂದೆ ಸರ್ಕಾರದ ಭವಿಷ್ಯ ಇಂದು ಸುಪ್ರೀಂಕೋರ್ಟ್‌ನಲ್ಲಿ ನಿರ್ಧಾರ - ಏಕನಾಥ್ ಶಿಂದೆ ಆಡಳಿತದ ಭವಿಷ್ಯ ಇಂದು ಸುಪ್ರೀಂ ಕೋರ್ಟ್ನಲ್ಲಿ ನಿರ್ಧಾರ
ಮಹಾರಾಷ್ಟ್ರದ ರಾಜಕೀಯ ವಿದ್ಯಮಾನಗಳ ತಿರುವಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ಇಂದು ಸುಪ್ರೀಂಕೋರ್ಟ್‌ನಲ್ಲಿ ನಡೆಯಲಿದೆ.
Supreme Court