ಅಹಮದಾಬಾದ್:ವಿಮಾನ ನಿಲ್ದಾಣಕ್ಕೆ ತಡವಾಗಿ ಬಂದಿದ್ದ ಸಬ್ ಇನ್ಸ್ಪೆಕ್ಟರ್ಗೆ ಬೋರ್ಡಿಂಗ್ ಪಾಸ್ ನೀಡದ ಸ್ಪೈಸ್ ಜೆಟ್ ಸಿಬ್ಬಂದಿಗೆ ಕಪಾಳ ಮೋಕ್ಷ ಮಾಡಿರುವ ಘಟನೆ ಇಲ್ಲಿನ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ನವೆಂಬರ್ 17ರಂದು ಗುಜರಾತ್ನ ಸಬ್ಇನ್ಸ್ಪೆಕ್ಟರ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಆತ ಸ್ಪೈಸ್ ಜೆಟ್ ಎಸ್ಜಿ-8194 ವಿಮಾನದಲ್ಲಿ ದೆಹಲಿಗೆ ಟಿಕೆಟ್ ಬುಕ್ ಮಾಡಿಸಲು ಟಿಕೆಟ್ ಕೌಂಟರ್ ಬಳಿ ಬಂದಿದ್ದಾರೆ. ಆದರೆ ಸಮಯ ಮೀರಿದ್ದ ಹಿನ್ನೆಲೆ ಬೋರ್ಡಿಂಗ್ ಟಿಕೆಟ್ ನೀಡಲು ಸಿಬ್ಬಂದಿ ನಿರಾಕರಿಸಿದ್ದಾರೆ. ಈ ಹಿನ್ನೆಲೆ ವಾಗ್ವಾದ ನಡೆದು ಪೊಲೀಸ್ ಅಧಿಕಾರಿ ಸಿಬ್ಬಂದಿಗೆ ಕಪಾಳ ಮೋಕ್ಷ ಮಾಡಿದ್ದಾರೆ ಎಂದು ವಿಮಾನ ನಿಲ್ದಾಣ ಅಧಿಕಾರಿ ಮಾಹಿತಿ ನೀಡಿದ್ದಾರೆ.